ಶಿವಮೊಗ್ಗ ವಿಮಾನ ನಿಲ್ದಾಣ : ಕನ್ನಡ ಮಾಹಿತಿ ಫಲಕದ ಫೋಟೋ ಶೇರ್ ಮಾಡಿದ ಸಚಿವರು! *’ಕನ್ನಡ ನೆಲ – ಜಲ – ಭಾಷೆಯ ವಿಷಯದಲ್ಲಿ ನಮ್ಮದು ಒಗ್ಗಟ್ಟಿನ ಧ್ವನಿ’ : ಎಂ. ಬಿ. ಪಾಟೀಲ್

ಶಿವಮೊಗ್ಗ ವಿಮಾನ ನಿಲ್ದಾಣ : ಕನ್ನಡ ಮಾಹಿತಿ ಫಲಕದ ಫೋಟೋ ಶೇರ್ ಮಾಡಿದ ಸಚಿವರು!

ಶಿವಮೊಗ್ಗ, ಸೆ. 3: ಶಿವಮೊಗ್ಗ ವಿಮಾನ ನಿಲ್ದಾಣದ ಡಿಜಿಟಲ್ ಮಾಹಿತಿ ಫಲಕದಲ್ಲಿ, ಕನ್ನಡ ಭಾಷೆಯಲ್ಲಿ ವಿವರ ಬಿತ್ತರವಾಗುತ್ತಿರುವ ಫೋಟೋವನ್ನು ಮೂಲಸೌಕರ್ಯ ಖಾತೆ ಸಚಿವ ಎಂ.ಬಿ.ಪಾಟೀಲ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶನಿವಾರ ಶೇರ್ ಮಾಡಿದ್ದಾರೆ.
‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ… ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿನ ಮಾಹಿತಿ ಫಲಕ… ನೆಲ-ಜಲ-ಭಾಷೆಯ ವಿಷಯದಲ್ಲಿ ನಮ್ಮದು ಒಗ್ಗಟ್ಟಿನ ಧ್ವನಿ…’ ಎಂಬ ಸಂದೇಶವನ್ನು ಪೋಟೊದ ಜೊತೆ ಸಚಿವರು ಟ್ವೀಟ್ ಮಾಡಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣ : ಕನ್ನಡ ಮಾಹಿತಿ ಫಲಕದ ಫೋಟೋ ಶೇರ್ ಮಾಡಿದ ಸಚಿವರು! Read More