ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಸೇರಿದ ಅಡಕೆ ತೋಟದಲ್ಲಿ ಪುನುಗು ಬೆಕ್ಕು ಸಾಯಿಸಿ ವಾಮಾಚಾರ! ‘ಕುಟುಂಬದವರಿಗೆ ಕೆಡಕುಂಟು ಮಾಡಲು ವಿರೋಧಿಗಳಿಂದ ಮಾಟಮಂತ್ರ’ – ಬಿ.ವೈ.ರಾಘವೇಂದ್ರ ಆರೋಪ ಶಿಕಾರಿಪುರ, ಮೇ 15: ಶಿಕಾರಿಪುರ ತಾಲೂಕಿನ ಬಂಡಿಭೈರನಹಳ್ಳಿ ಮಜಿರೆ ಸಿದ್ದಾಪುರ ಗ್ರಾಮದಲ್ಲಿರುವ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ಸೇರಿದ ಅಡಕೆ ತೋಟದಲ್ಲಿ ವಾಮಾಚಾರ ನಡೆಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ! ಈ ಸಂಬಂಧ ತೋಟದದಲ್ಲಿ ಕಾರ್ಯನಿರ್ವಹಿಸುವ ಎಸ್.ಕೆ.ರಮೇಶ್ ಅವರು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್.ಐ.ಆರ್. ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಘಟನೆ ಹಿನ್ನೆಲೆ: ಮೇ 11 ರಂದು ರಾತ್ರಿ ಸರಿಸುಮಾರು 10 ಗಂಟೆಯಿಂದ 10.30 ರೊಳಗೆ ವಾಮಾಚಾರ ನಡೆಸಲಾಗಿದೆ. ಪುನಗು ಬೆಕ್ಕನ್ನು ಸಾಯಿಸಿ ತೋಟದಲ್ಲಿ ಗುಂಡಿ ತೆಗೆದು ಹೂಳಲಾಗಿದೆ. ಅದರ ಮೇಲೆ ಹೂವು ಮತ್ತೀತರ ಪೂಜಾ ಸಾಮಗ್ರಿಗಳನ್ನು ಹಾಕಲಾಗಿದೆ. ಅಂದು ರಾತ್ರಿಯೇ ವಾಮಾಚಾರ ನಡೆದಿರುವ ವಿಷಯ ಬಿ.ಎಸ್.ಯಡಿಯೂರಪ್ಪರ ಕುಟುಂಬ ಸದಸ್ಯರಿಗೆ ಗೊತ್ತಾಗಿದೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಸೇರಿದ ಅಡಕೆ ತೋಟದಲ್ಲಿ ಪುನುಗು ಬೆಕ್ಕು ಸಾಯಿಸಿ ವಾಮಾಚಾರ!

ಶಿಕಾರಿಪುರ, ಮೇ 15: ಶಿಕಾರಿಪುರ ತಾಲೂಕಿನ ಬಂಡಿಭೈರನಹಳ್ಳಿ ಮಜಿರೆ ಸಿದ್ದಾಪುರ ಗ್ರಾಮದಲ್ಲಿರುವ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ಸೇರಿದ ಅಡಕೆ ತೋಟದಲ್ಲಿ ವಾಮಾಚಾರ ನಡೆಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ!

ಈ ಸಂಬಂಧ ತೋಟದದಲ್ಲಿ ಕಾರ್ಯನಿರ್ವಹಿಸುವ ಎಸ್.ಕೆ.ರಮೇಶ್ ಅವರು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್.ಐ.ಆರ್. ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಘಟನೆ ಹಿನ್ನೆಲೆ: ಮೇ 11 ರಂದು ರಾತ್ರಿ ಸರಿಸುಮಾರು 10 ಗಂಟೆಯಿಂದ 10.30 ರೊಳಗೆ ವಾಮಾಚಾರ ನಡೆಸಲಾಗಿದೆ. ಪುನಗು ಬೆಕ್ಕನ್ನು ಸಾಯಿಸಿ ತೋಟದಲ್ಲಿ ಗುಂಡಿ ತೆಗೆದು ಹೂಳಲಾಗಿದೆ. ಅದರ ಮೇಲೆ ಹೂವು ಮತ್ತೀತರ ಪೂಜಾ ಸಾಮಗ್ರಿಗಳನ್ನು ಹಾಕಲಾಗಿದೆ. ಅಂದು ರಾತ್ರಿಯೇ ವಾಮಾಚಾರ ನಡೆದಿರುವ ವಿಷಯ ಬಿ.ಎಸ್.ಯಡಿಯೂರಪ್ಪರ ಕುಟುಂಬ ಸದಸ್ಯರಿಗೆ ಗೊತ್ತಾಗಿದೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಸೇರಿದ ಅಡಕೆ ತೋಟದಲ್ಲಿ ಪುನುಗು ಬೆಕ್ಕು ಸಾಯಿಸಿ ವಾಮಾಚಾರ! Read More