Header Ad Left
Udaya Saakshi
Header Ad Right
Skip to content
July 26, 2026
Udaya Saakshi

Udaya Saakshi

News Website

advertisement

  • Home
  • About
  • News
  • Videos
Main Menu

Tag: #Industrial area built at a cost of crores of rupees is falling into disrepair in Shivamogga – Will CM D K Shivakumar pay attention?

ಶಿವಮೊಗ್ಗದಲ್ಲಿ ಪಾಳು ಬೀಳುತ್ತಿರುವ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೈಗಾರಿಕಾ ಪ್ರದೇಶ - ಗಮನಹರಿಸುವರೆ ಸಿಎಂ ಡಿ ಕೆ ಶಿವಕುಮಾರ್? ವರದಿ : ಬಿ. ರೇಣುಕೇಶ್ ಶಿವಮೊಗ್ಗ, ಜೂನ್ 08: ಶಿವಮೊಗ್ಗದ ಹೊರವಲಯ ದೇವಕಾತಿಕೊಪ್ಪದಲ್ಲಿ ನಿರ್ಮಿಸಿರುವ ಕೈಗಾರಿಕಾ ವಸಾಹತು ಪ್ರದೇಶವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಸಂಸ್ಥೆ (ಕೆಐಎಡಿಬಿ) ಯ ದಿವ್ಯ ನಿರ್ಲಕ್ಷ್ಯದಿಂದ ಪಾಳು ಬೀಳಲಾರಂಭಿಸಿದೆ. ಕೈಗಾರಿಕೋದ್ಯಮಿಗಳು ತೊಂದರೆಗೆ ಸಿಲುಕುವಂತಾಗಿದೆ! ಸದರಿ ಕೈಗಾರಿಕಾ ಪ್ರದೇಶಕ್ಕೆ ಇಲ್ಲಿಯವರೆಗೂ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ‘ಪರಿಸರ ವಿಮೋನಚನಾ ಪತ್ರ’ ದೊರಕಿಲ್ಲ. ಇದರಿಂದ ಹೊಸದಾಗಿ ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ದೊರಕುತ್ತಿಲ್ಲ. ಸದರಿ ಪ್ರದೇಶದಲ್ಲಿ ನಿವೇಶನ ಹೊಂದಿರುವ ಕೈಗಾರಿಕೋದ್ಯಮಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ನೂರಾರು ಕೋಟಿ ರೂ. ವೆಚ್ಚ : ದೇವಕಾತಿಕೊಪ್ಪ ಹಾಗೂ ಸಿದ್ಲಿಪುರ ಗ್ರಾಮ ವ್ಯಾಪ್ತಿಗಳಲ್ಲಿ 2013-14 ನೇ ಸಾಲಿನಲ್ಲಿ 456 ಎಕರೆ ಭೂಮಿಯನ್ನು ಕೆಐಎಡಿಬಿ ಸಂಸ್ಥೆ ಭೂ ಸ್ವಾದೀನ ಪಡಿಸಿಕೊಂಡಿತ್ತು. ಇದರಲ್ಲಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಸಂಸ್ಥೆಗೆ, 80 ಎಕರೆ, ಕೆಎಸ್ಎಸ್ಐಡಿ ಸಂಸ್ಥೆಗೆ 66 ಎಕರೆ, ಕಾರ್ಮಿಕ ಇಲಾಖೆಗೆ 10 ಎಕರೆ ಭೂಮಿ ನೀಡಲಾಗಿತ್ತು. ಉಳಿದಂತೆ ಕೆಐಎಡಿಬಿ ಸಂಸ್ಥೆಯು 2018-19 ರಲ್ಲಿ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ದೇವಕಾತಿಕೊಪ್ಪದ 250 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ಲೇಔಟ್ ರಚನೆ ಮಾಡಿತ್ತು. ನಿವೇಶನ ಕೂಡ ಹಂಚಿಕೆ ಮಾಡಿತ್ತು. ಅನುಮತಿ ಪಡೆಯಲಿಲ್ಲ : ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿ ಸಮೀಪದಲ್ಲಿ ಸದರಿ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶವಿರುವುದರಿಂದ, ನಿಯಮಾನುಸಾರ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ‘ಪರಿಸರ ವಿಮೋನಚನಾ ಪತ್ರ’ವನ್ನು ಕೆಐಎಡಿಬಿ ಸಂಸ್ಥೆ ಪಡೆದುಕೊಳ್ಳಬೇಕಾಗಿತ್ತು. ಆದರೆ ಅನುಮತಿ ಪಡೆದುಕೊಂಡಿರಿಲಿಲ್ಲ. ಮತ್ತೊಂದೆಡೆ, ಸದರಿ ಸ್ಥಳದಲ್ಲಿ ಕೈಗಾರಿಕೆಗಳ ನಿರ್ಮಾಣಕ್ಕೆ ಕೆಐಎಡಿಬಿ ಸಂಸ್ಥೆಯು ಅನುಮತಿ ನೀಡಿತ್ತು. ಅದರಂತೆ ಸರಿಸುಮಾರು 20 ಕೈಗಾರಿಕೆ ಸಂಸ್ಥೆಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ತದನಂತರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು, ಪರಿಸರ ವಿಮೋಚನಾ ಪತ್ರ ಪಡೆಯದೆ ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಸೂಚಿಸಿತ್ತು. ತದನಂತರ ಕೈಗಾರಿಕೆಗಳ ಸ್ಥಾಪನೆಗೆ ಕೆಐಎಡಿಬಿ ಸಂಸ್ಥೆ ಅನುಮತಿ ನೀಡುತ್ತಿಲ್ಲ. ಪರಿಹಾರವಾಗಿಲ್ಲ : ಇದರಿಂದ ಕಳೆದ ಹಲವು ವರ್ಷಗಳಿಂದ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ಹೊಸ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಕೆಐಎಡಿಬಿ ಸಂಸ್ಥೆಯು ಪರಿಸರ ವಿಮೋಚನಾ ಪತ್ರ ಪಡೆದುಕೊಳ್ಳುವ ನಿಟ್ಟಿನಲ್ಲಿ ಗಂಭೀರ ಚಿತ್ತ ಹರಿಸಿಲ್ಲ. ಇದರಿಂದ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೈಗಾರಿಕಾ ಪ್ರದೇಶವು ಪಾಳು ಬೀಳಲಾರಂಭಿಸಿದೆ. ಸಿಎಂ ಗಮನಿಸಲಿ : ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ಪರಿಸರ ವಿಮೋಚನಾ ಪತ್ರ ಪಡೆಯುವ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ಈ ಕುರಿತಂತೆ ಸಿಎಂ ಡಿ ಕೆ ಶಿವಕುಮಾರ್ ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಜೊತೆ ಸಮಾಲೋಚಿಸಬೇಕಾಗಿದೆ. ಕಾಲಮಿತಿಯೊಳಗೆ ಸಮಸ್ಯೆಗೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕಾಗಿದೆ ಎಂದು ಕೆಲ ಕೈಗಾರಿಕೋದ್ಯಮಿಗಳು ಆಗ್ರಹಿಸುತ್ತಾರೆ.
Shivamogga / ಶಿವಮೊಗ್ಗ

shimoga news | ಶಿವಮೊಗ್ಗದಲ್ಲಿ ಪಾಳು ಬೀಳುತ್ತಿರುವ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೈಗಾರಿಕಾ ಪ್ರದೇಶ – ಗಮನಹರಿಸುವರೆ ಸಿಎಂ ಡಿ ಕೆ ಶಿವಕುಮಾರ್?

June 8, 2026June 8, 2026 - by B. Renukesha - Leave a Comment

Industrial area built at a cost of crores of rupees is falling into disrepair in Shivamogga – Will CM D K Shivakumar pay attention?
ಶಿವಮೊಗ್ಗದಲ್ಲಿ ಪಾಳು ಬೀಳುತ್ತಿರುವ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೈಗಾರಿಕಾ ಪ್ರದೇಶ – ಗಮನಹರಿಸುವರೆ ಸಿಎಂ ಡಿ ಕೆ ಶಿವಕುಮಾರ್?

shimoga news | ಶಿವಮೊಗ್ಗದಲ್ಲಿ ಪಾಳು ಬೀಳುತ್ತಿರುವ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೈಗಾರಿಕಾ ಪ್ರದೇಶ – ಗಮನಹರಿಸುವರೆ ಸಿಎಂ ಡಿ ಕೆ ಶಿವಕುಮಾರ್? Read More

Latest YouTube Video

ಶಿವಮೊಗ್ಗ : 26/07/2026 ರ ಮಧ್ಯಾಹ್ನ ಬಿದ್ದ ಮಳೆ. #shimoga #shivamogga #rain #monsoon #malnad

ಶಿವಮೊಗ್ಗ : 26/07/2026 ರ ಮಧ್ಯಾಹ್ನ ಬಿದ್ದ ಮಳೆ. #shimoga #shivamogga #rain #monsoon #malnad

July 26, 2026

Follow Us:

Join our WhatsApp group

Latest Posts

Kuvempu University

kuvempu university news | ಕುವೆಂಪು ವಿಶ್ವವಿದ್ಯಾಲಯ ಪಿಜಿ, ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

July 25, 2026

Shivamogga: Heavy rain before Diwali! ಶಿವಮೊಗ್ಗ : ದೀಪಾವಳಿಗೂ ಮುನ್ನ ಭರ್ಜರಿ ಮಳೆ!

malnad rain news | ಮಳೆ ಕೊರತೆ : ಅಂಜನಾಪುರ, ಅಂಬ್ಲಿಗೋಳ ಜಲಾಶಯ ವ್ಯಾಪ್ತಿಯ ರೈತರಿಗೆ ನೀರಾವರಿ ಇಲಾಖೆ ಮನವಿ

July 25, 2026July 25, 2026

shimoga tunga river

shimoga rain news | ಮಲೆನಾಡಲ್ಲಿ ಮುಂದುವರಿದ ಮುಂಗಾರು ಮಳೆಯ ಕಣ್ಣಾಮುಚ್ಚಾಲೆ : ಲಿಂಗನಮಕ್ಕಿ, ಭದ್ರಾ ಡ್ಯಾಂ ನೀರಿನ ಸಂಗ್ರಹದಲ್ಲಿ ಭಾರೀ ಕುಸಿತ!

July 25, 2026

shimoga news | ಶಿವಮೊಗ್ಗ : ಜೆ.ಎನ್.ಎನ್.ಸಿ.ಇ: ‘ಯುಗ್ಮಾ ಟೆಕ್‌ಫೆಸ್ಟ್-2.0’ ಎಐ ಹ್ಯಾಕಥಾನ್ ಉದ್ಘಾಟನೆ

July 24, 2026July 24, 2026

power cut

shimoga power cut news | ಶಿವಮೊಗ್ಗ ನಗರದ ವಿವಿಧೆಡೆ ಜುಲೈ 25 ರಂದು ವಿದ್ಯುತ್ ವ್ಯತ್ಯಯ

July 24, 2026

ಶಿವಮೊಗ್ಗ ತಾಲೂಕಿನ ಕೊಮ್ಮನಾಳು – ಬನ್ನಿಕೆರೆ ನಡುವಿನ ರಸ್ತೆ Villagers demand to fix the road chaos between Kommanalu - Bannikere in Shimoga taluk!

shimoga taluk news | ಶಿವಮೊಗ್ಗ ತಾಲೂಕಿನ ಕೊಮ್ಮನಾಳು – ಬನ್ನಿಕೆರೆ ನಡುವಿನ ರಸ್ತೆ ಅವ್ಯವಸ್ಥೆ ಸರಿಪಡಿಸಲು ಗ್ರಾಮಸ್ಥರ ಆಗ್ರಹ!

July 24, 2026

Voter List Revision : Special Campaign Day on July 25-26 at Shivamogga Municipal Corporation Office | Shivamogga, July 23: The Municipal Corporation administration has intensified the process of Special Comprehensive Revision (SIR) of the Voter List in the Shivamogga City Assembly constituency.

shimoga palike SIR news | ಮತದಾರರ ಪಟ್ಟಿ ಪರಿಷ್ಕರಣೆ : ಶಿವಮೊಗ್ಗ ಪಾಲಿಕೆ ಕಚೇರಿ ಆವರಣದಲ್ಲಿ ಜುಲೈ 25 – 26 ರಂದು ವಿಶೇಷ ಪ್ರಚಾರ ದಿನ

July 24, 2026July 24, 2026

crime news

soraba news | ಕುರಿ ಶೆಡ್ ನಿರ್ಮಿಸುವುದಾಗಿ ಲಕ್ಷಾಂತರ ರೂ. ವಂಚಿಸಿದ್ದ ಆರೋಪಿಯ ಬಂಧನ!

July 23, 2026July 23, 2026

sagara college student missing

sagara news | ಸಾಗರ – ಮನೆಯಿಂದ ಕಾಲೇಜ್’ಗೆ ಹೋದ ಬಾಲಕ ಕಣ್ಮರೆ : ಪತ್ತೆಗೆ ಸಹಕರಿಸಲು ಪೊಲೀಸರ ಮನವಿ

July 23, 2026July 23, 2026

news update | ದೆಹಲಿ ಎಐಸಿಸಿ ಕಚೇರಿಯಲ್ಲಿ ಭದ್ರಾವತಿಯ ಬಿ ವಿ ಶ್ರೀನಿವಾಸ್ ಗೆ ಶಿವಮೊಗ್ಗ ಕಾಂಗ್ರೆಸ್ ಮುಖಂಡರಿಂದ ಸನ್ಮಾನ

July 23, 2026

Recent Posts

  • kuvempu university news | ಕುವೆಂಪು ವಿಶ್ವವಿದ್ಯಾಲಯ ಪಿಜಿ, ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
  • malnad rain news | ಮಳೆ ಕೊರತೆ : ಅಂಜನಾಪುರ, ಅಂಬ್ಲಿಗೋಳ ಜಲಾಶಯ ವ್ಯಾಪ್ತಿಯ ರೈತರಿಗೆ ನೀರಾವರಿ ಇಲಾಖೆ ಮನವಿ
  • shimoga rain news | ಮಲೆನಾಡಲ್ಲಿ ಮುಂದುವರಿದ ಮುಂಗಾರು ಮಳೆಯ ಕಣ್ಣಾಮುಚ್ಚಾಲೆ : ಲಿಂಗನಮಕ್ಕಿ, ಭದ್ರಾ ಡ್ಯಾಂ ನೀರಿನ ಸಂಗ್ರಹದಲ್ಲಿ ಭಾರೀ ಕುಸಿತ!
  • shimoga news | ಶಿವಮೊಗ್ಗ : ಜೆ.ಎನ್.ಎನ್.ಸಿ.ಇ: ‘ಯುಗ್ಮಾ ಟೆಕ್‌ಫೆಸ್ಟ್-2.0’ ಎಐ ಹ್ಯಾಕಥಾನ್ ಉದ್ಘಾಟನೆ
  • shimoga power cut news | ಶಿವಮೊಗ್ಗ ನಗರದ ವಿವಿಧೆಡೆ ಜುಲೈ 25 ರಂದು ವಿದ್ಯುತ್ ವ್ಯತ್ಯಯ
Copyright © 2026 Udaya Saakshi.
Powered by WordPress and HitMag.