bhadravati news | ಭದ್ರಾವತಿಯ ವಿವಿಧೆಡೆ ದಿಡೀರ್ ದಾಳಿ : 03 ಬಾಲ ಕಾರ್ಮಿಕರು, 02 ಕಿಶೋರ ಕಾರ್ಮಿಕರ ರಕ್ಷಣೆ!

Bhadravati surprise raids: Rescue of 03 child laborers and 02 adolescent workers! | Bhadravati September 10: Acting on confirmed information that child laborers and adolescent workers were engaged in work in Bhadravati taluk a joint special inspection operation was carried out by a team of officials on 09-09-2026 at various locations. In total, 05 children were rescued during the operation.

ಭದ್ರಾವತಿ (bhadravathi), ಸೆಪ್ಟೆಂಬರ್ 10: ಭದ್ರಾವತಿ ತಾಲೂಕಿನಲ್ಲಿ ಬಾಲಕಾರ್ಮಿಕರು ಮತ್ತು ಕಿಶೋರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ದಿನಾಂಕ 09-09-2026 ರಂದು ವಿವಿಧೆಡೆ ಅಧಿಕಾರಿಗಳ ತಂಡವು ಜಂಟಿ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿ, ಒಟ್ಟು 05 ಮಕ್ಕಳನ್ನು ರಕ್ಷಿಸಿದೆ.

ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಆಶ್ರಿತಾ ಸ್ವಯಂ ಸೇವಾ ಸಂಸ್ಥೆ (ಭದ್ರಾವತಿ) ಯವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಭದ್ರಾವತಿ ನಗರದ ವಿವಿಧ ವಾಣಿಜ್ಯ ಸಂಸ್ಥೆಗಳು, ಗ್ಯಾರೇಜ್ ಗಳು ಹಾಗೂ ಗ್ರಾಮೀಣ ಪ್ರದೇಶದ ಅಲೆಮಾರಿ ತಾಣಗಳಲ್ಲಿ ಕೈಗೊಂಡ ವಿಶೇಷ ಪರಿಶೀಲನೆ ವೇಳೆ 03 ಬಾಲಕಾರ್ಮಿಕರು ಹಾಗೂ 02 ಕಿಶೋರ ಕಾರ್ಮಿಕರು ಕೆಲಸ ಮಾಡುತ್ತಿರುವುದು ಕಂಡುಬಂದಿದೆ.

ರಕ್ಷಿಸಲ್ಪಟ್ಟ ಮಕ್ಕಳನ್ನು ತಕ್ಷಣವೇ ಕೆಲಸದ ಸ್ಥಳದಿಂದ ಬಿಡುಗಡೆಗೊಳಿಸಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ ದಾಖಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಾಲಕಾರ್ಮಿಕ ನಿಷೇಧ: 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ಯಮಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ.

ಶಿಕ್ಷೆ ಮತ್ತು ದಂಡ: ಬಾಲಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡ ಮಾಲೀಕರಿಗೆ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 20,000 ರೂ. ನಿಂದ 50,000 ರೂ. ಗಳವರೆಗೆ ದಂಡ (ಅಥವಾ ಎರಡನ್ನೂ) ವಿಧಿಸಬಹುದು. ಅಪರಾಧ ಪುನರಾವರ್ತನೆಯಾದರೆ 1 ರಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಪುನರ್ವಸತಿ ನಿಧಿ: ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ತಪ್ಪು ಎಸಗಿದ ಮಾಲೀಕರು ಪ್ರತಿಯೊಂದು ಮಗುವಿಗೆ 20,000 ರೂ. ಗಳನ್ನು ಮಕ್ಕಳ ಪುನರ್ವಸತಿ ಕಲ್ಯಾಣ ನಿಧಿಗೆ ಪಾವತಿಸಬೇಕಾಗುತ್ತದೆ.

ಶಿಕ್ಷಣದ ಹಕ್ಕು: ಉಚಿತ ಮತ್ತು ಕಡ್ಡಾಯ ಶಿಕ್ಷಣವು ಪ್ರತಿಯೊಂದು ಮಗುವಿನ ಹಕ್ಕಾಗಿದ್ದು, ಇದನ್ನು ಒದಗಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

ದೂರು ಸಲ್ಲಿಸಬಹುದಾದ ಇಲಾಖೆಗಳು: ಪೋಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ದೂರು ನೀಡಬಹುದು.

ಸಹಾಯವಾಣಿ ಸಂಖ್ಯೆಗಳು: ಮಕ್ಕಳ ಸಹಾಯವಾಣಿ: 1098 ಕಾರ್ಮಿಕರ ಸಹಾಯವಾಣಿ: 155214 ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ (ಬೆಂಗಳೂರು): 080-22115291/92 ನ್ನು‌ ಸಂಪರ್ಕಿಸಬಹುದು.

Bhadravati surprise raids: Rescue of 03 child laborers and 02 adolescent workers! | Bhadravati September 10: Acting on confirmed information that child laborers and adolescent workers were engaged in work in Bhadravati taluk a joint special inspection operation was carried out by a team of officials on 09-09-2026 at various locations. In total, 05 children were rescued during the operation.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *