ಬೆಂಗಳೂರಿನ ಕೋರ್ಟ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬಿಜಾಪುರ ಜಿಲ್ಲೆಯ ಆರೋಪಿಯನ್ನು ಬಂಧಿಸಿದ ಶಿವಮೊಗ್ಗ ಪೊಲೀಸರು!
ಬೆಂಗಳೂರಿನ ಕೋಕಾ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ, ಬಿಜಾಪುರ ಜಿಲ್ಲೆಯ ಆರೋಪಿಯೋರ್ವನನ್ನು, ಶಿವಮೊಗ್ಗದ ವಿನೋಬನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಿಜಾಪುರ ಜಿಲ್ಲೆ ಇಂಡಿ ತಾಲೂಕು ನಂದ್ರಾಳ ಗ್ರಾಮದ ನಿವಾಸಿ ಏಜಾಸ್ ಪಟೇಲ್ (35) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಜು. 9 ರಂದು ಇಂಡಿ ತಾಲೂಕಿನ ಭೈರವಣಿಗೆ ಗ್ರಾಮದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಕೋರ್ಟ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬಿಜಾಪುರ ಜಿಲ್ಲೆಯ ಆರೋಪಿಯನ್ನು ಬಂಧಿಸಿದ ಶಿವಮೊಗ್ಗ ಪೊಲೀಸರು! Read More
