
sorab | ಸೊರಬ : ಇ – ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಗ್ರಾಪಂ ಪಿಡಿಓ ಲೋಕಾಯುಕ್ತ ಬಲೆಗೆ!
ಸೊರಬ, ಡಿ. 24: ಮನೆಯ ಇ – ಖಾತೆ ಮಾಡಿಕೊಡಲು ವ್ಯಕ್ತಿಯೋರ್ವರಿಂದ 5 ಸಾವಿರ ರೂ. ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ (ಪಿಡಿಓ) ಯನ್ನು, ಲಂಚದ ಹಣದ ಸಮೇತ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದ ಘಟನೆ ಡಿ. 24 ರಂದು ಬೆಳಿಗ್ಗೆ ಸೊರಬ ಪಟ್ಟಣದಲ್ಲಿ ನಡೆದಿದೆ.
ಸೊರಬ ತಾಲೂಕು ಇಂಡುವಳ್ಳಿ ಗ್ರಾಮ ಪಂಚಾಯ್ತಿಯ ಪ್ರಭಾರ ಪಿಡಿಓ ಈಶ್ವರಪ್ಪ ಲೋಕಾಯುಕ್ತ ಬಲೆಗೆ ಬಿದ್ದವರೆಂದು ಗುರುತಿಸಲಾಗಿದೆ. ಸೊರಬ ಪಟ್ಟಣದ ಪೋಸ್ಟ್ ಆಫೀಸ್ ಕಚೇರಿ ಬಳಿ ಬೆಳಿಗ್ಗೆ ಲಂಚ ಪಡೆಯುವ ವೇಳೆ, ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ್ ಚೌಧರಿ ಎಂ ಹೆಚ್ ರವರ ನೇತೃತ್ದಲ್ಲಿ ಇನ್ಸ್’ಪೆಕ್ಟರ್ ಗಳಾದ ಹೆಚ್ ಎಸ್ ಸುರೇಶ್, ಸಿಬ್ಬಂದಿಗಳಾದ ಯೋಗೇಶ್, ಮಂಜುನಾಥ್, ಸುರೇಂದ್ರ, ಪ್ರಶಾಂತ್ ಕುಮಾರ್, ಚೆನ್ನೇಶ್, ದೇವರಾಜ್, ಅರುಣ್ ಕುಮಾರ್, ಅಂಜಲಿ, ಜಯಂತ್, ಪ್ರದೀಪ್ ಅವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಪ್ರಕರಣದ ಹಿನ್ನೆಲೆ : ದೂರುದಾರ ಮೊಹಮ್ಮದ್ ಗೌಸ್ ಎಂಬುವರ ತಂದೆ ಭಾಷಾಸಾಬ್ ಎಂಬುವರಿಗೆ ಇಂಡುವಳ್ಳಿ ಗ್ರಾಮದಲ್ಲಿ ಜಮೀನಿದ್ದು, ಅದರಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ತಾಯಿ ಮಮ್ತಾಜ್ ಹೆಸರಿನಲ್ಲಿ ಇ – ಖಾತೆ ಮಾಡಿಕೊಡುವಂತೆ ಮೊಹಮ್ಮದ್ ಗೌಸ್ ಅವರು ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು.
ಇದರ ಆಧಾರದ ಮೇಲೆ ಪ್ರಭಾರ ಪಿಡಿಓ ಈಶ್ವರಪ್ಪ ಅವರು ಮನೆ ಜಾಗದ ಅಳತೆ ಮಾಡಿಕೊಂಡು ಹೋಗಿದ್ದರು. ಆದಾಗ್ಯೂ ಇ – ಖಾತೆ ಮಾಡಿಕೊಟ್ಟಿರಲಿಲ್ಲ.
ಡಿ. 20 ರಂದು 5 ಸಾವಿರ ರೂ. ಲಂಚ ನೀಡುವಂತೆ ಡಿಮ್ಯಾಂಡ್ ಮಾಡಿದ್ದರು. ಈ ಸಂಬಂಧ ಮೊಹಮ್ಮದ್ ಗೌಸ್ ಅವರು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
5 thousand from an individual to make e-khata. The incident took place on the morning of December 24 in Soraba town where the Lokayukta police seized the Gram Panchayat Development Officer (PDO) who was accepting bribe, along with the bribe money.