soraba news | ಚಂದ್ರಗುತ್ತಿ ಜಾತ್ರೆ : ಬೆತ್ತಲೆ ಸೇವೆ ನಿಷೇಧಿಸಿ ಡಿಸಿ ಆದೇಶ!

Chandragutti Fair : DC bans nude service! ಚಂದ್ರಗುತ್ತಿ ಜಾತ್ರೆ : ಬೆತ್ತಲೆ ಸೇವೆ ನಿಷೇಧಿಸಿ ಡಿಸಿ ಆದೇಶ!

ಶಿವಮೊಗ್ಗ (shivamogga), ಫೆಬ್ರವರಿ 18: ಸೊರಬ ತಾಲ್ಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಫೆಬ್ರವರಿ 24 ಮತ್ತು 25 ರಂದು  ರೇಣುಕಮ್ಮ ದೇವಿ ಜಾತ್ರೆ ನಡೆಯಲಿದೆ. ಈ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ,  2 ದಿನಗಳ ಕಾಲ ಬೆತ್ತಲೆ ಸೇವೆ ನಿಷೇಧಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.

ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35 ರ ಅನ್ವಯ ರೇಣುಕಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ವರದಾ ನದಿಯಲ್ಲಿ ಧಾರ್ಮಿಕ ಸ್ನಾನ ಮಾಡುವುದು, ದೇವರಿಗೆ ಮುಡಿ ಕೊಡುವುದು, ಪಡ್ಲಿಗಿ ತುಂಬಿಸುವುದು ಮತ್ತು ಬೆತ್ತಲೆ ಸೇವೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಈ ನಿಷೇಧಾಜ್ಞೆಯು ಶ್ರೀ ರೇಣುಕಮ್ಮ ದೇವಿಯ ರಥೋತ್ಸವ, ಪೂಜಾ ಕಾರ್ಯಗಳು ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವುದಕ್ಕೆ ಅನ್ವಯಿಸುವುದಿಲ್ಲವೆಂದು ತಿಳಿಸಿದ್ದಾರೆ.

Chandragutti Fair : DC bans nude service! | Shivamogga, February 18: The Renukamma Devi fair will be held in Chandragutti village of Soraba taluk on February 24 and 25. To maintain law and order during the event, Deputy Commissioner Prabhuling Kavalikatti has issued an order banning nude service for two days. Under Section 35 of the Karnataka Police Act, 1963, religious bathing in the Varada river, offering hair to the deity, filling Padligi (ritual vessel), and nude service have been prohibited during the Renukamma Devi fair celebrations. However, the ban does not apply to Renukamma Devi’s chariot festival, worship rituals, and other religious ceremonies, which will continue as usual.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →