shimoga | ಶಿವಮೊಗ್ಗ : ಆಸ್ಪತ್ರೆ ಶೌಚಾಲಯದ ಕಮೋಡ್ ನಲ್ಲಿ ಹೆಣ್ಣು ಭ್ರೂಣ ಪತ್ತೆ!
ಶಿವಮೊಗ್ಗ (shivamogga), ಡಿ. 26: ಶಿವಮೊಗ್ಗ ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್ ನ ಶೌಚಾಲಯದ ಕಮೋಡ್ ನಲ್ಲಿ ಹೆಣ್ಣು ಭ್ರೂಣ ಪತ್ತೆಯಾದ ಘಟನೆ ತಡರಾತ್ರಿ ನಡೆದಿದೆ.
‘ಸದರಿ ಭ್ರೂಣ ಸರಿಸುಮಾರು 7 ತಿಂಗಳ ವಯೋಮಾನದ್ದಾಗಿದೆ ಎಂದು ಅಂದಾಜಿಸಲಾಗಿದೆ. ಆಸ್ಪತ್ರೆ ಡಿ ಗ್ರೂಪ್ ಸಿಬ್ಬಂದಿಯೋರ್ವರು, ರಾತ್ರಿ ಶೌಚಾಲಯ ಕೊಠಿಡಿಗೆ ತೆರಳಿದ್ದ ವೇಳೆ ಕಮೋಡ್ ನಲ್ಲಿ ಭ್ರೂಣ ಪತ್ತೆಯಾಗಿದೆ. ಯಾರು ಈ ಕೃತ್ಯ ನಡೆಸಿದ್ದಾರೆ ಎಂಬುವುದು ಇನ್ನಷ್ಟೆ ತಿಳಿದುಬರಬೇಕಾಗಿದೆ’ ಎಂದು ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕರಾದ ತಿಮ್ಮಪ್ಪ ಅವರು ತಿಳಿಸಿದ್ದಾರೆ.
ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಹೆರಿಗೆ ವಾರ್ಡ್ ನ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಲಾಗಿದೆ. ಭ್ರೂಣ ಯಾರಿಗೆ ಸೇರಿದ್ದು ಎಂಬಿತ್ಯಾದಿ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಮಹಿಳೆ ಯಾರು? : ನಿನ್ನೆ ಸಂಜೆ ಆಸ್ಪತ್ರೆಯ ಹೆರಿಗೆ ವಾರ್ಡ್ ಗೆ ಆಗಮಿಸಿದ ಮಹಿಳೆಯೋರ್ವರು, ತಾನು ಮೂರು ತಿಂಗಳ ಗರ್ಭಿಣಿಯಾಗಿದ್ದು, ಮನೆಯಲ್ಲಿಯೇ ಅಬಾರ್ಷನ್ ಆಗಿದೆ ಎಂದು ಹೇಳಿ ದಾಖಲಾಗಿದ್ದರು.
ಸದರಿ ಮಹಿಳೆಗೆ ಸೂಕ್ತ ವೈದ್ಯೋಪಚಾರವನ್ನು ಆಸ್ಪತ್ರೆಯಲ್ಲಿ ಮಾಡಲಾಗಿತ್ತು. ತನದಂತರ ಸದರಿ ಮಹಿಳೆಯು ಯಾರಿಗೂ ತಿಳಿಸದೆ ಆಸ್ಪತ್ರೆಯಿಂದ ಹೊರ ತೆರಳಿದ್ದಾಳೆ. ಈ ವೇಳೆ ಮಹಿಳೆ ಹೆಸರು, ನೀಡಿದ ಚಿಕಿತ್ಸೆ ಮತ್ತೀತರ ವಿವರ ಒಳಗೊಂಡ ಕೇಸ್ ಶೀಟ್ ನ್ನು ಕೂಡ ಕೊಂಡೊಯ್ದಿದ್ದಾಳೆ.
ಸದರಿ ಮಹಿಳೆಗೆ ಭ್ರೂಣ ಸೇರಿದ್ದಾಗಿದೆಯೇ? ಅಥವಾ ಬೇರೆಯವರಿಗೆ ಸಂಬಂಧಿಸಿದ್ದೆ? ಎಂಬುವುದು ಇನ್ನಷ್ಟೆ ಖಚಿತವಾಗಬೇಕಾಗಿದೆ. ಮೆಗ್ಗಾನ್ ಸಿಬ್ಬಂದಿಗಳು ಹಾಗು ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಯ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
The incident took place late at night when a female fetus was found in the commode of the toilet of the maternity ward of Government Megan Hospital in Shimoga city.
The fetus is estimated to be approximately 7 months old. A staff member of Hospital D Group found a fetus in the commode when he went to the toilet room at night. It is yet to be known who has committed this act.
