hosanagara | ಹೊಸನಗರ : ಜೀಪ್’ಗೆ ಟೆಂಪೋ ಟ್ರಾವೆಲರ್ ಡಿಕ್ಕಿ ; ಹಲವರಿಗೆ ಗಾಯ – ಇಬ್ಬರ ಸ್ಥಿತಿ ಗಂಭೀರ!
ಹೊಸನಗರ (hosanagar), ಡಿ. 26: ಜೀಪ್’ಗೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದ ಪರಿಣಾಮ, ಎರಡು ವಾಹನಗಳಲ್ಲಿದ್ದ ಹಲವರು ಗಾಯಗೊಂಡಿದ್ದು, ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಡಿ. 26 ರಂದು ಬೆಳಿಗ್ಗೆ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ಮರಕುಟಿಗ ಗ್ರಾಮದ ರಸ್ತೆ ತಿರುವಿನ ಬಳಿ ನಡೆದಿದೆ.
ಕೊಲ್ಲೂರಿನಿಂದ ಕೊಡಚಾದ್ರಿಗೆ ಆಗಮಿಸುತ್ತಿದ್ದ ಜೀಪ್ ಗೆ ಶಿವಮೊಗ್ಗದಿಂದ ಕೊಲ್ಲೂರು ಕಡೆಗೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ವಾಹನ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಎರಡು ವಾಹನಗಳ ಮುಂಭಾಗ ಜಖಂಗೊಂಡಿದೆ.
ಜೀಪ್ ನಲ್ಲಿದ್ದ ಐವರಲ್ಲಿ ನಾಲ್ವರಿಗೆ ಗಾಯವಾಗಿದೆ. ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀಪ್ ನಲ್ಲಿದ್ದವರು ಕೇರಳ ರಾಜ್ಯದವರಾಗಿದ್ದಾರೆ.
ಉಳಿದಂತೆ ಟೆಂಪೋ ಟ್ರಾವೆಲರ್ ವಾಹನದಲ್ಲಿ ಸುಮಾರು 10 ಜನರಿದ್ದರು. ಇವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಹೊಸನಗರ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮರಕುಟಿಗ ಬಳಿಯ ರಸ್ತೆ ತಿರುವಿನಲ್ಲಿ ಜೀಪ್ ನಿಂತಿದ್ದು, ಈ ವೇಳೆ ಎದುರಿನಿಂದ ಆಗಮಿಸಿದ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
Hosnagar, D. 26: As a result of a collision between a tempo traveler and a jeep, several people in the two vehicles were injured, two of whom were critically injured, on December 26 in the morning near the road junction of Marakutiga village near Nittur in Hosanagar taluk.
The Jeep which was coming from Kollur to Kodachadri collided with the Tempo Traveler vehicle which was moving from Shimoga towards Kollur. As a result of the accident, the front of two vehicles were smashed.
