
shimoga | ಶಿವಮೊಗ್ಗ : ಯಾವೆಲ್ಲ ಏರಿಯಾಗಳಲ್ಲಿ ಜ. 31 ರಂದು ವಿದ್ಯುತ್ ಇರಲ್ಲ?
ಶಿವಮೊಗ್ಗ (shivamogga), ಜ. 30: ಶಿವಮೊಗ್ಗ ನಗರದ ಅಶೋಕ ರಸ್ತೆ ಮತ್ತು ಶಿವಾಜಿ ರಸ್ತೆ ಸಮೀಪ, ವಿದ್ಯುತ್ ಪರಿಕರಗಳ ನಿರ್ವಹಣೆ ಕಾಮಗಾರಿಯನ್ನು, ಜನವರಿ 31 ರಂದು ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ಸಂಸ್ಥೆ ತಿಳಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.
ವಿವರ : ಅಶೋಕರಸ್ತೆ, ಶಿವಾಜಿ ರಸ್ತೆ, ಎಸ್‌ಪಿಎಂ ರಸ್ತೆ, ವಿನಾಯಕ ರಸ್ತೆ, ಯಾಲಕಪ್ಪನ ಕೇರಿ, ಬೇಡರ ಕೇರಿ, ಭೂಪಾಳಂ ಶಾಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸದರಿ ಪ್ರದೇಶಗಳ ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
According to Mescom, the maintenance work of electrical equipment was started on January 31 near Ashoka Road and Shivaji Road in Shimoga city. A press release has been issued in this regard. In this background, Mescom has informed that there will be power interruption in the following areas from 9 am to 6 pm on that day.
Ashoka road, Shivaji Road, SPM Road, Vinayaka Road, Yalakappana Keri, Bedera Keri, Bhupalam School and surrounding areas will experience power interruption. Mescom has informed in a press release that the public of the said areas should cooperate.
#mescom, #powercut, #shimogapowercutnews, #shivamoggapowercutnews, #poweroutage, #ವಿದ್ಯುತ್_ವ್ಯತ್ಯಯ, #ವಿದ್ಯುತ್, #ಮೆಸ್ಕಾಂ, #ವಿದ್ಯುತ್_ನಿಲುಗಡೆ,