
Shikaripur | ಶಿರಾಳಕೊಪ್ಪ ಪೊಲೀಸರ ಕಾರ್ಯಾಚರಣೆ : ನಕಲಿ ಬಂಗಾರ ನೀಡಿ ಹಾಸನ ವ್ಯಕ್ತಿಗೆ ವಂಚಿಸಿದ್ದ ಸೊರಬದ ಆರೋಪಿ ಸೆರೆ!
ಶಿಕಾರಿಪುರ (shikaripur), ಜ. 30: ಹಾಸನ ಜಿಲ್ಲೆಯ ವ್ಯಕ್ತಿಯೋರ್ವರಿಗೆ, ನಕಲಿ ಬಂಗಾರ ನೀಡಿ ಲಕ್ಷಾಂತರ ರೂ. ವಂಚಿಸಿ ಪರಾರಿಯಾಗಿದ್ದ ಸೊರಬ ತಾಲೂಕಿನ ಆರೋಪಿಯೋರ್ವನನ್ನು, ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಠಾಣೆ ಪೊಲೀಸರು ಬಂಧಿಸಿದ ಘಟನೆ ಜ. 29 ರಂದು ನಡೆದಿದೆ.
ಸೊರಬ ತಾಲೂಕು ತತ್ತೂರು ಗ್ರಾಮದ ನಿವಾಸಿ ಚಂದ್ರಪ್ಪ (68) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ 5 ಲಕ್ಷ ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿಕಾರಿಪುರ ಡಿವೈಎಸ್ಪಿ ಕೇಶವ್ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್’ಪೆಕ್ಟರ್ ರುದ್ರೇಶ್ ಮೇಲ್ವಿಚಾರಣೆಯಲ್ಲಿ ಸಬ್ ಇನ್ಸ್’ಪೆಕ್ಟರ್ ಪ್ರಶಾಂತ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಂತೋಷ್ ಕುಮಾರ್, ಸಲ್ಮಾನ್, ರಾಕೇಶ್, ಕಾರ್ತಿಕ್, ಕಾಂತೇಶ್
ಹಾಗೂ ಶಿವಮೊಗ್ಗ ಎಸ್ಪಿ ಕಚೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಗುರುರಾಜ್, ಇಂದೇಶ್ ಹಾಗೂ ವಿಜಯ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಘಟನೆ ಹಿನ್ನೆಲೆ : 29/12/2024 ರಂದು ಹಾಸನ ಜಿಲ್ಲೆ ಇಂಟಿತೊಳಲು ಗ್ರಾಮದ ನಿವಾಸಿಯಾದ ಕಲ್ಲೇಶ್ (52) ಎಂಬುವರು ಧರ್ಮಸ್ಥಳಕ್ಕೆ ತೆರಳಿದ್ದಾಗ, ಆರೋಪಿ ಚಂದ್ರು ಎಂಬುವನ ಪರಿಚಯವಾಗಿತ್ತು. ಮನೆಯ ಪಾಯ ತೆಗೆಯುವಾಗ ಹಳೇಯ ಕಾಲದ ಚಿನ್ನದ ನಾಣ್ಯಗಳು ಸಿಕ್ಕಿವೆ. ಇವುಗಳನ್ನು ಮಾರಾಟ ಮಾಡುತ್ತಿದ್ದೆನೆ ಎಂದು ಆರೋಪಿ ತಿಳಿಸಿದ್ದ.
ಆರೋಪಿಯ ಮಾತು ನಂಬಿದ ಕಲ್ಲೇಶ್ ಅವರು ಶಿರಾಳಕೊಪ್ಪಕ್ಕೆ ಆಗಮಿಸಿದ್ದರು. ಈ ವೇಳೆ ಆರೋಪಿಗಳಾದ ಚಂದ್ರು ಹಾಗೂ ನವೀನ್ ಎಂಬುವರು, ಅಸಲಿ ಬಂಗಾರದ ನಾಣ್ಯ ನೀಡಿದ್ದರು. ಕಲ್ಲೇಶ್ ಅವರು ಊರಿಗೆ ಕೊಂಡೊಯ್ದು ಪರಿಶೀಲಿಸಿದಾಗ, ಅಸಲಿಯಾಗಿರುವುದು ಕಂಡುಬಂದಿತ್ತು.
ವಂಚಕರ ಸಂಚು ಅರಿಯದ ಕಲ್ಲೇಶ್ ಅವರು 8-1-2025 ರಂದು ಮತ್ತೆ ಶಿರಾಳಕೊಪ್ಪಕ್ಕೆ ಆಗಮಿಸಿದ್ದರು. ಈ ವೇಳೆ ಆರೋಪಿಗಳು 800 ಗ್ರಾಂ ತೂಕದ ನಾಣ್ಯಗಳನ್ನು ನೀಡಿದ್ದು, ಕಲ್ಲೇಶ್ 5 ಲಕ್ಷ ರೂ. ನೀಡಿದ್ದರು. ತಮ್ಮ ಊರಿಗೆ ಕೊಂಡೊಯ್ದು ಪರಿಶೀಲಿಸಿದಾಗ, ನಕಲಿಯಾಗಿರುವುದು ಗೊತ್ತಾಗಿತ್ತು. ತದನಂತರ ಅವರು ಶಿರಾಳಕೊಪ್ಪ ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
Shikaripura, January 30: Millions of rupees were given to a person in Hassan district by giving fake gold. The incident took place on January 29 when the Shikaripur Taluk Shiralakoppa police arrested the accused from Sorab Taluk who had cheated and escaped.
Chandrappa (68), a resident of Tattur village in Soraba taluk, has been identified as the arrested accused. Police seized Rs 5 lakh from the accused.