bhadravati crime news | ಭದ್ರಾವತಿ : 60 ಅಡಿ ಎತ್ತರದ ಹೈಟೆನ್ಷನ್ ವಿದ್ಯುತ್ ಕಂಬದ ಮೇಲೆ ವ್ಯಕ್ತಿ ಸಾವು!

Bhadravati: Man dies atop a 60-foot-high high-tension electricity pole! | Bhadravati, November 25: On November 25, the Fire and Emergency Services team undertook a difficult operation to retrieve the body of an unidentified man who had died atop a 60-foot-high high-tension electricity pole. The incident occurred in JPS Colony, within the jurisdiction of the Paper Town Police Station in Bhadravati city.

ಭದ್ರಾವತಿ (shivamogga), ನವೆಂಬರ್ 25: ಸರಿಸುಮಾರು 60 ಅಡಿ ಎತ್ತರದ ಹೈಟೆನ್ಷನ್ ವಿದ್ಯುತ್ ಕಂಬದ ಮೇಲೆ ಮೃತಪಟ್ಟಿದ್ದ ಅಪರಿಚಿತ ವ್ಯಕ್ತಿಯೋರ್ವರ ಶವವನ್ನು ಅಗ್ನಿಶಾಮಕ ದಳ  ತಂಡ ಹರಸಾಹಸ ನಡೆಸಿ ಕೆಳಕ್ಕಿಳಿಸಿದ ಘಟನೆ ಭದ್ರಾವತಿ ನಗರದ ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಜೆಪಿಎಸ್ ಕಾಲೋನಿಯಲ್ಲಿ ನವೆಂಬರ್ 25 ರಂದು ನಡೆಯಿತು.

ಹೈಟೆನ್ಷನ್ ಕಂಬದ 110 ಕಿಲೋ ವ್ಯಾಟ್ ವಿದ್ಯುತ್ ಪ್ರಸರಣ ಸಾರ್ಮಥ್ಯದ ಲೈನ್ ಬಳಿಯೇ, ವ್ಯಕ್ತಿಯ ಶವ ನೇತಾಡುತ್ತಿತ್ತು. ಬೆಳಿಗ್ಗೆ ವೇಳೆ ಇದನ್ನು ಗಮನಿಸಿದ ಸ್ಥಳೀಯರು, ಸಂಬಂಧಿಸಿದವರಿಗೆ ಮಾಹಿತಿ ರವಾನಿಸಿದ್ದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೆಪಿಟಿಸಿಎಲ್, ಮೆಸ್ಕಾಂ, ಪೊಲೀಸ್, ಅಗ್ನಿಶಾಮಕ ದಳದ ಅಧಿಕಾರಿ – ಸಿಬ್ಬಂದಿಗಳು ದೌಡಾಯಿಸಿದ್ದರು.

ಕೆಪಿಟಿಸಿಎಲ್ ಸಂಸ್ಥೆಯು ಹೈಟೆನ್ಷನ್ ವಿದ್ಯುತ್ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿತ್ತು. ತದನಂತರ 60 ಅಡಿ ಎತ್ತರದ ಕಂಬ ಏರಿ ಶವವನ್ನು ಕೆಳಕ್ಕೆ ತರುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಭದ್ರಾವತಿ ಅಗ್ನಿಶಾಮಕ ದಳ ತಂಡದ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಕೃಷ್ಣರಾಜು, ಸಿಬ್ಬಂದಿಗಳಾದ ಆನಂದ್, ಸುರೇಶ್, ಮಹೇಂದ್ರ, ಸಂತೋಷ್ ಭಾಗವಹಿಸಿದ್ದರು. ಅಗ್ನಿಶಾಮಕ ದಳ ತಂಡದ ಕಾರ್ಯಾಚರಣೆಗೆ ಸ್ಥಳದಲ್ಲಿದ್ದ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಉಳಿದಂತೆ ಮೃತ ವ್ಯಕ್ತಿಯ ಹೆಸರು, ವಿಳಾಸ, ಅವರು ಹೈಟೆನ್ಷನ್ ಕಂಬವೇರಿದ್ದು ಯಾವಾಗ? ಕಾರಣವೇನು? ಎಂಬಿತ್ಯಾದಿ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

Bhadravati: Man dies atop a 60-foot-high high-tension electricity pole! | Bhadravati, November 25: On November 25, the Fire and Emergency Services team undertook a difficult operation to retrieve the body of an unidentified man who had died atop a 60-foot-high high-tension electricity pole. The incident occurred in JPS Colony, within the jurisdiction of the Paper Town Police Station in Bhadravati city.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *