Champions Trophy 2025: India's huge win – a new record in Champions Trophy history! cricket | Champions Trothy 2025 | ಭಾರತಕ್ಕೆ ಭರ್ಜರಿ ಜಯ – ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಹೊಸ ದಾಖಲೆ!

cricket | Champions Trothy 2025 | ಭಾರತಕ್ಕೆ ಭರ್ಜರಿ ಜಯ – ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಹೊಸ ದಾಖಲೆ!

ದುಬೈ (dubai), ಮಾ. 9: ದುಬೈನಲ್ಲಿ ಮಾರ್ಚ್ 9 ರ ಭಾನುವಾರ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ, ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು ಪರಾಭವಗೊಳಿಸುವ ಮೂಲಕ ಟ್ರೋಫಿ ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದ ಕಿವೀಸ್ ತಂಡವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 251 ರನ್ ಗಳಿಸಿತು. ಭಾರತಕ್ಕೆ 252 ರನ್ ಗಳ ಸವಾಲಿನ ಗುರಿ ನೀಡಿತು.

ಭಾರತದ ಪರ ಬೌಲರ್ ಗಳಾದ ವರುಣ್ ಚಕ್ರವರ್ತಿ, ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಹಾಗೂ ಮಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಗಳಿಸಿದರು.

252 ರನ್ ಗಳ ಸವಾಲಿನ ಮೊತ್ತ ಬೆನ್ನತ್ತಿದ ಭಾರತ ತಂಡವು, 6 ವಿಕೆಟ್ ಕಳೆದುಕೊಂಡು ಇನ್ನೂ 6 ಎಸೆತ ಬಾಕಿ ಇರುವಂತೆ ವಿಜಯದ ಪತಾಕೆ ಹಾರಿಸಿತು.

ಟೀ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಅತ್ಯದಿಕ 76 ರನ್ ಗಳಿಸಿದರು. ಉಳಿದಂತೆ ಶುಭ್’ಮನ್ ಗಿಲ್ 31, ವಿರಾಟ್ ಕೊಹ್ಲಿ 1, ಶ್ರೇಯಸ್ ಅಯ್ಯರ್ 48, ಅಕ್ಷರ್ ಪಟೇಲ್ 29, ಹಾರ್ದಿಕ್ ಪಾಂಡ್ಯ 18 ಹಾಗೂ ಅಜೇಯರಾಗುಳಿದ ಕೆಎಲ್ ರಾಹುಲ್ 34 ಮತ್ತು ರವೀಂದ್ರ ಜಡೇಜಾ 9 ರನ್ ಗಳಿಸಿದರು.

ದಾಖಲೆ : ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ 3 ಟ್ರೋಫಿ ಗೆದ್ದ (2002, 2013, 2025) ಏಕೈಕ ತಂಡ ಎಂಬ ಹೆಗ್ಗಳಿಕೆ ಭಾರತದ್ದಾಗಿದೆ. ಹಾಗೆಯೇ 25 ವರ್ಷಗಳ ಹಿಂದೆ ನ್ಯೂಜಿಲೆಂಡ್ ಎದುರು ಫೈನಲ್ ಪಂದ್ಯದಲ್ಲಿ ಸೋತ್ತಿದ್ದ ಭಾರತ ತನ್ನ ಸೇಡು ತೀರಿಸಿಕೊಂಡಿದೆ.

Dubai, Mar 9: Team India defeated New Zealand in the Champions Trophy cricket final held in Dubai on Sunday, March 9, to lift the trophy. The Kiwis team won the toss and elected to bat first. They scored 251 runs for the loss of 7 wickets in the allotted 50 overs, setting India a challenging target of 252 runs. Chasing a challenging total of 252 runs, India won with 6 wickets to spare.

For India, captain Rohit Sharma top-scored with 76 runs. Shubman Gill scored 31, Virat Kohli 1, Shreyas Iyer 48, Axar Patel 29, Hardik Pandya 18 and KL Rahul, who remained unbeaten on 34 and Ravindra Jadeja scored 9 runs.

shimoga | Police Department Marathon held successfully in Shimoga city! shimoga | ಶಿವಮೊಗ್ಗ ನಗರದಲ್ಲಿ ಯಶಸ್ವಿಯಾಗಿ ನಡೆದ ಪೊಲೀಸ್ ಇಲಾಖೆ ಮ್ಯಾರಥಾನ್! Previous post shimoga | ಶಿವಮೊಗ್ಗ ನಗರದಲ್ಲಿ ಯಶಸ್ವಿಯಾಗಿ ನಡೆದ ಪೊಲೀಸ್ ಮ್ಯಾರಥಾನ್!
Holiday declared for Anganwadi schools and colleges in Shivamogga and Bhadravati taluks on July 4 ಶಿವಮೊಗ್ಗ ಭದ್ರಾವತಿ ತಾಲೂಕುಗಳ ಅಂಗನವಾಡಿ ಶಾಲೆ – ಕಾಲೇಜುಗಳಿಗೆ ಜುಲೈ 4 ರಂದು ರಜೆ ಘೋಷಣೆ Next post rain alert | ಬೇಸಿಗೆ ರಣ ಬಿಸಿಲಿನ ನಡುವೆ ಮಳೆ ಮುನ್ಸೂಚನೆ : ಯಾವಾಗ? ಎಲ್ಲೆಲ್ಲಿ?