
cricket news | 4 ನೇ ಟೆಸ್ಟ್ : ಭಾರತಕ್ಕೆ ಹೀನಾಯ ಸೋಲು – ಸರಣಿಯಲ್ಲಿ ಆಸ್ಟ್ರೇಲಿಯಾಕ್ಕೆ ಮುನ್ನಡೆ!
ಮೆಲ್ಬೋರ್ನ್ (Australia), ಡಿ. 30: ಮೆಲ್ಬೋರ್ನ್ ನಲ್ಲಿ ನಡೆದ ಬಾರ್ಡರ್ – ಗಾವಾಸ್ಕರ್ ಟ್ರೋಫಿಯ 4 ನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಅಂತಿಮ ದಿನವಾದ ಇಂದು, ಆಸ್ಟ್ರೇಲಿಯಾ ಎದುರು ಭಾರತ ಹೀನಾಯ ಪರಾಭವಗೊಂಡಿದೆ.
ಆಸ್ಟ್ರೇಲಿಯಾ ತಂಡ ನೀಡಿದ 339 ರನ್ ಗಳ ಗುರಿ ಬೆನ್ನತ್ತಿದ ಭಾರತ ತಂಡವು, ತನ್ನ 2 ನೇ ಇನ್ನಿಂಗ್ಸ್ ನಲ್ಲಿ ಕೇವಲ 155 ರನ್ ಗಳಿಗೆ ಆಲೌಟ್ ಆಗಿದೆ. 184 ರನ್ ಗಳ ಅಂತರದಲ್ಲಿ ಸೋಲನುಭವಿಸಿತು.
ಭಾರತದ ಪರ ಯಶಸ್ವಿ ಜೈಸ್ವಾಲ್ 84 ಹಾಗೂ ರಿಷಬ್ ಪಂತ್ 30 ರನ್ ಗಳಿಸಿದ್ದು ಹೊರತುಪಡಿಸಿದರೆ, ಉಳಿದ ಯಾವುದೇ ಬ್ಯಾಟ್ಸ್’ಮನ್ ಗಳು ಎರಡಂಕಿಯ ಗಡಿ ದಾಟಲಿಲ್ಲ!
ರೋಹಿತ್ ಶರ್ಮಾ 9 ರನ್, ಕೆ ಎಲ್ ರಾಹುಲ್ 0, ವಿರಾಹ್ ಕೊಹ್ಲಿ 5, ರವೀಂದ್ರ ಜಡೇಜಾ 2, ನಿತೀಶ್ ಕುಮಾರ್ ರೆಡ್ಡಿ 1, ವಾಷಿಂಗ್ಟನ್ ಸುಂದರ್ 5, ಆಕಾಶ್ ದೀಪ್ 7, ಜಸ್ಪೀತ್ ಬೂಮ್ರಾ 0 ಹಾಗೂ ಮೊಹಮ್ಮದ್ 0 ರನ್ ಗಳಿಸಿದರು.
ಆಸೀಸ್ ಬೌಲರ್ ಗಳ ಸಾಂಘಿಕ ಹೋರಾಟ ಹಾಗೂ ಮೊನಚು ದಾಳಿಯ ಎದುರು, ಭಾರತದ ಬ್ಯಾಟ್ಸ್’ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದರು. ಯಾವುದೇ ಆಟ ನಡೆಯಲಿಲ್ಲ.
ಆಸೀಸ್ ಪರ ಎರಡನೇ ಇನ್ನಿಂಗ್ಸ್ ನಲ್ಲಿ ಪ್ಯಾಟ್ ಕಮಿನ್ಸ್ ಮತ್ತು ಸ್ಕಾಟ್ ಬೋಲಾಂಡ್ ತಲಾ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಗಳೆನಿಸಿದರು. ನಾಥನ್ ಲಯಾನ್ 2, ಟ್ರಾವಿಸ್ ಹೆಡ್, ಮಿಚೆಲ್ ಸ್ಟಾರ್ಕ್ ತಲಾ 1 ವಿಕೆಟ್ ಗಳಿಸಿದರು.
ಗೆಲುವು ಅನಿವಾರ್ಯ : ಸರಣಿಯಲ್ಲಿ ಆಸ್ಟ್ರೇಲಿಯಾವು 2-1 ಮುನ್ನಡೆ ಸಾಧಿಸಿದೆ. ಒಂದು ಪಂದ್ಯ ಡ್ರಾ ಆಗಿದೆ. ಸರಣಿಯ ಅಂತಿಮ ಪಂದ್ಯವು ಜನವರಿ 3 ರಂದು ಸಿಡ್ನಿಯಲ್ಲಿ ಆರಂಭವಾಗಲಿದೆ. ಸರಣಿ ಸಮಬಲ ಸಾಧಿಸಲು ಭಾರತ ತಂಡವು ಈ ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.
Melbourne, D. 30: Today, the final day of the 4th Test cricket match of the Border – Gavaskar Trophy in Melbourne, India suffered a crushing defeat against Australia.
Chasing the target of 339 runs set by the Australian team, the Indian team was bowled out for just 155 runs in their 2nd innings. Defeated by 184 runs.
Apart from Yasshav Jaiswal scoring 84 and Rishabh Pant scoring 30 runs for India, none of the other batsmen crossed the double-digit mark! Rohit Sharma scored 9 runs, KL Rahul 0, Virah Kohli 5, Ravindra Jadeja 2, Nitish Kumar Reddy 1, Washington Sundar 5, Akash Deep 7, Jaspit Bumrah 0 and Mohammad 0.