shimoga | power cut | ಶಿವಮೊಗ್ಗ ನಗರದ ವಿವಿಧೆಡೆ ಜೂ. 29 ರಂದು ವಿದ್ಯುತ್ ವ್ಯತ್ಯಯ

Shivamogga: Power Outage on February 08 and 09 ಶಿವಮೊಗ್ಗ : ಫೆಬ್ರವರಿ 08 ಮತ್ತು 09 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ (shivamogga), ಜೂ. 27: ಶಿವಮೊಗ್ಗ ಮೆಸ್ಕಾಂ ಘಟಕ-2 ರ ನಗರ ಉಪವಿಭಾಗ – 1 ರ ವ್ಯಾಪ್ತಿಯ ಜಿಲ್ಲಾ ಪಂಚಾಯ್ತಿ ಎದುರಿನ ರಾಘವೇಂದ್ರ ಸ್ವಾಮಿ ಮಠದ ರಸ್ತೆಯಲ್ಲಿ, ಸ್ಟನ್ ಪೋಲ್ ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಜೂ. 29 ರಂದು ಬೆಳಿಗ್ತೆ 9 ರಿಂದ ಸಂಜೆ 5 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.

ವಿವರ : ರಾಘವೇಂದ್ರ ಸ್ವಾಮಿ ಮಠದ ರಸ್ತೆ, ತಿಲಕ್‌ನಗರ, ರತ್ನಮ್ಮ ಮಾಧವ ರಾವ್ ರಸ್ತೆ, ಕುವೆಂಪು ರಸ್ತೆ, ಪಾರ್ಕ್ ಬಡಾವಣೆ, ದುರ್ಗಿಗುಡಿ, ಶಿವಮೂರ್ತಿ ಸರ್ಕಲ್ ಹಾಗೂ ಜಿಲ್ಲಾ ಪಂಚಾಯಿತಿ ರಸ್ತೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Details: There will be power outages in the areas around Raghavendra Swamy Math Road, Tilak Nagar, Ratnamma Madhava Rao Road, Kuvempu Road, Park Layout, Durgigudi, Shivamurthy Circle and Zilla Panchayat Road, and the public is requested to cooperate, a MESCOM statement said.

ಶಿವಮೊಗ್ಗ, ಜೂ. 27: ಶಿವಮೊಗ್ಗ ನಗರದ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಎಫ್ – 8 ರಲ್ಲಿ, ಜೂ. 29 ರಂದು ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಜೂ. 29 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 02 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದೆ.

ವಿವರ : ಲಕ್ಷ್ಮೀಪುರ, ಕೆಂಚಪ್ಪ ಲೇಔಟ್, ಎನ್.ಎಂ.ಸಿ. ಕಾಂಪೌಂಡ್, ಸೂಡಾ ಕಚೇರಿ, ಪೊಲೀಸ್ ಚೌಕಿ, ಸವಿ ಬೇಕರಿ ಎದುರು, 100 ಅಡಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Details: There will be power outages in Lakshmipur, Kenchappa Layout, NMC Compound, Sooda Office, Police Chowki, opposite Savi Bakery, 100 feet road and surrounding areas. The MESCOM announcement has asked the public to cooperate.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →