shimoga job news | ಶಿವಮೊಗ್ಗ ಜಿಲ್ಲೆಯಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ

Applications are invited for the post of Anganwadi workers and helpers in various places in Shivamogga district. ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಅಂಗನವಾಡಿ ಕಾರ್ಯಕರ್ತೆಯರು - ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಶಿವಮೊಗ್ಗ (shivamogga), ನವೆಂಬರ್ 18 : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅಂಗನವಾಡಿಗಳಲ್ಲಿ ಖಾಲಿಯಿರುವ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಭದ್ರಾವತಿ ಕಾರ್ಯಕರ್ತೆಯರು -08 ಮತ್ತು ಸಹಾಯಕಿಯರು-34. ಹೊಸನಗರ ಕಾರ್ಯಕರ್ತೆಯರು -06 ಮತ್ತು ಸಹಾಯಕಿಯರು-46. ಸಾಗರ ಕಾರ್ಯಕರ್ತೆಯರು -04 ಮತ್ತು ಸಹಾಯಕಿಯರು-37. ಶಿಕಾರಿಪುರ ಕಾರ್ಯಕರ್ತೆಯರು -04 ಮತ್ತು ಸಹಾಯಕಿಯರು-30. ಶಿವಮೊಗ್ಗ ಕಾರ್ಯಕರ್ತೆಯರು -19 ಮತ್ತು ಸಹಾಯಕಿಯರು-54. ಸೊರಬ ಕಾರ್ಯಕರ್ತೆಯರು -06 ಮತ್ತು ಸಹಾಯಕಿಯರು-30 ಹಾಗೂ ತೀರ್ಥಹಳ್ಳಿ ಕಾರ್ಯಕರ್ತೆಯರು -12 ಮತ್ತು ಸಹಾಯಕಿಯರು-42 ಹುದ್ದೆಗಳು ಖಾಲಿಯಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತರು ಆರ್ಜಿ ನಮೂನೆಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ನ.20 ರಿಂದ ಡಿ.19 ರೊಳಗಾಗಿ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ ಆಯಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಅಥವಾ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದೂ.ಸಂ.: 08182-2955514 ನ್ನು ಸಂಪರ್ಕಿಸುವAತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Applications Invited for Vacant Anganwadi Worker and Helper Posts in Shivamogga District | Shivamogga, November 18: The Department of Women and Child Development has invited applications for vacant Anganwadi worker and helper positions across all taluks in Shivamogga district.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *