ಶಿವಮೊಗ್ಗ (shivamogga), ನವೆಂಬರ್ 15: ಚಲಿಸುತ್ತಿದ್ದ ರೈಲಿನಿಂದ ಯುವತಿಯೋರ್ವಳು ಹೊರಕ್ಕೆ ಜಿಗಿದಿದ್ದು, ಪವಾಡಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಏನೀದು ಘಟನೆ? : ಭಾನುವಾರ ನಿಗದಿಯಾಗಿದ್ದ ಕೆಪಿಎಸ್’ಸಿ ಪರೀಕ್ಷೆ ಬರೆಯಲು ಯುವತಿಯೋರ್ವಳು ರೈಲಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದಳು. ರೈಲು ಶಿವಮೊಗ್ಗ ರೈಲ್ವೆ ನಿಲ್ದಾಣ ಆಗಮಿಸಿದ ವೇಳೆ, ಯುವತಿ ನಿದ್ರಿಸುತ್ತಿದ್ದಳು.
ರೈಲು ಮುಂದಕ್ಕೆ ಚಲಿಸಲಾರಂಭಿಸಿದೆ. ಈ ವೇಳೆ ಎಚ್ಚರಗೊಂಡ ಯುವತಿ ಗಲಿಬಿಲಿಗೊಂಡು ದಿಡೀರ್ ಆಗಿ ರೈಲಿನಿಂದ ಹೊರಕ್ಕೆ ಜಿಗಿದಿದ್ದಾಳೆ. ಈ ವೇಳೆ ಮೊಬೈಲ್ ಪೋನ್ ನನ್ನು ರೈಲಿನಲ್ಲಿಯೇ ಬಿಟ್ಟಿದ್ದಾಳೆ.
ಇದೆ ವೇಳೆ ರೈಲ್ವೆ ನಿಲ್ದಾಣ ಸುತ್ತಮುತ್ತ ಮಹಿಳೆಯರ ಸಂರಕ್ಷಣೆಗೆಂದೆ ಕಾರ್ಯನಿರ್ವಹಿಸುವ ‘ಅಕ್ಕ ಪಡೆ’ಯು ಗಸ್ತು ನಡೆಸುತ್ತಿತ್ತು. ಮಾಹಿತಿ ಅರಿತು ಸ್ಥಳಕ್ಕಾಗಮಿಸಿ ಯುವತಿಗೆ ನೆರವಾಗಿದೆ. ಜೊತೆಗೆ ಸಂಬಂಧಿಕರನ್ನು ಪತ್ತೆ ಹಚ್ಚಿ ಯುವತಿಯನ್ನು ಅವರ ಸುಪರ್ದಿಗೆ ಒಪ್ಪಿಸಿದ್ದಾರೆ ಎಂದು ನವೆಂಬರ್ 15 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
Young Woman Jumps from Train in Shivamogga – What Was the Reason?
Shivamogga, November 13: An incident occurred in Shivamogga city where a young woman jumped from a moving train and, miraculously, escaped without fatal injury.
What happened? A young woman had arrived in Shivamogga by train to take a KPSC examination scheduled for Sunday. She was asleep when the train reached the Shivamogga railway station.
The train began to move forward again. Upon waking up, the young woman became disoriented and suddenly jumped off the train. In the process, she left her mobile phone behind on the train.
At that time, the ‘Akka Pade’ (a specialized unit dedicated to the safety of women) was patrolling the vicinity of the railway station. Upon learning of the incident, they arrived at the scene and assisted the young woman. Furthermore, they located her relatives and handed her over to their care, according to a statement released by the Police Department on November 15.

