shimoga news | ಶಿವಮೊಗ್ಗ : ಕಸದ ರಾಶಿಗೆ ಹಾಕಿದ ಬೆಂಕಿಯಿಂದ ಮರದ ಬುಡಕ್ಕೆ ಹಾನಿ!

Shivamogga: Tree base damaged by fire set to a pile of trash! Shivamogga, November 18: An incident occurred on the morning of November 18 within the premises of the Government McGann Hospital in Shivamogga city, where a large tree sustained damage after fire set to a pile of trash spread to its base.

ಶಿವಮೊಗ್ಗ (shivamogga), ನವೆಂಬರ್ 18: ಕಸದ ರಾಶಿಗೆ ಹಾಕಿದ ಬೆಂಕಿಯಿಂದ ಬೃಹದಾಕಾರದ ಮರವೊಂದರ ಬುಡಕ್ಕೆ ಹೊತ್ತಿಕೊಂಡು ಹಾನಿಗೀಡಾದ ಘಟನೆ, ಶಿವಮೊಗ್ಗ ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ನವೆಂಬರ್ 18 ರ ಬೆಳಿಗ್ಗೆ ನಡೆದಿದೆ.

ಚೌಡಮ್ಮ ದೇವಾಲಯ ಆವರಣದಲ್ಲಿರುವ ಮರದ ಬುಡದಲ್ಲಿ, ಕಸದ ರಾಶಿಯ ಸಂಗ್ರಹವಿತ್ತು. ಮುಂಜಾನೆ ಸದರಿ ಕಸದ ರಾಶಿಗೆ ಸಾರ್ವಜನಿಕರೋರ್ವರು ಬೆಂಕಿ ಹಾಕಿದ್ದಾರೆ ಎನ್ನಲಾಗಿದೆ.

ಕಸದ ರಾಶಿಯ ಬೆಂಕಿಯು ಮರದ ಬುಡಕ್ಕೆ ಹೊತ್ತಿಕೊಂಡಿದ್ದು, ಬುಡದ ಅರ್ಧ ಭಾಗ ಸುಟ್ಟಿದೆ. ಇದನ್ನು ಗಮನಿಸಿದ ಕೆಲವರು ಬುಡಕ್ಕೆ ಹೊತ್ತಿದ್ದ ಬೆಂಕಿ ನಂದಿಸಿ ಹೆಚ್ಚಿನ ಪ್ರಮಾಣದ ಅನಾಹುತ ತಪ್ಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Shivamogga: Tree base damaged by fire set to a pile of trash! | Shivamogga, November 18: An incident occurred on the morning of November 18 within the premises of the Government McGann Hospital in Shivamogga city, where a large tree sustained damage after fire set to a pile of trash spread to its base.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *