
prajwal revanna | ಪ್ರಜ್ವಲ್ ರೇವಣ್ಣ ಅಪರಾಧಿ – ಯಾವಾಗ ಪ್ರಕಟವಾಗಲಿದೆ ಶಿಕ್ಷೆ?
ಬೆಂಗಳೂರು (bengaluru), ಆಗಸ್ಟ್ 1: ಮನೆ ಕೆಲಸದ ಮಹಿಳೆಯ ಮೇಲೆ ಅ***ತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಅಪರಾಧಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆಗಸ್ಟ್ 1 ರಂದು ತೀರ್ಪು ನೀಡಿದೆ.
ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಈ ತೀರ್ಪು ನೀಡಿದ್ದಾರೆ. ಆಗಸ್ಟ್ 2 ರಂದು ಶಿಕ್ಷೆಯ ಪ್ರಮಾಣ ಎಷ್ಟು ಎಂಬುವುದನ್ನು ನ್ಯಾಯಾಧೀಶರು ಪ್ರಕಟಿಸಲಿದ್ದಾರೆ.
ಜುಲೈ 29 ರಂದು ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಧೀಶರು ತೀರ್ಪನ್ನು ಕಾಯ್ದಿರಿಸಿದ್ದರು. ಇದೀಗ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಆದೇಶ ಹೊರಡಿಸಿದ್ದಾರೆ.
ದೋಷಿ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದ ನಂತರ ಪ್ರಜ್ವಲ್ ರೇವಣ್ಣ ಅವರು ಕಣ್ಣೀರಿಡುತ್ತಾ ಕೋರ್ಟ್ ಹಾಲ್ ನಿಂದ ಹೊರ ಬಂದಿದ್ದಾರೆ.
ಏನೀದು ಪ್ರಕರಣ? : ಸರಣಿ ಅ***ತ್ಯಾಚಾರ ಎಸಗಿದ ಆರೋಪಗಳು ಪ್ರಜ್ವಲ್ ರೇವಣ್ಣ ಅವರ ಮೇಲಿದೆ. ಇದರಲ್ಲಿ ಮೈಸೂರು ಜಿಲ್ಲೆಯ ಮಹಿಳೆ ಪ್ರಕರಣವು ಒಂದಾಗಿದೆ. ಪ್ರಕರಣ ಬೆಳಕಿಗೆ ಬರಬಾರದು ಎಂದು ಮಹಿಳೆಯನ್ನು ಅಪಹರಿಸಿ ಹುಣಸೂರು ಬಳಿಯ ತೋಟದ ಮನೆಯಲ್ಲಿ ಕೂಡಿ ಹಾಕಲಾಗಿತ್ತು ಎಂಬ ಆರೋಪಡಿಯೂ ದೂರು ದಾಖಲಾಗಿತ್ತು.
Bengaluru, Aug. 1: The Special Court of People’s Representatives in Bengaluru on August 1 ruled that former JDS MP from Hassan Lok Sabha constituency Prajwal Revanna was guilty in a case related to the alleged rape of a domestic worker.