Let's defeat the conspiracy to erase the name of the Father of the Nation: CM Siddaramaiah's call ರಾಷ್ಟ್ರಪಿತನ ಹೆಸರನ್ನೇ ಅಳಿಸುವ ಪಿತೂರಿಯನ್ನು ಸೋಲಿಸೋಣ : ಸಿ.ಎಂ ಸಿದ್ದರಾಮಯ್ಯ ಕರೆ

bengaluru news | ರಾಷ್ಟ್ರಪಿತನ‌ ಹೆಸರನ್ನೇ ಅಳಿಸುವ ಪಿತೂರಿಯನ್ನು ಸೋಲಿಸೋಣ : ಸಿ.ಎಂ ಸಿದ್ದರಾಮಯ್ಯ ಕರೆ

ಬೆಂಗಳೂರು (bangalore), ಡಿಸೆಂಬರ್ 28: ಕಾಂಗ್ರೆಸ್ ಎಂದರೆ  ಕೇವಲ ಒಂದು ರಾಜಕೀಯ ಪಕ್ಷವಲ್ಲ. ಇದೊಂದು ಚಳುವಳಿ ಮತ್ತು ಸಿದ್ಧಾಂತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ  ವತಿಯಿಂದ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಯ ಭಾರತ್ ಜೋಡೋ ಭವನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ  ಮಾತನಾಡಿದರು.

ನಾವೆಲ್ಲರೂ ಚಳವಳಿಯಲ್ಲಿದ್ದೇವೆ. ಸಮಾನತೆ, ಸಮಾನ ಅವಕಾಶಗಳನ್ನು ಎಲ್ಲರಿಗೂ ಕೊಡಬೇಕು ಎನ್ನುವ ಸಿದ್ಧಾಂತ  ನಮ್ಮದು ಎಂದರು.

ಗ್ರಾಮ ಪಂಚಾಯಿತಿಯಿಂದ ರಾಜ್ಯ ಮಟ್ಟದವರೆಗೆ ಜನವರಿ 5 ರಿಂದ ನಿರಂತರವಾಗಿ ಆಂದೋಲನವನ್ನು ಪ್ರಾರಂಭಿಸಲು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ರಾಷ್ಟ್ರಪಿತನ ಹೆಸರನ್ನೇ ಅಳಿಸಲು ಹೊರಟಿರುವ ಪ್ರಯತ್ನವನ್ನು ವಿಫಲಗೊಳಿಸಬೇಕು. ಗ್ರಾಮೀಣ ಆರ್ಥಿಕತೆಯನ್ನೇ ಹಾಳು ಮಾಡುವ ಹುನ್ನಾರ ಬಿಜೆಪಿಯದ್ದು. MGNAREGA ಕಾರ್ಯಕ್ರಮದಡಿ ದಲಿತರು, ಹಿಂದುಳಿದವರಿಗೆ ಹೆಚ್ಚಾಗಿ ಕೆಲಸ ದೊರಕುತ್ತಿತ್ತು . ಕೇಂದ್ರ ಸರ್ಕಾರ ರಾಜ್ಯಗಳ ಅನುದಾನವನ್ನು ಕೊಡುತ್ತಿತ್ತು. ಈಗ ಹೊಸ ಕಾಯ್ದೆ ಜಾರಿಗೆ ತಂದು, 60% ಕೇಂದ್ರ 40% ರಾಜ್ಯ ಸರ್ಕಾರ ಕೊಡಬೇಕು ಎಂದು ತೀರ್ಮಾನಿಸಿದ್ದಾರೆ. ರಾಜ್ಯಗಳ ಮೇಲೆ ಭಾರಿ ಹೊರೆಯನ್ನೇ ಹೊರೆಸುತ್ತಿದ್ದಾರೆ. ಇದನ್ನು ವಿಫಲಗೊಳಿಸಬೇಕು ಎಂದರು.

ಸತ್ಯಾಗ್ರಹ, ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ಕಾಂಗ್ರೆಸ್. ಇದನ್ನು ಉಳಿಸಿಕೊಳ್ಳುವ ಕೆಲಸ ಮಾಡೋಣ. ಬ್ರಿಟಿಷ್ ಅಧಿಕಾರಿ ಎ. ಒ ಹ್ಯೂಮ್ ಅವರು  ಕಾಂಗ್ರೆಸ್ ಪಕ್ಷವನ್ನು 1885 ರಲ್ಲಿ ಪ್ರಾರಂಭಿಸಿ 148 ವರ್ಷಗಳಾಗಿವೆ. ಬ್ರಿಟಿಷ್ ಆಡಳಿತದ ದಬ್ಬಾಳಿಕೆಯ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಾರಂಭವಾದ ಕಾಂಗ್ರೆಸ್ ನಾಗರಿಕರ ಹಕ್ಕುಗಳ ರಕ್ಷಣೆ, ನ್ಯಾಯಯುತ ಆಡಳಿತಕ್ಕಾಗಿ ಒತ್ತಾಯಿಸಿತು.

ಮುಂಬೈ ನಲ್ಲಿ ಮಾಡಲಾ ಅಧಿವೇಶನ ಪ್ರಾರಂಭವಾದ ನಂತರ ನಿಧಾನವಾಗಿ ಬೆಳಕನ್ನು ಕಾಣುವಂತಾಯಿತು. 1915 ರಲ್ಲಿ ಮಹಾತ್ಮಾ ಗಾಂಧಿ ಯವರನ್ನು ಗೋಖಲೆಯವರು ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ನಾಯಕತ್ವವನ್ನು ವಹಿಸಲು ಗಾಂಧಿಯವರನ್ನು ಆಹ್ವಾನಿಸುತ್ತಾರೆ.

ಡಿಸೆಂಬರ್ 28 ಐತಿಹಾಸಿಕ ದಿನವಾಗಿದ್ದು, ಅದನ್ನು ಮರೆಯಲು ಸಾಧ್ಯವಿಲ್ಲ ದೇಶಕ್ಕೆ   ಸ್ವಾತಂತ್ರ್ಯ ಬಂದಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಜನಸಂಘ, ಆರ್.ಎಸ್.ಎಸ್, ಹಿಂದೂ ಮಹಾ ಸಭಾ , ಬಿಜೆಪಿ  ಸಂಘಟನೆಗಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟದ ವಾರಸುದಾರರು ಕಾಂಗ್ರೆಸ್ ಪಕ್ಷ ಎಂದರು.

ಸ್ವಾತಂತ್ರ್ಯ ಚಳವಳಿ ಪ್ರಾರಂಭವಾಗಿದ್ದ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ 1915 ರಿಂದ ದೇಶದ ಸಾಮಾಜಿಕ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಇಡೀ ದೇಶವನ್ನು ಸುತ್ತಿದ ನಂತರ ಕಾಂಗ್ರೆಸ್ ನೇತೃತ್ವವನ್ನು ಹೊತ್ತುಕೊಂಡರು.

ವಿಶ್ವದಲ್ಲಿಯೇ  ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ. ಅಸಹಕಾರ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭವಾದಾಗಲೂ ಬಿಜೆಪಿ ಇದರಲ್ಲಿ ಪಾಲ್ಗೊಳ್ಳಲಿಲ್ಲ. ಬ್ರಿಟಿಷರೊಂದಿಗೆ ಸೇರಿಕೊಂಡಿದ್ದ ಬಿಜೆಪಿ ನಮಗೆ ದೇಶಭಕ್ತಿಯ ಪಾಠವನ್ನು ಹೇಳಿಕೊಡುತ್ತಾರೆ. ಅವರು ದೇಶಭಕ್ತರಂತೂ ಅಲ್ಲ ಎಂದರು.

ದೇಶಭಕ್ತಿಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿಯ ಒಬ್ಬ ನಾಯಕರೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲಿಲ್ಲ. ಈಗ ಮಹಾತ್ಮಾ ಗಾಂಧಿಯವರನ್ನು ದ್ವೇಷಿಸಲು ಪ್ರಾರಂಭಿಸಿದ್ದಾರೆ. ಗಾಂಧಿಯವರನ್ನು ಕೊಂದವರು ನಾಥುರಾಮ್ ಗೋಡ್ಸೆ. ಬಿಜೆಪಿ ಕಚೇರಿಯ ಮೇಲೆ ಇತ್ತೀಚಿನವರೆಗೆ  ಭಾರತದ ಧ್ವಜವೂ ಹಾರಾಡುತ್ತಿರರಿಲ್ಲ. ಇವರಿಗೆ ದೇಶಕ್ಕೆ ಸ್ವಾತಂತ್ರ್ಯ ಬರುವುದೇ ಇಷ್ಟವಿರಲಿಲ್ಲ ಎಂದರು.

ಸಮಾರಂಭದಲ್ಲಿ ಉಪ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎ ಐ ಸಿ ಸಿ ಕಾರ್ಯದರ್ಶಿ ಗೋಪಿನಾಥ್, ಇಂಧನ ಸಚಿವ ಕೆ. ಜೆ.ಜಾರ್ಜ್ ಮೊದಲಾದವರು ಉಪಸ್ಥಿತರಿದ್ದರು.

Bengaluru, December 28: Chief Minister Siddaramaiah said that Congress is not just a political party, it is a movement and an ideology.

Major work of South Western Railway Mysore Division: Ghat Zone electrification work completed ನೈರುತ್ಯ ರೈಲ್ವೆ ಮೈಸೂರು ವಿಭಾಗದ ಮಹತ್ತರ ಸಾಧನೆ : ಘಾಟ್ ವಲಯ ವಿದ್ಯುದೀಕರಣ ಕಾರ್ಯ ಪೂರ್ಣ Previous post railway news | ನೈರುತ್ಯ ರೈಲ್ವೆ ಮೈಸೂರು ವಿಭಾಗದ ಮಹತ್ತರ ಸಾಧನೆ : ಘಾಟ್ ವಲಯ ವಿದ್ಯುದೀಕರಣ ಕಾರ್ಯ ಪೂರ್ಣ