ಭದ್ರಾವತಿ (bhadravathi), ಜನವರಿ 19: ಭದ್ರಾ ಎಡದಂಡೆ ನಾಲೆಯಲ್ಲಿ ಭಾನುವಾರ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾದ ಪ್ರಕರಣದಲ್ಲಿ, ಜನವರಿ 19 ರ ಮಧ್ಯಾಹ್ನ ನಾಲೆಯಲ್ಲಿ ಓರ್ವರ ಶವ ಪತ್ತೆಯಾಗಿದೆ.
ರವಿ (24) ಎಂಬ ಯುವಕನ ಶವ ಪತ್ತೆಯಾಗಿದೆ. ಕುಟುಂಬ ಸದಸ್ಯರು ನೀರಿನಲ್ಲಿ ಮುಳುಗಿದ್ದಾರೆಂದು ಹೇಳಲಾದ ಸ್ಥಳದಿಂದ ಸ್ವಲ್ಪ ದೂರದಲ್ಲಿಯೇ ರವಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಉಳಿದಂತೆ ನೀಲಾಬಾಯಿ (50), ಮಗಳು ಶ್ವೇತಾ (35) ಹಾಗೂ ಅಳಿಯ ಪರಶುರಾಮ್ (40) ರವರ ಶೋಧ ಕಾರ್ಯವನ್ನು ರಕ್ಷಣಾ ತಂಡಗಳು ನಡೆಸುತ್ತಿವೆ. ಇನ್ನಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.
ಶೋಧ ಕಾರ್ಯಾಚರಣೆಯಲ್ಲಿ ಭದ್ರಾವತಿ ಅಗ್ನಿಶಾಮಕ ದಳದ ಅಧಿಕಾರಿ ಹುಲಿಯಪ್ಪ, ಸಿಬ್ಬಂದಿಗಳಾದ ಬಾಬು, ಆನಂದ್, ಶೇಖರ್, ರಾಜಾನಾಯ್ಕ್, ಮಹೇಂದ್ರ ಭಾಗಿಯಾಗಿದ್ದರು. ಹಾಗೆಯೇ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ದಾವಣಗೆರೆಯ ವಿಪತ್ತು ನಿರ್ವಹಣಾ ತಂಡ ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.
ಏನಾಗಿತ್ತು? : ಭದ್ರಾ ನಾಲೆಯಲ್ಲಿ ಬಟ್ಟೆ ಹೊಗೆಯಲು ನೀಲಾಬಾಯಿ ಕುಟುಂಬದವರು ಆಗಮಿಸಿದ್ದರು. ಈ ವೇಳೆ ನಾಲೆಗೆ ಬಿದ್ದ ಓರ್ವರನ್ನು ರಕ್ಷಿಸಲು ಮುಂದಾದ ವೇಳೆ, ಇತರರು ನೀರುಪಾಲಾಗಿದ್ದರು ಎಂದು ಹೇಳಲಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದರು. ನಾಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಸಂಜೆಯವರೆಗೂ ಯಾರೊಬ್ಬರ ಸುಳಿವು ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಿಗ್ಗೆಯಿಂದ ಮತ್ತೆ ನಾಲೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.
Four Missing in Bhadra Canal: One Body Found! | Bhadravati, January 18: Near Arebilachi village close to Holehonnur in Bhadravati taluk, in the Bhadra Left Bank Canal, in the incident where four members of a single family went missing on Sunday, one body was found in the canal on the afternoon of January 19.
The body of Ravi (24), a young man, has been recovered. It was found a short distance away from the spot where the family members were believed to have drowned.
Search operations are still underway for Neelabai (50), her daughter Shwetha (35), and son-in-law Parashuram (40). More details are awaited. The search operation involved Bhadravati Fire Department officer Huliyappa and staff members Babu, Anand, Shekhar, Rajanayak and Mahendra. Diving expert Ishwar Malpe and the Davangere Disaster Management Team also joined the operation.
What happened? The family of Neelabai had come to the canal to wash clothes. During this time, when one person fell into the canal, others tried to rescue him but ended up drowning themselves, according to reports. As soon as the incident was reported, fire department personnel rushed to the spot and carried out search operations in the canal. By evening, no clues were found. On Monday morning, the search operation resumed again.

