shimoga news | ಶಿವಮೊಗ್ಗ : ಮೆಸ್ಕಾಂ ಸಿಬ್ಬಂದಿ ಮನೆ ಬಳಿ ವಾಮಾಚಾರ!

shimoga news | ಶಿವಮೊಗ್ಗ : ಮೆಸ್ಕಾಂ ಸಿಬ್ಬಂದಿ ಮನೆ ಬಳಿ ವಾಮಾಚಾರ! Shivamogga: black magic Ritual Near MESCOM Staff’s House!

ಶಿವಮೊಗ್ಗ, ಫೆಬ್ರವರಿ 24: ಶಿವಮೊಗ್ಗ ನಗರದ ಹೊರವಲಯ ಕರ್ನಾಟಕ ಗೃಹ ಮಂಡಳಿ ಬಡಾವಣೆಯಲ್ಲಿರುವ ಮೆಸ್ಕಾಂ ಸಿಬ್ಬಂದಿಯೋರ್ವರ ಮನೆ ಬಳಿ ಕಿಡಿಗೇಡಿಗಳು ವಾಮಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಮೆಸ್ಕಾಂ ಸಿಬ್ಬಂದಿ ರಮೇಶ್ ಎಂಬುವರು ವಾಸವಾಗಿರುವ ಬಾಡಿಗೆ ಮನೆಯ ಬಳಿ ಘಟನೆ ನಡೆದಿದೆ. ಚಿಕ್ಕ ಮಡಿಕೆಯೊಂದರಲ್ಲಿ ಅರಿಶಿಷಿಣ, ಕುಂಕುಮ, ಗೊಂಬೆ, ತಲೆಕೂದಲು, ರಿಬ್ಬನ್, ಹಣದ ಕಾಯಿನ್ ಸೇರಿದಂತೆ ಮತ್ತೀತರ ವಸ್ತುಗಳನ್ನು ಇಟ್ಟಿರುವುದು ಕಂಡುಬಂದಿದೆ.

‘ಫೆಬ್ರವರಿ 23 ರ ಸಂಜೆ ಮನೆ ಹಿಂಭಾಗದ ಗೋಡೆ ವಾಮಾಚಾರ ನಡೆಸಿರುವುದು ಕಂಡುಬಂದಿತು. ವಾಮಾಚಾರದ ವಸ್ತುಗಳನ್ನು ಸಮೀಪದ ಕಸದ ರಾಶಿಗೆ ಎಸೆಯಲಾಯಿತು. ಇದೆನ್ನೆಲ್ಲ ನಮ್ಮ ಕುಟುಂಬದವರು ನಂಬುವುದಿಲ್ಲ. ಜನರಲ್ಲಿ ಭಯ ಹುಟ್ಟಿಸಲು ಕೆಲ ದುರ್ಬುದ್ದಿ ಮನಸ್ಥಿತಿಯವರು ವಾಮಾಚಾರದಂತಹ ಅಡ್ಡ ಮಾರ್ಗ ಹಿಡಿಯುತ್ತಾರೆ’ ಎಂದು ಮೆಸ್ಕಾಂ ಸಿಬ್ಬಂದಿ ರಮೇಶ್ ಕುಟುಂಬ ಸದಸ್ಯರು ಹೇಳುತ್ತಾರೆ.

Shivamogga: black magic Ritual Near MESCOM Staff’s House!

Shivamogga, February 24: An incident of black magic practice has come to light near the house of a MESCOM staff member in the Karnataka Housing Board colony on the outskirts of Shivamogga city. The incident occurred near the rented house where MESCOM employee Ramesh resides. A small pot containing turmeric, kumkum, a doll, hair, ribbon, coins, and other items was found placed there. “On the evening of February 23, we noticed that an black magic (occult) ritual had been performed near the back wall of the house. The items used in the ritual were thrown into a nearby garbage heap. Our family doesn’t believe in such things. Some people with ill intentions resort to such practices just to create fear among others,” said Ramesh’s family members.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *