shimoga news | ಶಿವಮೊಗ್ಗ : ಮೋಡ ಕವಿದ ವಾತಾವರಣ – ಹಲವೆಡೆ ತುಂತುರು ಮಳೆ!

Shivamogga : Cloudy Weather – Light Showers in Many Areas! shimoga news | ಶಿವಮೊಗ್ಗ : ಮೋಡ ಕವಿದ ವಾತಾವರಣ – ಹಲವೆಡೆ ತುಂತುರು ಮಳೆ!

ಶಿವಮೊಗ್ಗ, ಫೆಬ್ರವರಿ 25: ಬೇಸಿಗೆ ಆರಂಭದ ವೇಳೆಯೇ, ಶಿವಮೊಗ್ಗ ನಗರದಲ್ಲಿ ಸುಡು ಬಿಸಿಲು ಕಂಡುಬರಲಾರಂಭಿಸಿದೆ. ಕಳೆದ ಹಲವು ದಿನಗಳಿಂದ ತಾಪಮಾನದ ಪ್ರಮಾಣದಲ್ಲಿ ದಿಡೀರ್ ಹೆಚ್ಚಳವಾಗಿದ್ದು, ನಾಗರಿಕರನ್ನು ಹೈರಾಣಾಗಿಸುವಂತೆ ಮಾಡಿದೆ.

ಈ ನಡುವೆ ದಿಡೀರ್ ಆಗಿ ನಗರದ ಹವಾಮಾನದಲ್ಲಿ ಬದಲಾವಣೆ ಕಂಡುಬಂದಿದೆ. ಫೆಬ್ರವರಿ 25 ರ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ನೆಲೆಸಿದೆ. ಕೆಲವೆಡೆ ಆಗಾಗ್ಗೆ ತುಂತುರು ಮಳೆಯಾಗುತ್ತಿದೆ. ಬಿಸಿಲ ಬೇಗೆಯ ಪ್ರಮಾಣ ಸಂಪೂರ್ಣ ಕಡಿಮೆಯಾಗಿದೆ. ತಣ್ಣನೆಯ ವಾತಾವರಣ ನೆಲೆಸಿದೆ.

ಹವಾಮಾನ ವೈಪರೀತ್ಯ : ಅರಬ್ಬಿ ಸಮುದ್ರದ ಸೌರಾಷ್ಟ್ರ ಪ್ರದೇಶ ಹಾಗೂ ಕೇರಳ ಕರಾವಳಿಯ ಸಮೀಪ ಸುಳಿಗಾಳಿ ವ್ಯವಸ್ಥೆ ಉಂಟಾಗಿದೆ. ಜೊತೆಗೆ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವು ಮುಂದುವರಿದಿರುವುದರಿಂದ ಹವಾಮಾನದಲ್ಲಿ ವೈಪರೀತ್ಯ ಉಂಟಾಗಿದೆ.

Shivamogga : Cloudy Weather – Light Showers in Many Areas!

Shivamogga, February 25: Even at the very beginning of summer, scorching heat has started to be felt in Shivamogga city. Over the past several days, the sudden rise in temperature has been troubling residents.

Meanwhile, an abrupt change in the city’s weather has been observed. From the afternoon of February 25, cloudy conditions have set in. In some places, occasional light showers are occurring. The intensity of the heat has completely reduced, and a cool atmosphere has settled in.

Weather Disturbance: A cyclonic system has developed near the Saurashtra region of the Arabian Sea and along the Kerala coast. In addition, a low-pressure area continues over the southeast Bay of Bengal, leading to this weather variation.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *