shimoga crime news | ಶಿವಮೊಗ್ಗ ನಗರದ ಶಾದಿ ಮಹಲ್ ಗಳಲ್ಲಿ ಕಳವು ಮಾಡುತ್ತಿದ್ದ ಮಹಿಳೆ ಅರೆಸ್ಟ್!

Woman Arrested for Thefts in Shivamogga Wedding Halls! ಶಿವಮೊಗ್ಗ ನಗರದ ಶಾದಿ ಮಹಲ್ ಗಳಲ್ಲಿ ಕಳವು ಮಾಡುತ್ತಿದ್ದ ಮಹಿಳೆ ಅರೆಸ್ಟ್! crime news

ಶಿವಮೊಗ್ಗ (shivamogga), ಮಾರ್ಚ್ 09: ಶಾದಿ ಮಹಲ್ ಗಳಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಗಳಲ್ಲಿ ಭಾಗವಹಿಸಿ, ಚಿನ್ನಾಭರಣ ಕಳವು ಮಾಡಿ ಪರಾರಿಯಾಗುತ್ತಿದ್ದ ಆರೋಪದ ಮೇರೆಗೆ ಮಹಿಳೆಯೋರ್ವಳನ್ನು ಶಿವಮೊಗ್ಗ ತುಂಗಾ ನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಶಿವಮೊಗ್ಗದ ಸೂಳೇಬೈಲು ಬಡಾವಣೆ ನಿವಾಸಿ ರುಕ್ಸಾರ್ ಫಿರ್ದೋಸ್ ಕೋಂ ಮೊಹಮ್ಮದ್ ನಯಾಜ್ (30) ಬಂಧಿತ ಮಹಿಳೆ ಎಂದು ಗುರುತಿಸಲಾಗಿದೆ. ಆಪಾದಿತಳನ್ನು ಮಾರ್ಚ್ 07 ರಂದು ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾರ್ಚ್ 09 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಆಪಾದಿತಳಿಂದ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾದಿ ಮಹಲ್ ಗಳಲ್ಲಿ ನಡೆದಿದ್ದ 4 ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ, 1.80 ಲಕ್ಷ ರೂ. ಮೌಲ್ಯದ 120 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ತುಂಗಾನಗರ ಠಾಣೆ ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್, ಸಬ್ ಇನ್ಸ್’ಪೆಕ್ಟರ್ ಗಾದಿಲಿಂಗಪ್ಪ ಗೌಡರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕಿರಣ್ ಮೋರೆ, ಅರುಣ್ ಕುಮಾರ್, ಶೋಭಾರಾಣಿ, ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ್, ಹರೀಶ್, ರಂಗನಾಥ್, ತಮ್ಮ ಜಂಬಗಿರವರು ಆಪಾದಿತಳನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.

Woman Arrested for Thefts in Shivamogga Wedding Halls!

Shivamogga, March 09: A woman who used to attend wedding ceremonies at Shaadi Mahals (wedding halls) and steal gold ornaments has been arrested by the Tunga Nagar Police Station in Shivamogga.

The arrested woman has been identified as Ruksar Firdose alias Mohammad Nayaz (30), a resident of Soolibailu locality in Shivamogga. She was taken into custody on March 07, according to a press release issued by the police department on March 09.

Police recovered 120 grams of gold ornaments worth ₹1.80 lakh from her possession, linked to four theft cases that occurred in wedding halls within the Tunga Nagar Police Station limits.

The arrest was successfully carried out under the leadership of Inspector K.T. Gururaj and Sub-Inspector Gadilingappa Gowdar, along with staff members Kiran More, Arun Kumar, Shobharani, Nagappa Adiveppanavar, Harish Naik, Harish, and Ranganath.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *