shimoga | ಶಿವಮೊಗ್ಗ | ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯ : ಪ್ರಯಾಣಿಕರೆ ಗಮನಿಸಿ!

shimoga news | Disruption in Major Train Services: Passengers Take Note!ಶಿವಮೊಗ್ಗ | ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯ : ಪ್ರಯಾಣಿಕರೆ ಗಮನಿಸಿ!

ಶಿವಮೊಗ್ಗ (shivamogga), ಮಾರ್ಚ್ 09: ಹಾಸನ ಮತ್ತು ಮಾವಿನಕೆರೆ ರೈಲು ನಿಲ್ದಾಣಗಳ ನಡುವೆ ಕೆಳಸೇತುವೆ (ಆರ್‌ಯುಬಿ) ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ರದ್ದು: ಮಾರ್ಚ್ 16ರಂದು ರೈಲು ಸಂಖ್ಯೆ 56267 ಅರಸೀಕೆರೆ–ಮೈಸೂರು ಪ್ಯಾಸೆಂಜರ್, ರೈಲು ಸಂಖ್ಯೆ 16206 ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 16205 ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಭಾಗಶಃ ರದ್ದು: ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಮಾರ್ಚ್ 16ರಂದು ಮೈಸೂರು ಮತ್ತು ಅರಸೀಕೆರೆ ನಡುವೆ ಸಂಚರಿಸುವುದಿಲ್ಲ. ಅಂದು ಈ ರೈಲು ಮೈಸೂರಿನ ಬದಲಿಗೆ ಅರಸೀಕೆರೆಯಿಂದಲೇ ತನ್ನ ಪ್ರಯಾಣ ಆರಂಭಿಸಲಿದೆ.

ನಿಯಂತ್ರಣ : ಮಾ. 10 ರಂದು ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ (16206) ಮಾರ್ಗಮಧ್ಯೆ 25 ನಿಮಿಷ ನಿಯಂತ್ರಣವಾಗಲಿದೆ. ಮಾ. 16 ರಂದು ಮೈಸೂರು–ಅರಸೀಕೆರೆ ಪ್ಯಾಸೆಂಜರ್ (56266) 70 ನಿಮಿಷ ಹಾಗೂ ಮೈಸೂರು–ಯಶವಂತಪುರ ಎಕ್ಸ್‌ಪ್ರೆಸ್ (16208) 30 ನಿಮಿಷ ಮಾರ್ಗಮಧ್ಯೆ ತಡೆಹಿಡಿಯಲಾಗುವುದು.

ಸಮಯ ಮರುನಿಗದಿ: ಮಾರ್ಚ್ 10ರಂದು ಅರಸೀಕೆರೆ–ಮೈಸೂರು ಪ್ಯಾಸೆಂಜರ್ (56267) ಮತ್ತು ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (16225) ರೈಲುಗಳು ನಿಗದಿತ ಸಮಯಕ್ಕಿಂತ 90 ನಿಮಿಷ ತಡವಾಗಿ ಹೊರಡಲಿವೆ.

ಅದೇ ರೀತಿ, ಮಾರ್ಚ್ 16ರಂದು ಅರಸೀಕೆರೆ–ಮೈಸೂರು ಪ್ಯಾಸೆಂಜರ್ (56265) ಮತ್ತು ಮೈಸೂರು–ಎಸ್‌ಎಂವಿಟಿ ಬೆಂಗಳೂರು ಪ್ಯಾಸೆಂಜರ್ (06269) ರೈಲುಗಳು ನಿಗದಿತ ಸಮಯಕ್ಕಿಂತ 60 ನಿಮಿಷ ತಡವಾಗಿ ಸಂಚರಿಸಲಿವೆ.

shimoga news | Disruption in Major Train Services: Passengers Take Note!

Shivamogga, March 09: Due to construction work on a Road Under Bridge (RUB) between Hassan and Mavinakere railway stations, several train services will be affected.

  • Cancelled (March 16):
    • Train 56267 Arsikere–Mysuru Passenger
    • Train 16206 Mysuru–Talaguppa Express
    • Train 16205 Talaguppa–Mysuru Express
  • Partially Cancelled (March 16):
    • Train 16225 Mysuru–Shivamogga Town Express will not run between Mysuru and Arsikere. On this day, it will start its journey from Arsikere instead of Mysuru.
  • Regulated Services:
    • March 10: Train 16206 Mysuru–Talaguppa Express will be delayed by 25 minutes en route.
    • March 16: Train 56266 Mysuru–Arsikere Passenger will be delayed by 70 minutes, and Train No. 16208 Mysuru–Yesvantpur Express will be delayed by 30 minutes en route.
  • Rescheduled Services:
    • March 10: Train 56267 Arsikere–Mysuru Passenger and Train No. 16225 Mysuru–Shivamogga Town Express will depart 90 minutes later than scheduled.
    • March 16: Train 56265 Arsikere–Mysuru Passenger and Train No. 06269 Mysuru–SMVT Bengaluru Passenger will depart 60 minutes later than scheduled.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *