shimoga | hulikal ghat news | ಹುಲಿಕಲ್ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ತಾತ್ಕಾಲಿಕ ಬಂದ್ : ಪರ್ಯಾಯ ಮಾರ್ಗ ವ್ಯವಸ್ಥೆ

Temporary Closure of Hulikal Ghat Road: Alternative Routes Arrangedಹುಲಿಕಲ್ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ತಾತ್ಕಾಲಿಕ ಬಂದ್ : ಪರ್ಯಾಯ ಮಾರ್ಗ ವ್ಯವಸ್ಥೆ

ಶಿವಮೊಗ್ಗ (shivamogga), ಏಪ್ರಿಲ್ 11: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮತ್ತು ಕುಂದಾಪುರವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ-52 ರ ಹುಲಿಕಲ್ ಘಾಟ್ (ಬಾಳೆಬರೆ ಘಾಟ್) ರಸ್ತೆಯಲ್ಲಿ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಜಿಲ್ಲಾಡಳಿತ  ಆದೇಶಿಸಿದೆ.

ಕಳೆದ ಮಳೆಗಾಲದಲ್ಲಿ ಈ ಮಾರ್ಗದ ಹೇರ್‌ಪಿನ್ ತಿರುವಿನಲ್ಲಿ ಭೂಕುಸಿತ ಸಂಭವಿಸಿತ್ತು. ಇದರ ದುರಸ್ತಿಗಾಗಿ ತಡೆಗೋಡೆ ನಿರ್ಮಾಣ ಮತ್ತು ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿತ್ತು. ಆದರೆ, ಏಪ್ರಿಲ್ 09 ರಂದು  ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಸುಮಾರು 12 ಮೀಟರ್ ಎತ್ತರದಿಂದ ಮತ್ತೆ ಭೂಕುಸಿತ ಉಂಟಾಗಿದ್ದು, ಕಾಂಕ್ರೀಟ್ ರಸ್ತೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ರಸ್ತೆಯು ಸಂಚಾರಕ್ಕೆ ಯೋಗ್ಯವಾಗಿಲ್ಲದ ಕಾರಣ, ಕಾಮಗಾರಿ ಪೂರ್ಣಗೊಳ್ಳುವವರೆಗೆ ರಸ್ತೆಯನ್ನು ಬಂದ್ ಮಾಡಲಾಗಿದೆ.

ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳು: ಘಾಟ್ ರಸ್ತೆ ಬಂದ್ ಆಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಈ ಕೆಳಗಿನ ಪರ್ಯಾಯ ರಸ್ತೆಗಳನ್ನು ಬಳಸಲು ಸೂಚಿಸಲಾಗಿದೆ:

ತೀರ್ಥಹಳ್ಳಿಯಿಂದ ಕುಂದಾಪುರಕ್ಕೆ ಹೋಗುವ ಭಾರಿ ವಾಹನಗಳು: ತೀರ್ಥಹಳ್ಳಿ -> ರಾವೆ -> ಕಾನುಗೋಡು -> ನಗರ -> ಕೊಲ್ಲೂರು -> ಕುಂದಾಪುರ ರಸ್ತೆ.

ಯಡೂರು/ಮಾಸ್ತಿಕಟ್ಟೆ ಮಾರ್ಗವಾಗಿ ಹೋಗುವ ಭಾರಿ ವಾಹನಗಳು: ತೀರ್ಥಹಳ್ಳಿ -> ಕಾನುಗೋಡು -> ನಗರ -> ಕೊಲ್ಲೂರು -> ಕುಂದಾಪುರ ರಸ್ತೆ.

ಶಿವಮೊಗ್ಗ/ಸಾಗರದಿಂದ ಹೊಸನಗರ ಮಾರ್ಗವಾಗಿ ಹೋಗುವ ಭಾರಿ ವಾಹನಗಳು: ಶಿವಮೊಗ್ಗ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ -> ಹೊನ್ನಾವರ -> ಭಟ್ಕಳ -> ಬೈಂದೂರು -> ಕುಂದಾಪುರ ರಸ್ತೆ.

ಈ ಬದಲಾವಣೆಯು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ರಕ್ಷಣಾತ್ಮಕ ಕಾಮಗಾರಿ ಮುಗಿಯುವವರೆಗೆ ಚಾಲ್ತಿಯಲ್ಲಿರುತ್ತದೆ. ಸಾರ್ವಜನಿಕರು ಸಹಕರಿಸಬೇಕೆಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ.  ತಿಳಿಸಿದ್ದಾರೆ.

Temporary Closure of Hulikal Ghat Road: Alternative Routes Arranged

Shivamogga, April 11: The district administration has ordered a temporary ban on all types of vehicular traffic along Hulikal Ghat (Baalebare Ghat) on State Highway-52, which connects Tirthahalli and Kundapura, due to a landslide.

Last monsoon, a landslide had occurred at one of the hairpin bends on this route. Repair works, including construction of retaining walls and road widening, were underway. However, on April 9, another landslide occurred at the worksite from a height of about 12 meters, causing cracks on the concrete road. Considering passenger safety, the road has been declared unfit for travel and will remain closed until the repair work is completed.

Alternative routes for vehicles:

  • Heavy vehicles from Tirthahalli to Kundapura: Tirthahalli → Rave → Kanugodu → Nagara → Kollur → Kundapura road.
  • Heavy vehicles via Yadur/Mastikatte: Tirthahalli → Kanugodu → Nagara → Kollur → Kundapura road.
  • Heavy vehicles from Shivamogga/Sagara via Hosanagara: Shivamogga–Honnavar National Highway → Honnavar → Bhatkal → Byndoor → Kundapura road.

This diversion takes immediate effect and will remain in force until protective works are completed. The Additional Deputy Commissioner, Abhishek V., has requested public cooperation.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *