shimoga railway news | ಮೈಸೂರು – ತಾಳಗುಪ್ಪ, ಮೈಸೂರು – ಶಿವಮೊಗ್ಗ ರೈಲುಗಳ ಸಂಚಾರದಲ್ಲಿ ವ್ಯತ್ಯಯ : ಯಾವಾಗ? ಕಾರಣವೇನು?

Due to safety-related works at Hassan Yard changes will be made to train services as detailed below ಮೈಸೂರು – ತಾಳಗುಪ್ಪ ಮೈಸೂರು – ಶಿವಮೊಗ್ಗ ರೈಲುಗಳ ಸಂಚಾರದಲ್ಲಿ ವ್ಯತ್ಯಯ : ಯಾವಾಗ? ಕಾರಣವೇನು?

ಶಿವಮೊಗ್ಗ (shivamogga), ಏಪ್ರಿಲ್ 23: ರೈಲು ಸಂಖ್ಯೆ 16206 ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 16205 ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 56267 ಅರಸೀಕೆರೆ–ಮೈಸೂರು ಪ್ಯಾಸೆಂಜರ್ ರೈಲುಗಳು 2026 ಏಪ್ರಿಲ್ 29, ಮೇ 4 ಮತ್ತು ಮೇ 6 ರಂದು ರದ್ದುಗೊಳ್ಳಲಿದೆ.

ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು 2026 ಏಪ್ರಿಲ್ 29, ಮೇ 4 ಮತ್ತು ಮೇ 6 ರಂದು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಗೊಂಡಿದ್ದು, ಈ ರೈಲು ಅರಸೀಕೆರೆ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.

ಅದೇ ರೀತಿಯಲ್ಲಿ, ರೈಲು ಸಂಖ್ಯೆ 56266 ಮೈಸೂರು–ಅರಸೀಕೆರೆ ಪ್ಯಾಸೆಂಜರ್ ರೈಲು ಮಾವಿನಕೆರೆ ಮತ್ತು ಅರಸೀಕೆರೆ ನಡುವಿನ ಸೇವೆ ಭಾಗಶಃ ರದ್ದುಗೊಳ್ಳಲಿದ್ದು, 2026 ಏಪ್ರಿಲ್ 29, ಮೇ 4 ಮತ್ತು ಮೇ 6 ರಂದು ಮಾವಿನಕೆರೆ ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.

ರೈಲು ಸಂಖ್ಯೆ 16515 ಯಶವಂತಪುರ–ಕಾರವಾರ ಎಕ್ಸ್‌ಪ್ರೆಸ್ ರೈಲು 2026 ಏಪ್ರಿಲ್ 29, ಮೇ 4 ಮತ್ತು ಮೇ 6 ರಂದು ಬೆಂಗಳೂರು ವಿಭಾಗದಲ್ಲಿ ಸುಮಾರು 65 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿದೆ ಎಂದು ಮೈಸೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪೃಥ್ವಿ ಎಸ್ ಹುಲ್ಲತಿರವರು ತಿಳಿಸಿದ್ದಾರೆ.

Due to safety-related works at Hassan Yard, changes will be made to train services as detailed below

Train No. 16206 Mysuru–Talguppa Express, Train No. 16205 Talguppa–Mysuru Express, and Train No. 56267 Arsikere–Mysuru Passenger will be  cancelled on 29 April, 4 May, and 6 May 2026.

Train No. 16225 Mysuru–Shivamogga Town Express will be partially cancelled between Mysuru and Arsikere and will originate from Arsikere at its scheduled departure time, on 29 April, 4 May and 6 May, 2026.

Similarly, Train No. 56266 Mysuru–Arsikere Passenger will be partially cancelled between Mavinkere and Arsikere, will be terminated at Mavinkere on 29 April, 4 May and 6 May, 2026.

Train No. 16515 Yesvantpur–Karwar Express will be regulated en route for 65 minutes over the Bengaluru Division on 29 April, 4 May and 6 May, 2026.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *