shimoga sslc result | ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಶಿವಮೊಗ್ಗಕ್ಕೆ ಶೇ.96.56 ಫಲಿತಾಂಶ

SSLC Exam: Shivamogga gets 96.56% result shimoga sslc result | ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಶಿವಮೊಗ್ಗಕ್ಕೆ ಶೇ.96.56 ಫಲಿತಾಂಶ

ಶಿವಮೊಗ್ಗ (shivamogga), April 22 :  ಎಸ್ ಎಸ್ ಎಲ್ ಸಿ  ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶಿವಮೊಗ್ಗ ಜಿಲ್ಲೆ ಶೇ.96.56 ಫಲಿತಾಂಶದೊಂದಿಗೆ ರಾಜ್ಯ ಮಟ್ಟದಲ್ಲಿ 9 ನೇ ಸ್ಥಾನದಲ್ಲಿದೆ.

ಜಿಲ್ಲೆಯಲ್ಲಿ ಈ ಬಾರಿ 21,692 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 20,946 ವಿದ್ಯಾರ್ಥಿಗಳು ಉತ್ತೀ ರ್ಣರಾಗಿದ್ದಾರೆ. ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರೇ ಮೇ ಲುಗೈ ಸಾಧಿಸಿದ್ದು, 11,282 ವಿದ್ಯಾರ್ಥಿ ನಿಯರು ಪರೀಕ್ಷೆ ಬರೆದಿದ್ದು,ಈ ಪೈಕಿ 11,010 ವಿದ್ಯಾರ್ಥಿನಿಯರು ಪಾಸಾಗಿ ದ್ದು, ಶೇ.97.59 ಫಲಿತಾಂಶ ಪಡೆದಿದ್ದಾರೆ.

ಆದರೆ 10,410 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 9936 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 95.45 ಫಲಿತಾಂಶ ಬಂದಿದೆ. ತೀರ್ಥಹಳ್ಳಿ ತಾಲೂಕು ಅತಿ ಹೆಚ್ಚು ಫಲಿತಾಂಶ ಪಡೆದಿದ್ದು, 1488 ವಿದ್ಯಾ ರ್ಥಿಗಳ ಪೈಕಿ 1482 ಮಕ್ಕಳು ಉತ್ತೀರ್ಣರಾಗಿದ್ದಾರೆ. ಶೇ.99.60 ಫಲಿತಾಂಶ ಬಂದಿದೆ.

ತೀರ್ಥಹಳ್ಳಿಯ ವಾಗ್ದೇವಿ ಶಾಲೆಯ ಅನಘ 624 / 625 ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಶಿವಮೊಗ್ಗ ನಗರದ ಪ್ರಿಯದರ್ಶಿನಿ ಶಾಲೆಯ ಆಂಗ್ಲಭಾಷೆಯ ವಿದ್ಯಾರ್ಥಿನಿ ಕೃತಿ 623/625 ಅಂಕ ತೆಗೆದು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ.

ಶಿವಮೊಗ್ಗದ ವಿಕಾಸ ವಿದ್ಯಾ ಸಮಿತಿಯ ವಿದ್ಯಾರ್ಥಿ ಚಿತ್ತ ಸುಕಿ ನಾಡಿಗ್ 621 ಅಂಕಗಳಿಸುವದರೊಂದಿಗೆ ಜಿಲ್ಲೆಗೆ 3 ನೇ ಸ್ಥಾನ ಪಡೆದಿದ್ದಾರೆ. ಈ ಬಾರಿ ಜಿಲ್ಲೆಯ ಯಾವ ಶಾಲೆಯು ಶೂನ್ಯ ಫಲಿತಾಂಶ ಪಡೆದಿಲ್ಲ.84 ಸರ್ಕಾರಿ ಶಾಲೆಗಳು ಸೇರಿದಂತೆ  258 ಶಾಲೆಗಳು ಶೇ.100 ಫಲಿತಾಂಶ ಪಡೆದಿರುವುದು ವಿಶೇಷ.

SSLC Exam: Shivamogga gets 96.56% result

Shivamogga: SSLC exam results have been announced, and Shivamogga district is ranked 9th in the state with a result of 96.56%.

This time, 21,692 students wrote the exam in the district, out of which 20,946 students passed. Female students dominated in the district, 11,282 male students wrote the exam, out of which 11,010 female students passed, getting a result of 97.59%.

However, 10,410 students wrote the exam, 9936 students passed, getting a result of 95.45%. Thirthahalli taluk got the highest result, out of 1488 students, 1482 children passed. The result was 99.60%.

Anagha of Vagdevi School in Thirthahalli secured second position in the state by scoring 624/625 marks. Kriti, an English language student from Priyadarshini School in Shivamogga city, secured third position in the state by scoring 623/625 marks. Chitta Suki Nadig, a student of Vikas Vidya Samiti in Shivamogga, secured third position in the district by scoring 621 marks.

This time, no school in the district got zero results. It is special that 258 schools, including 84 government schools, got 100 percent results.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *