shimoga news | ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರಿಂದ ಫುಟ್’ಪಾತ್ ಒತ್ತುವರಿ ತೆರವು ಕಾರ್ಯಾಚರಣೆ!

Traffic police conduct footpath encroachment clearance operation on Kuvempu Road in Shivamogga! | Shivamogga, August 10: Footpath encroachment clearance operation continues in Shivamogga city. On August 10, the traffic police, in collaboration with the Municipal Corporation, conducted an operation on Kuvempu Road. Traffic Inspector Devaraj, Sub-Inspector Swapna and other municipal officers and staff were present during the operation.

ಶಿವಮೊಗ್ಗ (shivamogga), ಆಗಸ್ಟ್ 10: ಶಿವಮೊಗ್ಗ ನಗರದಲ್ಲಿ ಫುಟ್’ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ಆಗಸ್ಟ್ 10 ರಂದು ಟ್ರಾಫಿಕ್ ಪೊಲೀಸರು, ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಕುವೆಂಪು ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದರು.

ಟ್ರಾಫಿಕ್ ಇನ್ಸ್’ಪೆಕ್ಟರ್ ದೇವರಾಜ್, ಸಬ್ ಇನ್ಸ್’ಪೆಕ್ಟರ್ ಸ್ವಪ್ನಾ ಸೇರಿದಂತೆ ಪಾಲಿಕೆ ಅಧಿಕಾರಿ – ಸಿಬ್ಬಂದಿಗಳು ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು.

ದಟ್ಟಣೆ : ಪ್ರವಾಸಿ ಮಂದಿರ ಸರ್ಕಲ್ ಸಮೀಪದಿಂದ ಶಿವಮೂರ್ತಿ ಸರ್ಕಲ್ ವರೆಗಿನ ಕುವೆಂಪು ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಸದರಿ ರಸ್ತೆಯ ಅಭಿವೃದ್ದಿ ಕಾಮಗಾರಿಯ ನಂತರ, ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.

ಈ ನಡುವೆ ರಸ್ತೆಯ ಇಕ್ಕೆಲಗಳ ಫುಟ್’ಪಾತ್ ಒತ್ತುವರಿಯಾಗಿತ್ತು. ವ್ಯಾಪಾರ – ವಹಿವಾಟು ಮಾತ್ರವಲ್ಲದೆ ವಾಹನಗಳ ನಿಲುಗಡೆ ಮಾಡಲಾಗುತ್ತಿತ್ತು. ಇದರಿಂದ ವಾಹನ ಸಂಚಾರ ಮಾತ್ರವಲ್ಲದೆ, ಪಾದಚಾರಿಗಳ ಓಡಾಟವು ದುಸ್ತರವಾಗಿ ಪರಿಣಮಿಸಿತ್ತು.

ಇದೀಗ ಟ್ರಾಫಿಕ್ ಇನ್ಸ್’ಪೆಕ್ಟರ್ ದೇವರಾಜ್ ಅವರು ಕುವೆಂಪು ರಸ್ತೆಯಲ್ಲಿ ಫುಟ್’ಪಾತ್ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ. ಇದು ಸ್ವಾಗತಾರ್ಹ ಸಂಗತಿಯಾಗಿದೆ ಎಂದು ನಾಗರಿಕರು ಅಭಿಪ್ರಾಯಪಡುತ್ತಾರೆ.

Traffic police conduct footpath encroachment clearance operation on Kuvempu Road in Shivamogga! | Shivamogga, August 10: Footpath encroachment clearance operation continues in Shivamogga city. On August 10, the traffic police, in collaboration with the Municipal Corporation, conducted an operation on Kuvempu Road. Traffic Inspector Devaraj, Sub-Inspector Swapna and other municipal officers and staff were present during the operation.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *