shimoga news | ಶಾಲೆ ತೊರೆದ ಮಕ್ಕಳ ಭವಿಷ್ಯಕ್ಕಾಗಿ ಫೀಲ್ಡಿಗಿಳಿದ ಶಿವಮೊಗ್ಗ ಎಸ್ಪಿ, ಬಿಇಓ, ಇಓ!

Shimoga, August 09: In a remarkable initiative for the future of children who have dropped out of school, Shimoga’s SP, BEO, EO, along with officials and staff from various departments, literally went village to village on August 10, Monday.
ವರದಿ : ಬಿ. ರೇಣುಕೇಶ್

ಶಿವಮೊಗ್ಗ (shivamogga), ಆಗಸ್ಟ್ 09: ಶಾಲೆ ತೊರೆದ ಮಕ್ಕಳ ಭವಿಷ್ಯಕ್ಕಾಗಿ ಶಿವಮೊಗ್ಗದ ಎಸ್ಪಿ, ಬಿಇಓ, ಇಓ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು – ಸಿಬ್ಬಂದಿಗಳು ಆಗಸ್ಟ್ 10 ರ ಸೋಮವಾರ ಅಕ್ಷರಶಃ ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಶಿವಮೊಗ್ಗ ತಾಲೂಕಿನ ಹಳ್ಳಿ ಹಳ್ಳಿ ಸುತ್ತಿದ ಘಟನೆ ನಡೆದಿದೆ!

ಹೌದು. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ವಿಶೇಷ ಅಭಿಯಾನವನ್ನು ಆಗಸ್ಟ್ 10 ಮತ್ತು 11 ರಂದು ಹಮ್ಮಿಕೊಳ್ಳಲಾಗಿದೆ. ಇದರ ಯಶಸ್ವಿಗಾಗಿ ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಪೊಲೀಸ್ ಇಲಾಖೆಯು ಜಂಟಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿವೆ.

ಸೋಮವಾರ ಎಸ್ಪಿ ನಿಖಿಲ್ ಬಿ, ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ರಮೇಶ್ ನಾಯ್ಕ್, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ (ಇಓ) ಪರಮೇಶ್ವರ್ ಅವರು ಶಿವಮೊಗ್ಗ ತಾಲೂಕಿನ ವಿವಿಧ ಗ್ರಾಮಗಳಿಗೆ ದಿಡೀರ್ ಭೇಟಿ ನೀಡಿದ್ದರು.

ಈ ಮೊದಲೇ ಶಿಕ್ಷಣ ಇಲಾಖೆಯು ಶಾಲೆ ತೊರೆದ ಮಕ್ಕಳ ಪಟ್ಟಿಯನ್ನು ಸಿದ್ದಪಡಿಸಿತ್ತು. ಯಾವ್ಯಾವ ಗ್ರಾಮಗಳಲ್ಲಿ ಸದರಿ ಮಕ್ಕಳಿದ್ದಾರೆ, ಶಾಲೆ ತೊರೆದು ಏನೆಲ್ಲ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂಬ ಸಮಗ್ರವಿವರವನ್ನು ಮಾಹಿತಿ ಕಲೆ ಹಾಕಿತ್ತು. ಪ್ರತ್ಯೇಕ ಪಟ್ಟಿ ಸಿದ್ದಪಡಿಸಿತ್ತು.

ಇದರ ಆಧಾರದ ಮೇಲೆ ಅಧಿಕಾರಿಗಳ ತಂಡವು ಸದರಿ ಮಕ್ಕಳ ಮನೆ ಹಾಗೂ ಅವರಿರುವ ಸ್ಥಳಗಳಿಗೆ ಬೆಳಿಗ್ಗೆಯಿಂದಲೇ ದಿಡೀರ್ ಭೇಟಿ ನೀಡಲಾರಂಭಿಸಿತ್ತು. ಅಧಿಕಾರಿಗಳ ತಂಡವು ಮಕ್ಕಳು ಹಾಗೂ ಅವರ ಪೋಷಕರೊಂದಿಗೆ ಸಮಾಲೋಚಿಸಿ, ಶಿಕ್ಷಣದ ಮಹತ್ವದ ಬಗ್ಗೆ ತಿಳಿ ಹೇಳಿದೆ.

ಜೊತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ಕಡ್ಡಾಯ ಶಿಕ್ಷಣ, ಬಾಲ ಕಾರ್ಮಿಕ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೆಲ್ಲದರ ಫಲವಾಗಿ ಹಲವು ಪೋಷಕರು ತಮ್ಮ ಮಕ್ಕಳನ್ನು ಮತ್ತೆ ಶಾಲೆಗೆ ಸೇರ್ಪಡೆಯ ನಿಲುವು ಪ್ರಕಟಿಸಿದ್ದಾರೆ.

ಅಧಿಕಾರಿಗಳ ತಂಡವೇ ಸದರಿ ಮಕ್ಕಳನ್ನು ಸಮೀಪದ ಸರ್ಕಾರಿ ಶಾಲೆಗೆ ಕರೆತಂದು ಮರು ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಆಗಸ್ಟ್ 11 ರಂದು ಕೂಡ ಶಾಲೆ ತೊರೆದ ಮಕ್ಕಳ ಭೇಟಿಯ ಕಾರ್ಯಕ್ರಮವನ್ನು ಅಧಿಕಾರಿಗಳ ತಂಡ ಸಿದ್ದಪಡಿಸಿದೆ.

ವ್ಯವಸ್ಥಿತ ಕ್ರಮ : ಶಿವಮೊಗ್ಗ ತಾಲೂಕಿನಲ್ಲಿ ಒಟ್ಟಾರೆ ಶಾಲೆ ತೊರೆದ 67 ಜನ ಮಕ್ಕಳನ್ನು ಗುರುತಿಸಲಾಗಿತ್ತು. ಈಗಾಗಲೇ ಈ ಮಕ್ಕಳನ್ನು ಸ್ಥಳೀಯ ಶಾಲೆಗಳ ಶಿಕ್ಷಕರು ಭೇಟಿಯಾಗಿ ಮನವೊಲಿಸುವ ಕಾರ್ಯ ನಡೆಸಿದ್ದರು. ಆದರೆ ಇವರು ಮಾತ್ರ ಶಾಲೆಯತ್ತ ಮುಖ ಮಾಡಿರಲಿಲ್ಲ.

ಇದೀಗ ಸೋಮವಾರ ಅರ್ಧದಷ್ಟು ಮಕ್ಕಳನ್ನು ಶಾಲೆಗೆ ತರುವಲ್ಲಿ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ. ಮಂಗಳವಾರ ಮತ್ತೆ ಕಾರ್ಯಾಚರಣೆ ಮುಂದುವರಿಯಲಿದೆ. ಉಳಿದ ಮಕ್ಕಳನ್ನು ಕೂಡ ಶಾಲೆಗೆ ಮರಳಿ ತರಲಾಗುವುದು. ಶಿವಮೊಗ್ಗ ತಾಲೂಕಿನಲ್ಲಿ ಯಾವೊಬ್ಬ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಮಾಡಲಾಗುವುದು ಎಂದು ಬಿಇಓ ರಮೇಶ್ ನಾಯ್ಕ್ ಅವರು ತಿಳಿಸುತ್ತಾರೆ.

ಒಟ್ಟಾರೆ ಶಿವಮೊಗ್ಗ ತಾಲೂಕಿನಲ್ಲಿ ಶಾಲೆ ತೊರೆದ ಮಕ್ಕಳ ಭವಿಷ್ಯಕ್ಕಾಗಿ ಅಧಿಕಾರಿಗಳ ತಂಡ ನಡೆಸುತ್ತಿರುವ ಪ್ರಯತ್ನವು ನಾಗರಿಕ ವಲಯದ ಮೆಚ್ಚುಗೆಗೆ ಪಾತ್ರವಾಗಿರುವುದರ ಜೊತೆಗೆ, ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದರೆ ತಪ್ಪಗಲಾರದು.

ಫಲ ನೀಡಿದ ಜಿಲ್ಲಾ ಪಂಚಾಯ್ತಿ ಸಿಇಓ ಹೇಮಂತ್ ಕ್ರಮ

*** ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಹೇಮಂತ್ ಅವರು ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರುವ ಅಭಿಯಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಇದಕ್ಕಾಗಿ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದಾರೆ. ಇದರ ಭಾಗವಾಗಿಯೇ ಎರಡು ದಿನಗಳ ಕಾಲ ವಿಶೇಷ ಅಭಿಯಾನ ನಡೆಸಲಾಗುತ್ತಿದೆ. ಹಲವು ಮಕ್ಕಳು ಶಾಲೆಗೆ ಮರು ಸೇರ್ಪಡೆಯಾಗುವಂತಾಗಿದೆ. ಆಗಸ್ಟ್ 11 ರಂದು ಸಿಇಓ ಹೇಮಂತ್ ಅವರು ಕೂಡ ಶಾಲೆ ತೊರೆದ ಮಕ್ಕಳ ಮನೆಗಳಿಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Shimoga SP, BEO, EO hit the field for the future of school dropouts! | Shimoga, August 09: In a remarkable initiative for the future of children who have dropped out of school, Shimoga’s SP, BEO, EO, along with officials and staff from various departments, literally went village to village on August 10, Monday.

A special campaign has been launched on August 10 and 11 to bring back school dropouts into classrooms. To ensure its success, the Education Department, Panchayat Raj Department, and Police Department are working jointly.

On Monday, SP Nikhil B, Block Education Officer (BEO) Ramesh Naik, and Taluk Panchayat Executive Officer (EO) Parameshwar made surprise visits to several villages in Shimoga taluk.

Earlier, the Education Department had prepared a list of school dropouts, identifying the villages where such children live and what activities they are engaged in after leaving school. A separate detailed list was compiled.

Based on this, the officials’ team began surprise visits early in the morning to the homes and workplaces of these children. They held consultations with the children and their parents, explaining the importance of education.

They also created awareness about government facilities, compulsory education, and child labor laws. As a result, many parents expressed willingness to re-enroll their children in schools.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *