shimoga news | ಶಿವಮೊಗ್ಗ : 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ರೌಡಿ ಶೀಟರ್ ಅರೆಸ್ಟ್!

Shimoga: Rowdy-sheeter arrested after hiding for 6 years!  | Shimoga, August 12: A rowdy-sheeter who had been absconding for the past six years without appearing for court hearings has been traced and arrested by the Tunganagar Police Station officers in Shimoga. The arrested rowdy-sheeter has been identified as Kaleem, a resident of Shimoga. According to the press release issued by the police department, he was listed as a rowdy-sheeter under the jurisdiction of Tunganagar Police Station.

ಶಿವಮೊಗ್ಗ (shivamogga), ಆಗಸ್ಟ್ 12: ಕಳೆದ 6 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿ ಶೀಟರ್ ಓರ್ವನನ್ನು ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ ಘಟನೆ ನಡೆದಿದೆ.

ಶಿವಮೊಗ್ಗದ ನಿವಾಸಿ ಕಲೀಂ ಬಂಧಿತ ರೌಡಿ ಶೀಟರ್ ಎಂದು ಗುರುತಿಸಲಾಗಿದೆ. ಈತ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ಧಾನೆ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆರೋಪಿಯ ವಿರುದ್ದ ಕೊಲೆ ಯತ್ನ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪದ ಮೇರೆಗೆ ಒಟ್ಟಾರೆ 6 ಪ್ರಕರಣಗಳು ದಾಖಲಾಗಿವೆ. ಆದರೆ ಆರೋಪಿಯು ಯಾವುದೇ ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಎಸ್ ಸಿ ನಂಬರ್ 204/23 ರಲ್ಲಿ ಆರೋಪಿ ವಿರುದ್ದ ಬಂಧನಕ್ಕೆ ಜಾರಿಯಾಗಿತ್ತು. ತುಂಗಾ ನಗರ ಠಾಣೆ ಪ್ರೋಸೆಸ್ ಸಿಬ್ಬಂದಿಗಳಾದ ಕೃಷ್ಣಮೂರ್ತಿ, ಶಾಮ್ ಕುಮಾರ್, ಪ್ರಶಾಂತ್, ನಾಗಪ್ಪರವರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shimoga: Rowdy-sheeter arrested after hiding for 6 years! | Shimoga, August 12: A rowdy-sheeter who had been absconding for the past six years without appearing for court hearings has been traced and arrested by the Tunganagar Police Station officers in Shimoga. The arrested rowdy-sheeter has been identified as Kaleem, a resident of Shimoga. According to the press release issued by the police department, he was listed as a rowdy-sheeter under the jurisdiction of Tunganagar Police Station.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *