ಭದ್ರಾವತಿ (bhadravathi), ಆಗಸ್ಟ್ 12: ಭದ್ರಾವತಿ ತಾಲೂಕಿನ ಶಂಕರಘಟ್ಟ ಗ್ರಾಮದಿಂದ ಕಳೆದ 8 ವರ್ಷಗಳ ಹಿಂದೆ ನಿಗೂಢವಾಗಿ ಕಣ್ಮರೆಯಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.
2018 ನೇ ಸಾಲಿನಲ್ಲಿ ಶಂಕರಘಟ್ಟದ ವ್ಯಕ್ತಿಯೋರ್ವರು ನಾಪತ್ತೆಯಾಗಿದ್ದರು. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಡಿವೈಎಸ್ಪಿ ಪ್ರಕಾಶ್ ರಾಥೋಡ್ ಮಾರ್ಗದರ್ಶನದಲ್ಲಿ ಪ್ರೊ. ಪಿಎಸ್ಐ ವಿನಯ್ ಮತ್ತು ಯುವರಾಜ್ ರವರು ಕಾಣೆಯಾದ ವ್ಯಕ್ತಿಯ ವಿಳಾಸವನ್ನು ಪತ್ತೆ ಹಚ್ಚಿದ್ದರು.
ಇನ್ಸ್’ಪೆಕ್ಟರ್ ಚಿದಾನಂದ, ಪಿಎಸ್ಐ ಶಿಲ್ಪಾರವರ ನೇತೃತ್ವದಲ್ಲಿ ಸಿಬ್ಬಂದಿ ಮಂಜುನಾಥ್ ಅವರು ಸದರಿ ವ್ಯಕ್ತಿಯನ್ನು ಹೊಸಪೇಟೆಯಲ್ಲಿ ಪತ್ತೆ ಹಚ್ಚಿ ಕರೆತಂದು, ವಾರಸುದಾರರಿಗೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Bhadravati: Missing man traced in Hosapete after 8 years! | Bhadravati, August 12: Police have successfully traced a man who had mysteriously gone missing eight years ago from Shankaraghatta village in Bhadravati taluk. In 2018, a resident of Shankaraghatta had gone missing. A complaint regarding his disappearance was registered at the Bhadravati Rural Police Station.

