shimoga news | ಶಿವಮೊಗ್ಗಕ್ಕೆ 50 ಎಲೆಕ್ಟ್ರಿಕ್ ಸಿಟಿ ಬಸ್’ಗಳ ಮಂಜೂರು : ಸಾರಿಗೆ ಸಚಿವರಿಗೆ ಮುಖಂಡ ಚೇತನ್ ಕೆ ಗೌಡ ಮನವಿಯೇನು?

50 electric city buses sanctioned for Shivamogga: What is leader Chethan K Gowda's request to the Transport Minister? | Shivamogga, August 13: State Textile Infrastructure Development Corporation Chairman Chethan K Gowda has appealed to Transport Minister Bhairathi Suresh to take action for the operation of 50 electrical buses sanctioned for Shivamogga city under the PM E-Bus scheme.

ಶಿವಮೊಗ್ಗ (shivamogga), ಆಗಸ್ಟ್ 13: ಶಿವಮೊಗ್ಗ ನಗರಕ್ಕೆ ಪಿಎಂ ಇ – ಬಸ್ ಯೋಜನೆಯಡಿ ಮಂಜೂರಾಗಿರುವ, 50 ಎಲೆಕ್ಟ್ರಿಕಲ್ ಬಸ್ ಗಳ ಸಂಚಾರಕ್ಕೆ ಕ್ರಮಕೈಗೊಳ್ಳುವಂತೆ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್ ಕೆ ಗೌಡ ಅವರು ಸಾರಿಗೆ ಸಚಿವ ಭೈರತಿ ಸುರೇಶ್ ಅವರಿಗೆ ಮನವಿ ಮಾಡಿದ್ದಾರೆ.

13/08/2026 ರಂದು ಬೆಳಿಗ್ಗೆ ಬೆಂಗಳೂರಿನ ಸಚಿವರ ನಿವಾಸದಲ್ಲಿ ಕೆ ಚೇತನ್ ಗೌಡ ನೇತೃತ್ವದ ನಿಯೋಗ, ಸಾರಿಗೆ ಸಚಿವರೊಂದಿಗೆ ನಡೆಸಿದ ಸಮಾಲೋಚನೆ ವೇಳೆ ಈ ಮನವಿ ಅರ್ಪಿಸಲಾಗಿದೆ.

ಶಿವಮೊಗ್ಗ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಬೇಕಾಗಿದೆ. ನಗರವು ವಿವಿಧ ಕ್ಷೇತ್ರಗಳಲ್ಲಿ ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿದೆ. ಪ್ರತಿನಿತ್ಯ ಸಾವಿರಾರು ಜನರು ನಾನಾ ಕೆಲಸಕಾರ್ಯಗಳ ನಿಮಿತ್ತ ನಗರಕ್ಕೆ ಆಗಮಿಸುತ್ತಾರೆ.

ಅದರಲ್ಲಿಯೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆ ಕಾರ್ಯಗತಗೊಂಡ ನಂತರ, ಸರ್ಕಾರಿ ಬಸ್ ಗಳಲ್ಲಿ ಸಂಚರಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಈ ಕಾರಣದಿಂದ ಶಿವಮೊಗ್ಗ ನಗರದಲ್ಲಿ ತ್ವರಿತವಾಗಿ ಎಲೆಕ್ಟ್ರಿಕಲ್ ಬಸ್ ಗಳ ಸಂಚಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಮುಖಂಡ ಕೆ ಚೇತನ್ ಅವರು ಮನವಿ ಮಾಡಿದ್ದಾರೆ.

ಮನವಿ ಸ್ವೀಕರಿಸಿದ ನಂತರ ಸಾರಿಗೆ ಸಚಿವರು ಮಾತನಾಡಿ, ಈ ಕುರಿತಂತೆ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ನಾಗರಿಕರಿಗೆ ಅನುಕೂಲ ಕಲ್ಪಿಸಿಕೊಡುವ ಕಾರ್ಯ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮನವಿ ಅರ್ಪಿಸುವ ಸಂದರ್ಭದಲ್ಲಿ ಜವಳಿ ನಿಗಮದ ಉಪಾಧ್ಯಕ್ಷರು ಹಾಗೂ ಬೆಂಗಳೂರಿನ ಹೆಬ್ಬಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ ವಿ ಬಾಲಾಜಿ, ಯುವ ಕಾಂಗ್ರೆಸ್ ಮುಖಂಡ ಶ್ರೀಜಿತ್ ಮೊದಲಾದವರಿದ್ದರು.

50 electric city buses sanctioned for Shivamogga: What is leader Chethan K Gowda’s request to the Transport Minister? | Shivamogga, August 13: State Textile Infrastructure Development Corporation Chairman Chethan K Gowda has appealed to Transport Minister Bhairathi Suresh to take action for the operation of 50 electrical buses sanctioned for Shivamogga city under the PM E-Bus scheme.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *