ಶಿವಮೊಗ್ಗ (shivamogga), ಆಗಸ್ಟ್ 13: ಆಂಧ್ರಪ್ರದೇಶ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ 2026 ರಲ್ಲಿ ಶಿವಮೊಗ್ಗ ನಾಗರಾಜ್ ಅವರಿಗೆ ಕನ್ಸೋಲೇಶನ್ ಅವಾರ್ಡ್ ದೊರಕಿದೆ.
ಪತ್ರಿಕೆ ಮತ್ತು ವನ್ಯಜೀವಿ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರು ಶಿಕಾರಿಪುರ ದಲ್ಲಿ ಸೆರೆಹಿಡಿದ ” ಹೋರಿ ಹಬ್ಬ” ದ ಛಾಯಾಚಿತ್ರಕ್ಕೆ ಸ್ಪಾಟ್ ನ್ಯೂಸ್ ವಿಭಾಗದಲ್ಲಿ ಕನ್ಸೋಲೇಶನ್ ಅವಾರ್ಡ್ ದೊರಕಿದೆ.
ಅಲ್ಲದೆ ಈ ಚಿತ್ರಕ್ಕ್ಕೆ ಇತ್ತೀಚೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ನಡೆಸಿದ ರಾಷ್ಟ್ರ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದು ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ 2 ದಿನಗಳ ಛಾಯಾಚಿತ್ರ ಪ್ರದರ್ಶಕ್ಕೆ ಆಯೆಯಾಗಿತ್ತು .
ಅಲ್ಲದೆ ಶಿವಮೊಗ್ಗ ನಾಗರಾಜ್ ಅವರು ಕ್ಲಿಕ್ಕಿಸಿದ ಅನೇಕ ಛಾಯಾಚಿತ್ರಗಳ ದೇಶ , ವಿದೇಶಗಳಲ್ಲಿ ಪ್ರದರ್ಶನಗೊಂಡು ಪ್ರಥಮ , ದ್ವಿತೀಯ ಬಹುಮಾನದ ಜೊತೆಗೆ ಚಿನ್ನ , ಬೆಳ್ಳಿ ಪದಕ ಪಡೆಯುವ ಮೂಲಕ ಶಿವಮೊಗ್ಗ ಜಿಲ್ಲೆಗೆ ಹಾಗೂ ಕರ್ನಾಟಕಕ್ಕೆ ವಿಶೇಷ ಗೌರವ ತಂದುಕೊಟ್ಟಿದೆ. ಇವರು ಪ್ರತಿವರ್ಷ ತಾವು ಚಿತ್ರಿಸಿದ ಛಾಯಾಚಿತ್ರ ಪ್ರದರ್ಶನ ಏರ್ಪಡಿಸುವ ಮೂಲಕ ಜನಜಾಗೃತಿ ಕಾರ್ಯ ನಿರಂತರವಾಗಿ ಮಾಡಿಕೊಂಡು ಬಂದಿರುತ್ತಾರೆ .
Shivamogga Nagaraj wins award in National Photography Competition | Shivamogga, August 13: Shivamogga Nagaraj has won the Consolation Award in the National Photography Competition 2026 organized by the Andhra Pradesh Photojournalist Association. Newspaper and wildlife photographer Shivamogga Nagaraj has won the Consolation Award in the Spot News category for his photograph of the “Hori Habba” captured in Shikaripura.

