shimoga job news | ಶಿವಮೊಗ್ಗ : ಗ್ರಾಮೀಣ ಅಂಚೆ ಪಾಲಕ – ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

job news

ಶಿವಮೊಗ್ಗ (shivamogga), ಆಗಸ್ಟ್ 29: ಶಿವಮೊಗ್ಗದ ಅಂಚೆ ಇಲಾಖೆಯಲ್ಲಿ ಖಾಲಿಯಿರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಡಾಕ್ ಸೇವಕ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಶಿವಮೊಗ್ಗ ಅಂಚೆ ವಿಭಾಗದಲ್ಲಿ ಒಟ್ಟು 55 ಹುದ್ದೆಗಳು ಖಾಲಿಯಿವೆ. ಅಭ್ಯರ್ಥಿಗಳು18 ರಿಂದ 40 ವರ್ಷ (ಮೀಸಲಾತಿ ವರ್ಗಗಳಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ) ದೊಳಗಿನವರಾಗಿದ್ದು, 10 ನೇ ತರಗತಿ ಉತ್ತೀರ್ಣರಾಗಿರಬೇಕು.

ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಕನಿಷ್ಠ ತೇರ್ಗಡೆ ಅಂಕ ಹೊಂದಿರಬೇಕು ಹಾಗೂ 10ನೇ ತರಗತಿಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು. 10 ನೇ ತರಗತಿಯ ಅಂಕಗಳ ಆಧಾರದ ಮೇಲೆ ಆನ್‌ಲೈನ್ ಮೂಲಕವೇ ನೇಮಕಾತಿ ನಡೆಯಲಿದೆ.

ಅರ್ಜಿ ನೋಂದಣಿಗೆ ಕೊನೆಯ ದಿನಾಂಕ: 21.09.2026 ಆಗಿದ್ದು, ಅರ್ಜಿ ತಿದ್ದುಪಡಿ ಹಾಗೂ ಶುಲ್ಕ ಪಾವತಿಗೆ ದಿನಾಂಕ: 23.09.2026 ರಿಂದ 24.09.2026 ಅವಕಾಶವಿರುತ್ತದೆ. ಅರ್ಹ ಅಭ್ಯರ್ಥಿಗಳು https://indiapost.gov.in/gdsonlineengagement ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಅಥವಾ ಶಿವಮೊಗ್ಗ ವಿಭಾಗದ ಅಂಚೆ ಕಚೇರಿ ಹಾಗೂಸಂಪರ್ಕ ಸಂಖ್ಯೆ: 08182-222835 / 222516 ಸಂಪರ್ಕಿಸಬಹುದು ಎಂದು‌ ಶಿವಮೊಗ್ಗ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shivamogga: Applications invited for the recruitment of Rural Postmasters and Sevaks | Shivamogga, August 29: Applications are invited online from eligible candidates for the recruitment of vacant posts of Branch Postmasters – Assistant Branch Postmasters and Dak Sevaks in the Shivamogga Postal Department.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *