ಶಿವಮೊಗ್ಗ (shivamogga), ಸೆಪ್ಟೆಂಬರ್ 14: ಶಿವಮೊಗ್ಗ ನಗರದ ಪ್ರೆಸ್ ಕಾಲೋನಿಯಲ್ಲಿ ಸೆಪ್ಟೆಂಬರ್ 14 ರಂದು ನಡೆದ ಗಣೇಶೋತ್ಸವ ಸಮಾರಂಭವು, ಜನಜಾಗೃತಿ ಅಭಿಯಾನಕ್ಕೆ ವೇದಿಕೆಯಾಗಿತ್ತು. ಮಾದಕ ವಸ್ತುಗಳ ಬಳಕೆ ವಿರುದ್ಧ ನಾಗರಿಕರು ಪ್ರತಿಜ್ಞೆ ಸ್ವೀಕರಿಸಿದರು!
ಭಗತ್ ಸಿಂಗ್ ರಸ್ತೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ಸ್ಥಳದಲ್ಲಿ ಮಾದಕ ವಸ್ತುಗಳ ವಿರುದ್ಧದ ‘ಬೇಡ ಬ್ರೋ’ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ‘ಗಾಂಜಾ, ಅಫೀಮು ಸೇರಿದಂತೆ ಯಾವುದೇ ರೀತಿಯ ಮಾದಕ ವಸ್ತುಗಳನ್ನು ಬಳಸುವುದಿಲ್ಲ. ಸಶಕ್ತ, ಆರೋಗ್ಯಯುಕ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕೈ ಜೋಡಿಸುವುದಾಗಿ’ ಗಣೇಶಮೂರ್ತಿಯ ಎದುರು ನಾಗರಿಕರು ಪ್ರತಿಜ್ಞೆ ಸ್ವೀಕರಿಸಿದರು.
ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷರಾದ ರಾಮಚಂದ್ರಪ್ಪರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ‘ಗಣೇಶೋತ್ಸವ ಸಮಾರಂಭದಲ್ಲಿ ಸಂಘದವತಿಯಿಂದ ಅರ್ಥಪೂರ್ಣ, ಸಮಾಜಮುಖಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ತಿಳಿಸಿದರು.
ಜಿಲ್ಲಾ ಅದಿಕೃತ ಪತ್ರ ಬರಹಗಾರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಜಿ ಎಂ ಸುರೇಶ್ ಬಾಬು ಅವರು ಮಾತನಾಡಿ, ‘ಯುವ ಜನತೆಯು ಮಾದಕ ವಸ್ತುಗಳ ದಾಸರಾಗುತ್ತಿರುವುದು ಆತಂಕಕಾರಿ ಸಂಗತಿ. ಈ ನಿಟ್ಟಿನಲ್ಲಿ ಭಾರೀ ದೊಡ್ಡ ಮಟ್ಟದ ಜನಜಾಗೃತಿ ನಡೆಯಬೇಕಾಗಿದೆ. ಹಾಗೆಯೇ ಮೊಬೈಲ್ ಫೋನ್ ಗೀಳಿನಿಂದಲೂ ಹೊರಬರಬೇಕಾಗಿದೆ’ ಎಂದರು.
ಕರ್ನಾಟಕ ಗೃಹ ಮಂಡಳಿ ಅಧಿಕಾರಿ ಅನ್ವರ್ ಬಾಬು ಅವರು ಮಾತನಾಡಿ, ‘ಮಾದಕ ವಸ್ತುಗಳ ವಿರುದ್ದ ಜಾಗೃತಿ ಹಾಗೂ ಒಟ್ಟಾಗಿ ಗಣೇಶೋತ್ಸವ ಆಚರಿಸಿ ಸೌಹಾರ್ದತೆಯ ಸಂದೇಶ ನೀಡುವ ಈ ರೀತಿಯ ಕಾರ್ಯಕ್ರಮಗಳು ನಿಜಕ್ಕೂ ಸ್ವಾಗತಾರ್ಹವಾಗಿದೆ’ ಎಂದರು.
ನಿವೃತ್ತ ಶಿಕ್ಷಕರಾದ ಮಹೇಶ್ ಎಲಿಗಾರ್ ಅವರು ಮಾತನಾಡಿ, ‘ಬ್ರಿಟಿಷರ ವಿರುದ್ದ ಹೋರಾಟಕ್ಕೆ ಗಣೇಶೋತ್ಸವ ವೇದಿಕೆಯಾಗಿತ್ತು. ಪ್ರಸ್ತುತ ಸಾಮಾಜಿಕ ಪಿಡುಗಗಳ ವಿರುದ್ದ ಹೋರಾಟಕ್ಕೆ ವೇದಿಕೆಯಾಗುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ’ ಎಂದರು.
ಬೆಂಗಳೂರಿನ ಖಾಸಗಿ ಸಂಸ್ಥೆ ಉದ್ಯೋಗಿಗಳಾದ ರಂಗಪ್ಪ ಗುಡಮಗಟ್ಟೆ ಹಾಗೂ ಅವರ ಪತ್ನಿ ರಮ್ಯಾ ಅವರು ಮಾತನಾಡಿ, ‘ಮಾದಕ ವಸ್ತುಗಳಿಗೆ ನಮ್ಮ ಮಕ್ಕಳು ಬಲಿಯಾಗದಂತೆ ಎಚ್ಚರವಹಿಸಬೇಕು. ಮಕ್ಕಳ ಭವಿಷ್ಯ ಉಜ್ವಲವಾದರೆ, ಮುಂದಿನ ಪೀಳಿಗೆಯೂ ಸದೃಢವಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ಶಕ್ತಿ ಗ್ರೂಪ್ ನ ಪಾಲುದಾರರಾದ ಹರ್ಷ್, ನಿವೃತ್ತ ಕಾರ್ಯಪಾಲಕ ಅಭಿಯಂತರಾದ ಈಶ್ವರಪ್ಪ ಅವರು ವಿಭಿನ್ನ – ಅರ್ಥಪೂರ್ಣ ಗಣೇಶೋತ್ಸವ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪತ್ರಕರ್ತ ಬಿ ರೇಣುಕೇಶ್ ಅವರು ವಹಿಸಿದ್ದರು. ಸ್ಥಳೀಯರಾದ ಯುವ ಮುಖಂಡ ಅಭಿನಂದನ್, ಮಾರುತಿ, ಲಕ್ಷ್ಮೀ ದಂಪತಿ, ನಾಗರತ್ನ, ಜೆ ಹೆಚ್ ಪಟೇಲ್ ಬಡಾವಣೆಯ ಪದ್ಮನಾಭ್, ರಾಜಪ್ಪ, ವಿದ್ಯಾರ್ಥಿಗಳಾದ ಗೌತಮ್, ಉದಯಕುಮಾರ್, ಗಗನ್, ಸಿರಿ, ಷಣ್ಮುಖ, ಸಂಜಯ್, ಕಲ್ಕಿ, ಶಿವಾನಿ, ತೇಜಸ್ ಮೊದಲಾದವರಿದ್ದರು.
Shivamogga: ‘Beda Bro’ Campaign During Ganesha Idol Procession – Pledge Against Narcotics!
Shivamogga, September 13: The Ganesha festival celebration held on September 14 at Press Colony in Shivamogga city served as a platform for a public awareness campaign. Citizens took a pledge against the use of narcotics! The ‘Beda Bro’ (Say No, Bro) campaign against narcotics was organized at the site where the Ganesha idol was installed on Bhagat Singh Road. Citizens took a pledge before the Ganesha idol, vowing not to use any form of narcotics—including cannabis and opium—and committing to join hands in building a strong and healthy society.

