ಶಿವಮೊಗ್ಗ, ಸೆಪ್ಟೆಂಬರ್ 16: ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆ ವೇಳೆ, ಶಾಸಕ ಚನ್ನಬಸಪ್ಪರನ್ನು ಹೆಗಲ ಮೇಲೆ ಹೊತ್ತಿ ಕುಣಿದಿದ್ದ ಇಬ್ಬರು ಟ್ರಾಫಿಕ್ ಪೊಲೀಸರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೆ, ಇಬ್ಬರು ಪೊಲೀಸರನ್ನು ಎಸ್ಪಿ ವರ್ಗಾವಣೆಗೊಳಿಸಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.
ಏನೀದು ಘಟನೆ? : ಶಿವಮೊಗ್ಗ ನಗರದ ಪೂರ್ವ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಗಣಪತಿ ಪ್ರತಿಷ್ಠಾಪಿಸಲಾಗಿತ್ತು. ಇದರ ವಿಸರ್ಜನಾ ಪೂರ್ವ ಮೆರವಣಿ ಹಮ್ಮಿಕೊಳ್ಳಲಾಗಿತ್ತು. ತುಂಗಾ ನದಿಯಲ್ಲಿ ವಿಸರ್ಜಿಸಲು ಆಗಮಿಸುತ್ತಿದ್ದ ವೇಳೆ, ಭೀಮೇಶ್ವರ ದೇವಾಲಯದ ಬಳಿ ಶಾಸಕ ಚನ್ನಬಸಪ್ಪರವರು ಜೊತೆಯಾಗಿದ್ದರು.
ಈ ಸಂದರ್ಭದಲ್ಲಿ ಇಬ್ಬರು ಟ್ರಾಫಿಕ್ ಪೊಲೀಸರು ಶಾಸಕರನ್ನು ಹೆಗಲ ಮೇಲೆ ಹೊತ್ತಿಕೊಂಡು ಡ್ಯಾನ್ಸ್ ಮಾಡಿದ್ದರು. ಇದರ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದರ ಬೆನ್ನಲ್ಲೆ ಸದರಿ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಪೂರ್ವ ಟ್ರಾಫಿಕ್ ಪೊಲೀಸ್ ಠಾಣೆಯಿಂದ ಬೇರೆ ಪೊಲೀಸ್ ಠಾಣೆಗಳಿಗೆ ಎಸ್ಪಿ ಅವರು ವರ್ಗಾವಣೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಕಠಿಣ ಸಂದೇಶ : ಪೊಲೀಸ್ ಸಿಬ್ಬಂದಿಗಳನ್ನು ವರ್ಗಾವಣೆಗೊಳಿಸುವ ಮೂಲಕ, ರಾಜಕಾರಣಿಗಳೊಂದಿಗೆ ಬಹಿರಂಗವಾಗಿ ನಂಟು ಹೊಂದಿ ಸಾರ್ವಜನಿಕ ವಲಯದಲ್ಲಿ ಇಲಾಖೆಗೆ ಮುಜುಗರ ಉಂಟು ಮಾಡುವ ಪೊಲೀಸರ ವಿರುದ್ದ, ಎಚ್ಚರಿಕೆಯ ಸಂದೇಶ ರವಾನಿಸುವ ಕಾರ್ಯವನ್ನು ಎಸ್ಪಿ ಅವರು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
Shimoga: Transfer of Two Traffic Police Officers Who Carried MLA on Their Shoulders! | Shimoga, September 16: Following the viral video on social media showing two traffic police officers carrying MLA Channabasappa on their shoulders and dancing during the Ganapati immersion procession reports confirm that the SP has transferred the two officers.

