holehonnuru news | ಭದ್ರಾ ಮೇಲ್ದಂಡೆ ಯೋಜನೆಗೆ  ಮುಂದುವರಿದ ನೀರು : ರೈತರಿಂದ ಹೊಳೆಹೊನ್ನೂರು – ಭದ್ರಾವತಿ ರಸ್ತೆ ತಡೆ ನಡೆಸಿ ಪ್ರತಿಭಟನೆ

Water Release for Bhadra Upper Bank Project Continues: Farmers Stage Protest by Blocking Holehonnur–Bhadravathi Road | Holehonnur (Bhadravathi), November 05: Protesting against the continued release of water from the Bhadra Reservoir for the Bhadra Upper Bank Project, farmers staged a sudden road blockade near Agasanahalli village, close to Holehonnur in Bhadravathi taluk, on November 05.

ಹೊಳೆಹೊನ್ನೂರು (ಭದ್ರಾವತಿ), ನವೆಂಬರ್ 05: ಭದ್ರಾ ಮೇಲ್ದಂಡೆ ಯೋಜನೆಗೆ ಭದ್ರಾ ಜಲಾಶಯದಿಂದ ನೀರು ಹರಿಸುವುದನ್ನು ಮುಂದುವರಿಸಿರುವ ಕ್ರಮ ಖಂಡಿಸಿ, ನವೆಂಬರ್ 05 ರಂದು ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಅಗಸನಹಳ್ಳಿ ಗ್ರಾಮದಲ್ಲಿ ರೈತರು ದಿಡೀರ್ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಹೊಳೆಹೊನ್ನೂರು – ಭದ್ರಾವತಿ ರಸ್ತೆಯಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ರೈತರು ಪ್ರತಿಭಟಿಸಿದರು. ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಕಾರಣವೇನು? : ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆ ನಾಲೆಗೆ 3 ಟಿಎಂಸಿ ನೀರನ್ನು ಪ್ರಾಯೋಗಿಕವಾಗಿ ಹರಿಸಲಾಗಿತ್ತು. ತದನಂತರ ಕೂಡ ಡ್ಯಾಂನಿಂದ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಪ್ರಮಾಣದ ನೀರು ಹರಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತತ್’ಕ್ಷಣವೇ ಹೆಚ್ಚುವರಿ ನೀರು ಹರಿಸುವುದನ್ನು ಸ್ಥಗಿತಗೊಳಿಸಬೇಕು. ಬೇಸಿಗೆಗೆ ನೀರು ಕಾಯ್ದಿಟ್ಟುಕೊಳ್ಳಬೇಕು ಎಂದು  ಪ್ರತಿಭಟನಾಕಾರರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಯಶವಂತರಾವ್ ಘೋರ್ಪಡೆ, ಆರ್. ಕೃಷ್ಣಮೂರ್ತಿ, ಡಿ. ಯಲ್ಲಪ್ಪ, ರಾಮಕೃಷ್ಣ ಮೆಸ್ತಾ, ವೀರೇಶ್ ಮೊದಲಾದವರಿದ್ದರು.

Water Release for Bhadra Upper Bank Project Continues: Farmers Stage Protest by Blocking Holehonnur–Bhadravathi Road | Holehonnur (Bhadravathi), November 05: Protesting against the continued release of water from the Bhadra Reservoir for the Bhadra Upper Bank Project, farmers staged a sudden road blockade near Agasanahalli village, close to Holehonnur in Bhadravathi taluk, on November 05.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *