bengaluru news | ಶಿವಮೊಗ್ಗದಲ್ಲಿ ನಿವೇಶನ ಹಂಚಿಕೆ ಸಮಸ್ಯೆ : ಬೆಂಗಳೂರಿನಲ್ಲಿ ಸಚಿವ ಮಧು ಬಂಗಾರಪ್ಪ ಸಭೆ

Issue Regarding Site Allotment in Shivamogga: Minister Madhu Bangarappa Holds Meeting in Bengaluru Bengaluru, November 06: As the process of site allotment in Shivamogga district—under the purview of the Housing Department—has stalled, Shivamogga District In-charge Minister S. Madhu Bangarappa held a meeting today with Housing Minister B. Z. Zameer Ahmed Khan at the Housing Board office in Bengaluru to address and resolve the issue.

ಬೆಂಗಳೂರು (bengaluru), ನವೆಂಬರ್ 06 : ವಸತಿ ಇಲಾಖೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆ ನೆನೆಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ವಸತಿ ಸಚಿವ ಬಿ. ಝಡ್. ಜಮೀರ್ ಅಹಮದ್ ಖಾನ್ ಅವರೊಂದಿಗೆ ಇಂದು ಬೆಂಗಳೂರಿನ ಗೃಹ ಮಂಡಳಿ ಕಚೇರಿಯಲ್ಲಿ ಸಭೆ ನಡೆಸಿದರು.

 

ಸಭೆಯಲ್ಲಿ ನಿವೇಶನ ಹಂಚಿಕೆ ವಿಳಂಬವಾಗಿರುವ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, “ಸಮಸ್ಯೆಗೆ ಸರ್ಕಾರದ ಮಟ್ಟದಲ್ಲಿ ಯಾವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂಬುದರ ಕುರಿತು ಚರ್ಚಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಸಾಧ್ಯವಿರುವ ಮಾರ್ಗಗಳನ್ನು ಪರಿಶೀಲಿಸಿ, ಶೀಘ್ರ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.

 

ವಸತಿ ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, “ಯಾವುದೇ ಕಾರಣಕ್ಕೂ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಬಾರದು. ಸರ್ಕಾರದ ಮಟ್ಟದಲ್ಲಿ  ಶಿವಮೊಗ್ಗ ವಿಚಾರವನ್ನು ಚರ್ಚಿಸಿ, ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು” ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ಸಭೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ, ಗೃಹ ಮಂಡಳಿ ಆಯುಕ್ತರಾದ ದಯಾನಂದ, ಭಾರತ್ ಜೋಡೋ ಶಿವಮೊಗ್ಗ ಜಿಲ್ಲೆಯ ಸಮನ್ವಯ ಅಧಿಕಾರಿ ಟಿ ಡಿ ಗೀತೇಂದ್ರ, ಶಿವಮೊಗ್ಗ ಜಿಲ್ಲೆಯ ಹಿರಿಯ ಪತ್ರಕರ್ತರಾದ ಎನ್. ರವಿಕುಮಾರ್, ದೇಶಾದ್ರಿ ಹೊಸಮನೆ, ನಾಗರಾಜ್ ಶೆಣೈ, ಲಿಯಾಕತ್, ಎನ್ ಮಂಜುನಾಥ್ , ಜಿಲ್ಲಾ ಕಾಂಗ್ರೆಸ್ ವಕ್ತಾರ ಜಿ ಡಿ ಮಂಜುನಾಥ್ ಮೊದಲಾದವರಿದ್ದರು.

 

Issue Regarding Site Allotment in Shivamogga: Minister Madhu Bangarappa Holds Meeting in Bengaluru | Bengaluru, November 06: As the process of site allotment in Shivamogga district—under the purview of the Housing Department—has stalled, Shivamogga District In-charge Minister S. Madhu Bangarappa held a meeting today with Housing Minister B. Z. Zameer Ahmed Khan at the Housing Board office in Bengaluru to address and resolve the issue.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *