shimoga news | ಶಿವಮೊಗ್ಗ ನಗರದಲ್ಲಿ ಸಂಚರಿಸುವ ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ಡಾಯ : ಆರ್’ಟಿಓ ಸೂಚನೆ

Warning of Legal Action Against Fuel Stations Overcharging Auto LPG/CNG in Shivamogga District! ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ದರಕ್ಕೆ ಆಟೋ ಎಲ್ಪಿಜಿ/ಸಿಎನ್ಜಿ ಮಾರಾಟ ಮಾಡುವ ಬಂಕ್ ಮಾಲೀಕರ ವಿರುದ್ದ ಕೇಸ್ ದಾಖಲು ಎಚ್ಚರಿಕೆ!

ಶಿವಮೊಗ್ಗ (shivamogga), ನವೆಂಬರ್ 06 : ಶಿವಮೊಗ್ಗ ನಗರದಲ್ಲಿ ಸಂಚರಿಸುವ ಆಟೋರಿಕ್ಷಾಗಳಲ್ಲಿ ಮೀಟರ್ ಅಳವಡಿಸದೆ ಪ್ರಯಾಣಿಕರಿಂದ ಅವೈಜ್ಞಾನಿಕವಾಗಿ ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ.

ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆಯ ಹಿತದೃಷ್ಟಿಯಿಂದ ಶಿವಮೊಗ್ಗ ನಗರದ ಎಲ್ಲಾ ಆಟೋರಿಕ್ಷಾ ಚಾಲಕರು ಹಾಗೂ ಮಾಲೀಕರು ಮುಂದಿನ 10 ದಿನಗಳೊಳಗಾಗಿ ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳಬೇಕು. ಪ್ರಾಧಿಕಾರ ನಿಗದಿಪಡಿಸಿದ ದರವನ್ನಷ್ಟೇ ಪಡೆಯಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್’ಟಿಓ) ಮುರುಗೇಂದ್ರ ಶಿರೋಳ್ಕರ್ ಅವರು ನವೆಂಬರ್ 06 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಂದು ವೇಳೆ ನಿಗದಿತ ಅವಧಿಯೊಳಗೆ ಮೀಟರ್ ಅಳವಡಿಸದೇ ಇದ್ದಲ್ಲಿ ಅಥವಾ ಮೀಟರ್ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿದಲ್ಲಿ ಅಂತಹ ಆಟೋ ಚಾಲಕರು ಮತ್ತು ಮಾಲೀಕರ ವಿರುದ್ಧ ಸಾರಿಗೆ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ದೂರು ನೀಡಲು ಸಹಾಯವಾಣಿ: ಆಟೋರಿಕ್ಷಾ ಚಾಲಕರು ಮೀಟರ್ ಪ್ರಕಾರ ಬಾಡಿಗೆ ಪಡೆಯದಿದ್ದಲ್ಲಿ ಅಥವಾ ಮೀಟರ್ ಹಾಕಲು ನಿರಾಕರಿಸಿದಲ್ಲಿ, ಸಾರ್ವಜನಿಕರು ತಕ್ಷಣವೇ ದೂರು ಸಲ್ಲಿಸಲು ಮೊಬೈಲ್ ಸಂಖ್ಯೆ: 8277983404 ಅನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

Mandatory Installation of Meters for Auto-rickshaws in Shivamogga City: Directive from RTO Murugendra Shirolkar

Shivamogga, November 06: Following numerous complaints from the public regarding auto-rickshaws in Shivamogga city operating without meters and charging passengers arbitrarily high fares, the Shivamogga Regional Transport Authority (RTA) has issued a strict directive. In the interest of ensuring a smooth public transport system, all auto-rickshaw drivers and owners in Shivamogga city are required to install meters within the next 10 days. Furthermore, they must charge only the fares prescribed by the Authority. This was stated by Regional Transport Officer (RTO) Murugendra Shirolkar in a notification released on November 06.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *