ಶಿವಮೊಗ್ಗ (shivamogga), ಸೆಪ್ಟೆಂಬರ್ 16: ಕಾಲೇಜ್ ನ ತರಗತಿಗಳಿಗೆ ಗೈರು ಹಾಜರಾಗಿ ಪಾರ್ಕ್ ನಲ್ಲಿ ಬಿಂದಾಸ್ ಆಗಿ ತಿರುಗುತ್ತಿದ್ದ ವಿದ್ಯಾರ್ಥಿಗಳನ್ನು, ‘ಅಕ್ಕ ಪಡೆ’ಯ ಪೊಲೀಸರು ಮತ್ತೆ ಕಾಲೇಜ್ ಗೆ ಕಳುಹಿಸಿದ ಕುತೂಹಲಕಾರಿ ಘಟನೆಯೊಂದು ಶಿವಮೊಗ್ಗ ನಗರದಲ್ಲಿ ನಡೆದಿದೆ.
‘ಅಕ್ಕ ಪಡೆ’ಯ ಸಿಬ್ಬಂದಿಗಳು ತಮ್ಮ ವಾಹನದಲ್ಲಿ, ನಗರದ ಕೋಟೆ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿತ್ತು. ಈ ವೇಳೆ ವಿದ್ಯಾರ್ಥಿಗಳ ಗುಂಪೊಂದು ಸಮೀಪದ ಪಾರ್ಕ್ ವೊಂದರಲ್ಲಿ ಅಡ್ಡಾಡುತ್ತಿರುವುದು ಅಕ್ಕ ಪಡೆಯ ಸಿಬ್ಬಂದಿಗಳ ಕಣ್ಣಿಗೆ ಬಿದ್ದಿದೆ.
ತರಗತಿಯ ಅವಧಿಯಲ್ಲಿ ವಿದ್ಯಾರ್ಥಿಗಳು ಪಾರ್ಕ್ ನಲ್ಲಿರುವುದನ್ನು ಗಮನಿಸಿದ ಸಿಬ್ಬಂದಿಗಳು, ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳನ್ನು ವಿಚಾರಿಸಿದ್ದಾರೆ. ಕಾಲೇಜ್ ನ ತರಗತಿಗೆ ಹಾಜರಾಗದೆ ಪಾರ್ಕ್ ನಲ್ಲಿ ಅಲೆಯುತ್ತಿರುವುದು ಏಕೆಂದು ಪ್ರಶ್ನಿಸಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಬುದ್ದಿ ಮಾತು ಹೇಳಿದೆ. ವಿದ್ಯೆ, ಸಮಯದ ಮಹತ್ವದ ಬಗ್ಗೆ ತಿಳಿ ಹೇಳಿದೆ.
ನಂತರ ಪಾರ್ಕ್ ನಲ್ಲಿ ತಿರುಗುತ್ತಿದ್ದ ವಿದ್ಯಾರ್ಥಿಗಳು ಮತ್ತೆ ಮರಳಿ ತಮ್ಮ ಕಾಲೇಜ್ ಗೆ ತೆರಳಿದ್ದಾರೆ ಎಂದು ಪೊಲೀಸ್ ಇಲಾಖೆ ಸೆಪ್ಟೆಂಬರ್ 16 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಡಿದೆ.
‘Skipping College – Hanging Out in the Park!’: Students Spotted by the ‘Akka Pade’ – What Happened Next?
Shivamogga, September 16: An interesting incident occurred in Shivamogga city where police personnel from the ‘Akka Pade’ (a specialized women’s police squad) sent students back to college after spotting them roaming carefree in a park instead of attending their classes.

