ಸಾಗರ (sagara), ಅಕ್ಟೋಬರ್ 28: ರೈಲಿಗೆ ತೆಲೆ ಕೊಟ್ಟು ಸಾಯುವುದಾಗಿ ಮನೆಯಲ್ಲಿ ಹೇಳಿ ಹೋದ ವ್ಯಕ್ತಿಯೋರ್ವರನ್ನು, ಸಾಗರದ ಗ್ರಾಮಾಂತರ ಠಾಣೆ 112 ಪೊಲೀಸರು ಸಿನಿಮೀಯ ಶೈಲಿಯಲ್ಲಿ ರಕ್ಷಿಸಿದ ಘಟನೆ ಅಕ್ಟೋಬರ್ 26 ರಂದು ನಡೆದಿದೆ.
ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ ಬೇಸತ್ತ ವ್ಯಕ್ತಿಯೋರ್ವರು, ರೈಲಿಗೆ ಸಿಲುಕಿ ಸಾಯುವುದಾಗಿ ಮನೆಯಲ್ಲಿ ತಿಳಿಸಿ ಹೊರ ಹೋಗಿದ್ದರು. ಈ ಕುರಿತಂತೆ ಕುಟುಂಬದವರು ಇಆರ್’ಎಸ್ಎಸ್ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಈ ಕುರಿತಂತೆ ಮಾಹಿತಿ ಪಡೆದ 112 ಇಆರ್’ಎಸ್ಎಸ್ ಕರ್ತವ್ಯದಲ್ಲಿದ್ದ ಗ್ರಾಮಾಂತರ ಠಾಣೆ ಎಎಸ್ಐ ಸುರೇಂದ್ರ ಕುಮಾರ್ ಮತ್ತು ವಾಹನ ಚಾಲಕರಾದ ಶಿವಾನಂದ ಅವರು ಸ್ಥಳಕ್ಕೆ ದೌಡಾಯಿಸಿದ್ದರು.
ಗ್ರಾಮಸ್ಥರ ಸಹಕಾರದೊಂದಿಗೆ ತಾಳಗುಪ್ಪದ ರೈಲ್ವೆ ನಿಲ್ದಾಣದ ಹಳಿಗಳ ಮೇಲೆ ನಡೆದು ಹೋಗುತ್ತಿದ್ದ ವ್ಯಕ್ತಿಯನ್ನು ಗಮನಿಸಿ ರಕ್ಷಿಸಿದ್ದಾರೆ. ಅವರಿಗೆ ಬುದ್ದಿಮಾತು ಹೇಳಿ ಮನೆಯವರೊಂದಿಗೆ ಕಳುಹಿಸಿ ಕೊಟ್ಟಿದ್ದಾರೆ.
Sagara Police Rescue Man Who Threatened to Die by Jumping in Front of a Train! | Sagara, October 28: On October 26, police from the Sagara Rural Station (responding via the 112 emergency service) rescued a man in a dramatic, cinematic-style operation after he had told his family he intended to end his life by placing his head in the path of an oncoming train.

