ಸಾಗರ (sagara), ಆಗಸ್ಟ್ 16: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸ್ವಂತ ವೆಚ್ಚದಲ್ಲಿ ಸಮವಸ್ತ್ರ, ಬೆಲ್ಟ್ ಮತ್ತೀತರ ವಸ್ತುಗಳನ್ನು ಶಿವಮೊಗ್ಗದ ಸಮಾಜ ಸೇವಕ, ನಿವೃತ್ತ ಶಿಕ್ಷಕ ಮಹೇಶ್ ಎಲಿಗಾರ್ ಅವರು ವಿತರಿಸಿದ್ದಾರೆ.
ಸಾಗರ ತಾಲೂಕಿನ ನರಸೀಪುರ ಸರ್ಕಾರಿ ಶಾಲೆಯಲ್ಲಿ ಆಗಸ್ಟ್ 15 ರಂದು ವಿದ್ಯಾರ್ಥಿಗಳಿಗೆ ಸದರಿ ವಸ್ತುಗಳ ವಿತರಣೆ ಮಾಡಿದ್ದಾರೆ.
‘ಈ ಹಿಂದೆ ತಾವು ಸದರಿ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಣೆ ಮಾಡಿದ್ದೆ. ಈ ಕಾರಣದಿಂದ ಶಾಲಾ ವಿದ್ಯಾರ್ಥಿಗಳಿಗೆ ಕೈಲಾದ ನೆರವು ನೀಡಿದ್ದೆನೆ. ಇದಕ್ಕೆ ತಮ್ಮ ಪತ್ನಿ ಶಿಕ್ಷಕಿಯಾದ ಶಕುಂತಲರವರು ಸಹಕಾರ ನೀಡಿದ್ದಾರೆ’ ಎಂದು ಮಹೇಶ್ ಎಲಿಗಾರ್ ಅವರು ತಿಳಿಸಿದ್ಧಾರೆ.
ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ರಾಜೇಶ್ ಎನ್ ಹೆಚ್, ಉಪಾಧ್ಯಕ್ಷರಾದ ಮಂಜುನಾಥ್ ಎನ್ ಎಂ,, ಮುಖ್ಯೋಪಾಧ್ಯಯರಾದ ಹೊಸೂರಪ್ಪ ಪಿ ಟಿ, ಸಹ ಶಿಕ್ಷಕಿ ಜ್ಯೋತಿ,
ಎಸ್’ಡಿಎಂಸಿ ಸದಸ್ಯರಾದ ಲಕ್ಷ್ಮಣ್, ಚಂದ್ರಶೇಖರ್, ಲೋಕೇಶ್, ಲೋಹಿತ್ ಕುಮಾರ್, ಸಂತೋಷ್, ಕುಸುಮ ಮಾಕನಕಟ್ಟೆ, ಗ್ರಾಮದ ಪ್ರಮುಖರಾದ ಧರ್ಮಪ್ಪ ತಳಗೇರಿ, ನಾಗರಾಜ ತಳಗೇರಿ, ಸೋಮಪ್ಪ, ಕೆರಿಯಪ್ಪ, ಈರಮ್ಮ ದೇವಾಡಿಗ, ಅಂಗನವಾಡಿ ಕಾರ್ಯಕರ್ತೆ ಗೀತಾ ಮೊದಲಾದವರಿದ್ದರು.
Shimoga Social Worker Mahesh Eligaar Distributes Uniforms to Government School Children
Sagar, August 16: On the occasion of Independence Day, social worker and retired teacher Mahesh Eligaar from Shimoga distributed school uniforms, belts, and other items to government school students at his own expense.
The distribution took place on August 15 at Narasipura Government School in Sagar taluk.
Mahesh Eligaar stated: “I had earlier served as a teacher in this school. That is why I felt it was my duty to extend some support to the students. My wife, Shakuntala, who is also a teacher, has supported me in this initiative.”
Present at the event were School Development Committee President Rajesh N.H., Vice President Manjunath N.M., Headmaster Hosurappa P.T., teacher Jyothi, SDMC members Laxman, Chandrashekar, Lokesh, Lohith Kumar, Santosh, Kusuma Makanakatte, along with village leaders Dharmappa Talageri, Nagaraj Talageri, Somappa, Keriyappa, Eeramma Devadiga, and Anganwadi worker Geetha.

