ಶಿವಮೊಗ್ಗ (shivamogga), ನವೆಂಬರ್ 08: ಶಿವಮೊಗ್ಗದ ರೌಡಿ ಶೀಟರ್ ಓರ್ವನನ್ನು ಗೂಂಡಾ ಕಾಯ್ದೆಯಡಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಸಚಿನ್ ಎಂ ಎಸ್ ಯಾನೆ ಸಚಿನ್ ಯಾನೆ ಶ್ಯಾಡೋ ಬಂಧಿತ ರೌಡಿ ಶೀಟರ್ ಎಂದು ಗುರುತಿಸಲಾಗಿದೆ. ಈತನನ್ನು ಕಲಬುರ್ಗಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಹಲವು ಕೇಸ್ : ಆರೋಪಿಯ ವಿರುದ್ದ ಶಿವಮೊಗ್ಗದ ಗ್ರಾಮಾಂತರ, ಜಯನಗರ, ದೊಡ್ಡಪೇಟೆ, ಕೋಟೆ, ವಿನೋಬನಗರ ಹಾಗೂ ಸಾಗರ ತಾಲೂಕಿನ ಆನಂದಪುರ ಪೊಲೀಸ್ ಠಾಣೆಗಳಲ್ಲಿ
ಕೊಲೆಗೆ ಪ್ರಯತ್ನ, ಸುಲಿಗೆ, ದೊಂಬಿ, ಜೀವ ಬೆದರಿಕೆ, ಮಾದಕ ವಸ್ತು ಗಾಂಜಾ ಮಾರಾಟ – ಸಾಗಾಣಿಕೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ, ಕೊಲೆ ಬೆದರಿಕೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ.
ಆರೋಪಿಯು ಕಾನೂನು ಉಲ್ಲಂಘಿಸಿ ನಿರಂತರವಾಗಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾನೆ. ಇದರಿಂದ ಸಮಾಜದ ಶಾಂತಿ – ಸುವ್ಯವಸ್ಥೆ, ಸಾರ್ವಜನಿಕರ ಆಸ್ತಿ, ಪ್ರಾಣ ಹಾನಿ ಧಕ್ಕೆಯಾಗುವ ಸಂಭವಿರುತ್ತದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ದ ‘ಕರ್ನಾಟಕ ಭಟ್ಟಿ ಸಾರಾಯಿ ವ್ಯವಹಾರ, ಔಷಧಾಪರಾಧ, ಅನೈತಿಕ ಅಪರಾಧ ಮತ್ತು ಕೊಳಚೆ ಪ್ರದೇಶಗಳನ್ನು ಅಕ್ರಮಿಸಿಕೊಳ್ಳುವ ಮತ್ತು ವಿಡಿಯೋ ಅಥವಾ ಆಡಿಯೋ ಪೈರಸಿ ಚಟುವಟಿಕೆಗಳ ತಡೆ’ ಅಧಿನಿಯಮದ ಪ್ರಕಾರ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಜಿಲ್ಲಾಧಿಕಾರಿಗಳು 06-11-2026 ರಂದು ಆರೋಪಿಯನ್ನು ಕಲಬುರಗಿ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶಿಸಿದ್ದರು. ಅದರಂತೆ ಆರೋಪಿಯನ್ನು ಬಂಧಿಸಿ, 07-11-2026 ರಂದು ಕಲಬುರ್ಗಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
Shivamogga: Rowdy arrested under the Goonda Act – Sent to Kalaburagi Jail! | Shivamogga, November 07: Police have arrested a ‘rowdy sheeter’ in Shivamogga under the Goonda Act. The arrested individual has been identified as Sachin M.S., also known as Sachin or ‘Shadow’. The District Police Department stated in a release that he has been transferred to the Kalaburagi Central Prison.

