thirthahalli news | ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಮುಳುಗಿ ಬೆಂಗಳೂರಿನ ನಾಲ್ವರು ಯುವಕರ ದಾರುಣ ಸಾವು!

Thirthahalli : Four youths from Bengaluru drown in the Tunga River! | Shivamogga, November 26: A tragic incident occurred on November 26 in the Tunga River—near Mahishi in the Thirthahalli taluk of Shivamogga district—where four youths, who had gone to swim, drowned and lost their lives.

ತೀರ್ಥಹಳ್ಳಿ (thirthahalli ), ನವೆಂಬರ್ 26: ತುಂಗಾ ನದಿಯಲ್ಲಿ ಈಜಾಡಲು ತೆರಳಿದ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಹಿಷಿ ಸಮೀಪದ ತುಂಗಾ ನದಿಯಲ್ಲಿ ನವೆಂಬರ್ 26 ರಂದು ನಡೆದಿದೆ.

ಕಾರ್ತಿಕ್ (31), ನಕುಲ್ (19), ಪವನ್ (30) ಹಾಗೂ ಚೇತನ್ (19) ಮೃತಪಟ್ಟವರೆಂದು ಗುರುತಿಸಲಾಗಿದೆ. ಅಗ್ನಿಶಾಮಕ ದಳದ ತಂಡ ಸಂಜೆ ವೇಳೆಗೆ ನಾಲ್ವರ ಮೃತದೇಹಗಳನ್ನು ನದಿಯಿಂದ ಹೊರತೆಗೆದಿದೆ.

ಬೆಂಗಳೂರಿನ ಕತ್ರಿಗುಪ್ಪೆಯಿಂದ ಮದುವೆ ಸಮಾರಂಭಕ್ಕಾಗಿ ತಂಡವೊಂದು ಶಿವಮೊಗ್ಗಕ್ಕೆ ಆಗಮಿಸಿತ್ತು. ಟೆಂಪೋ ಟ್ರಾವೆಲರ್ ಗಳಲ್ಲಿ ತೀರ್ಥಹಳ್ಳಿಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿತ್ತು. ಈ ವೇಳೆ ಮಹಿಷಿ ಸಮೀಪದ ತುಂಗಾ ನದಿಯಲ್ಲಿ ಕೆಲವರು ಈಜಾಡಲು ಇಳಿದಿದ್ದಾರೆ.

ಈ ವೇಳೆ ಯುವಕನೋರ್ವ ನೀರಿನಲ್ಲಿ ಮುಳುಗಲಾರಂಭಿಸಿದ್ದು, ಈತನನ್ನು ರಕ್ಷಣೆ ಮಾಡಲು ಇತರರು ತೆರಳಿದ ವೇಳೆ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ. ಈ ಕುರಿತಂತೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thirthahalli : Four youths from Bengaluru drown in the Tunga River! | Shivamogga, November 26: A tragic incident occurred on November 26 in the Tunga River—near Mahishi in the Thirthahalli taluk of Shivamogga district—where four youths, who had gone to swim, drowned and lost their lives.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *