ಶಿವಮೊಗ್ಗ (shivamogga), ನವೆಂಬರ್ 27: ಜಮೀನೊಂದರ ಶೆಡ್ ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಆಕಳುಗಳ ಕಳವು ಮಾಡಿದ್ದ ಆರೋಪದ ಮೇರೆಗೆ, ಶಿವಮೊಗ್ಗ ತಾಲೂಕಿನ ಕುಂಸಿ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಆಯನೂರು ಗ್ರಾಮದ ನಿವಾಸಿ ಅಬ್ದುಲ್ ಸಾಧಿಕ್ (25), ಶಿವಮೊಗ್ಗ ನಗರದ ರಾಗಿಗುಡ್ಡ 3 ನೇ ಕ್ರಾಸ್ ನಿವಾಸಿ ಶಫೀವುಲ್ಲಾ (49), ವಾದಿ ಎ ಹುದಾ ಬಡಾವಣೆ ನಿವಾಸಿ ಸಯ್ಯದ್ ನವೀದ್ (30), ಆಯನೂರು ಕೋಹಳ್ಳಿ ನಿವಾಸಿ ಸೈಯಾದ್ ಯಾಸೀನ್ ಹಾಗೂ ಆಯನೂರು ನಿವಾಸಿ ನಯಾಜುಲ್ಲಾ (30) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ವಾಹನ, ಆಕಳುಗಳನ್ನು ಮಾರಿದ್ದರಿಂದ ಬಂದಿದ್ದ 50 ಸಾವಿರ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೆಯೇ ಕುಂಸಿ ಠಾಣಾ ವ್ಯಾಪ್ತಿಯ ಚನ್ನಳ್ಳಿ ಗ್ರಾಮದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆದಿದ್ದ ಎತ್ತುಗಳ ಕಳವು ಕೃತ್ಯದಲ್ಲಿ ಸದರಿ ಆರೋಪಿಗಳು ಭಾಗಿಯಾಗಿದ್ದ ಸಂಗತಿ ಬೆಳಕಿಗೆ ಬಂದಿದೆ.
ಎಸ್ಪಿ ನಿಖಿಲ್ ಬಿ, ಎಎಸ್ಪಿ ಕಾರಿಯಪ್ಪ, ಡಿವೈಎಸ್ಪಿ ಸಂಜೀವ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕುಂಸಿ ಠಾಣೆ ಇನ್ಸ್’ಪೆಕ್ಟರ್ ಬಸವರಾಜ್ ಪಿಎಸ್ ನೇತೃತ್ವದಲ್ಲಿ
ಸಬ್ ಇನ್ಸ್’ಪೆಕ್ಟರ್ ಪಾರ್ವತಿ ಬಾಯಿ, ಸಿಬ್ಬಂದಿಗಳಾದ ಪ್ರಕಾಶ್, ಶಶಿಧರ್, ಮಂಜುನಾಥ್, ಬುರಾನ್ ದೀನ್ ಗುಡ್ಡೇಕಾರ್, ಚಾಲಕ ಶಿವಪ್ಪ,
ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯ ತಾಂತ್ರಿಕ ಸಿಬ್ಬಂದಿಗಳಾದ ಗುರುರಾಜ್ ಹಾಗೂ ಇಂದ್ರೇಶ್ ರವರ ತಾಂತ್ರಿಕ ಸಾಕ್ಷ್ಯಗಳ ಸಹಕಾರದೊಂದಿಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣದ ಹಿನ್ನೆಲೆ : ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮಡಿಹಳ್ಳಿ ಗ್ರಾಮದ ಶಂಕರ್ ಎಂಬುವರ ಜಮೀನಿನ ಶೆಡ್ ನಲ್ಲಿದ್ದ, 5 ಆಕಳುಗಳನ್ನು 14/11/2026 ರಂದು ಕಳವು ಮಾಡಲಾಗಿತ್ತು. ಈ ಕುರಿತಂತೆ ಪ್ರಕರಣ ದಾಖಲಾಗಿತ್ತು.
ವಿಶೇಷ ತಂಡ ರಚನೆ : ಸದರಿ ಪ್ರಕರಣ ಪತ್ತೆ ಹಚ್ಚಲು ಇನ್ಸ್’ಪೆಕ್ಟರ್ ಬಸವರಾಜ್ ಪಿ ಎಸ್ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಸದರಿ ತಂಡ ಎಲ್ಲ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಫಲವಾಗಿದೆ. ಸದರಿ ತಂಡದ ಯಶಸ್ವಿ ಕಾರ್ಯಾಚರಣೆಗೆ ಎಸ್ಪಿ ನಿಖಿಲ್ ಬಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Shivamogga: Major Operation by Kumsi Police – Five Cattle Thieves Arrested!
Shivamogga, November 27: The police from the Kumsi station in Shivamogga taluk have successfully arrested five individuals accused of stealing cattle—worth lakhs of rupees—from a shed located on a piece of farmland.

