bhadravati news | ಭದ್ರಾವತಿ : ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು – ಆರೋಪಿ ಬಂಧನ!

Bhadravathi: Millions at home. Jewellery stolen in value – Accused arrested! Bhadravati, November 29: Lakhs of rupees were found stolen from a house. In the case of the theft of valuable gold ornaments, the Bhadravati Paper Town police station police have successfully apprehended the culprit.

ಭದ್ರಾವತಿ (bhadravathi), ನವೆಂಬರ್ 29: ಮನೆಯೊಂದರಲ್ಲಿ ನಡೆದಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ ಪತ್ತೆ ಹಚ್ಚುವಲ್ಲಿ, ಭದ್ರಾವತಿ ಹೊಸಮನೆ ಠಾಣೆ ಪೊಲೀಸರು ಯಶಸ್ವಿಯಾದ ಘಟನೆ ನಡೆದಿದೆ.

ಭದ್ರಾವತಿ ಭೂತನಗುಡಿ ನಿವಾಸಿ ನಂಜುಂಡ ಯಾನೆ ಬಕ್ರಿ (23) ಬಂಧಿತ ಆರೋಪಿಯಾಗಿದ್ದಾನೆ. ಇದೇ ಪ್ರಕರಣದಲ್ಲಿ ಬಾಲಕನೋರ್ವನನ್ನು ಪೊಲೀಸರು ವಶಕ್ಕೆ ಪಡೆದು, ಕಾನೂನು ಅಭಿರಕ್ಷೆಗೆ ಒಳಪಡಿಸಿದ್ದಾರೆ.

ಆರೋಪಿ ನಂಜುಂಡನಿಂದ 20 ಲಕ್ಷ ರೂ. ಮೌಲ್ಯದ 167 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನವೆಂಬರ್ 29 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಡಿವೈಎಸ್ಪಿ ಪ್ರಕಾಶ್ ರಾಥೋಡ್ ಮೇಲುಸ್ತುವಾರಿಯಲ್ಲಿ ಇನ್ಸ್’ಪೆಕ್ಟರ್ ನಾಗಮ್ಮ, ಶಿವಾಜಿ ಹೊಸಮನೆ ಸರ್ಕಲ್ ಪೊಲೀಸ್ ಠಾಣೆ ಪಿಎಸ್ಐ ಸಿದ್ದಪ್ಪ ಎಂ ಪಿ, ಸಿಬ್ಬಂದಿಗಳಾದ ಆದರ್ಶ ಶೆಟ್ಟಿ, ಕಾಂತರಾಜು, ಬಸವರಾಜ್ ನಾಯ್ಕ್, ಹಣಮಂತ ಅಮಾತಿ, ರಾಘವೇಂದ್ರ, ವಿಶ್ವನಾಥ್, ವಿಶಾಲಕ್ಷಿ, ಮಂಜುಳಾ, ಮಾರುತಿ, ರಾಜೀವ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಪ್ರಕರಣದ ಹಿನ್ನೆಲೆ : ಭದ್ರಾವತಿ ಭೋವಿ ಕಾಲೋನಿ ನಿವಾಸಿ ಮಹಿಳೆಯೋರ್ವರ ಮನೆಯ ಬೀರುವಿನಲ್ಲಿದ್ದ 200 ಗ್ರಾಂ ತೂಕದ ಚಿನ್ನದ ಆಭರಣ ಹಾಗೂ 28 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿತ್ತು. ಈ ಕುರಿತಂತೆ ಅವರು ಪೊಲೀಸರಿಗೆ ದೂರು ನೀಡಿದ್ದರು.

Bhadravathi: Millions at home. Jewellery stolen in value – Accused arrested! Bhadravati, November 29: Lakhs of rupees were found stolen from a house. In the case of the theft of valuable gold ornaments, the Bhadravati Paper Town police station police have successfully apprehended the culprit.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *