shimoga news | ಶಿವಮೊಗ್ಗ : ಮೋಟಾರ್ ಪಂಪ್ ಸೆಟ್, ಬೈಕ್’ಗಳ ಕಳವು ಪ್ರಕರಣ – ಇಬ್ಬರ ಬಂಧನ!

Shivamogga: Theft of Motor Pump Sets and Motorcycles – Two Arrested! | Shivamogga, November 29: The Tunga Nagar police in Shivamogga have arrested two individuals accused of involvement in the theft of agricultural motor pump sets and motorcycles.

ಶಿವಮೊಗ್ಗ (shivamogga), ನವೆಂಬರ್ 29: ಕೃಷಿ ಮೋಟಾರ್ ಪಂಪ್ ಸೆಟ್ ಗಳ ಜೊತೆಗೆ ಬೈಕ್ ಗಳ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ, ಶಿವಮೊಗ್ಗದ ತುಂಗಾ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ.

ಶಿವಮೊಗ್ಗದ ಅಶೋಕನಗರ ನಿವಾಸಿ ಮಹಮದ್ ಅಫ್ಜಲ್ ಯಾನೆ ಲಂಗ್ಡ್ (19) ಹಾಗೂ ಮಿಳಘಟ್ಟದ ಮನ್ಸೂರ್ ಅಹಮದ್ ಯಾನೆ ಬಬ್ರು (27) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಆರೋಪಿಗಳಿಂದ 4 ಲಕ್ಷ ರೂ. ಮೌಲ್ಯದ 5 ಬೈಕ್ ಗಳು, 5 ಸಾವಿರ ರೂ. ಮೌಲ್ಯದ ಮೋಟಾರ್ ಪಂಪ್ ಸೆಟ್, 18 ಸಾವಿರ ನಗದು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ನವೆಂಬರ್ 29 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆರೋಪಿಗಳ ಬಂಧನದಿಂದ ತುಂಗಾ ನಗರ ಠಾಣೆ ವ್ಯಾಪ್ತಿಯ 1 ಬೈಕ್ ಕಳ್ಳತನ, 1 ಮನೆಗಳ್ಳತನ, 2 ಮೋಟಾರ್ ಪಂಪ್ ಸೆಟ್ ಗಳ ಕಳ್ಳತ ಹಾಗೂ ಅರಸಿಕೆರೆ ವ್ಯಾಪ್ತಿಯಲ್ಲಿ ಮಾಡಿದ್ದ 5 ಬೈಕ್ ಕಳ್ಳತನ ಕೃತ್ಯಗಳು ಬೆಳಕಿಗೆ ಬಂದಿವೆ.

ಡಿವೈಎಸ್ಪಿ ಶೀಲವಂತ್ ನೇತೃತ್ವದಲ್ಲಿ ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್, ಪಿಎಸ್ಐ ಎನ್ ಮಂಜುನಾಥ್, ಸಿಬ್ಬಂದಿಗಳಾದ ಕಿರಣ್ ಮೋರೆ, ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ್, ಹರೀಶ್, ನಿತಿನ್ ಕೆ, ತಮ್ಮಣ್ಣ ಜಂಬಗಿ, ಪ್ರಶಾಂತ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

Shivamogga: Theft of Motor Pump Sets and Motorcycles – Two Arrested! | Shivamogga, November 29: The Tunga Nagar police in Shivamogga have arrested two individuals accused of involvement in the theft of agricultural motor pump sets and motorcycles.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *