ಅಖಾಡದಲ್ಲಿ ಉಳಿದ ಕೆ.ಎಸ್.ಈಶ್ವರಪ್ಪ : ಬಿಜೆಪಿ – ಕಾಂಗ್ರೆಸ್ ಲೆಕ್ಕಾಚಾರವೇನು?

KSEshwarappa who is contesting as a non-party candidate: What is the BJP-Congress calculation? ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆ.ಎಸ್.ಈಶ್ವರಪ್ಪ : ಬಿಜೆಪಿ – ಕಾಂಗ್ರೆಸ್ ಲೆಕ್ಕಾಚಾರವೇನು?

ಶಿವಮೊಗ್ಗ (shivamogga), ಏ. 22: ಶಿವಮೊಗ್ಗ ಲೋಕಸಭಾ ಕ್ಷೇತ್ರದ (shimoga loksabha constituency) ಚುನಾವಣಾ ಕಣ ಕಾವೇರಿದೆ. ಕೊನೆಗೂ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (k s eshwarappa) ನಾಮಪತ್ರ ವಾಪಾಸ್ ಪಡೆದಿಲ್ಲ. ಅಖಾಡದಲ್ಲಿ ಉಳಿಯುವ ಮೂಲಕ, ಬಿಜೆಪಿ ಅಭ್ಯರ್ಥಿಗೆ (bjp) ಸೆಡ್ಡು ಹೊಡೆದಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ‘ಬಂಡಾಯ ರಾಜಕೀಯ’ ಲೆಕ್ಕಾಚಾರ ಜೋರಾಗಿದೆ.

ಚುನಾವಣಾ ಕಣದಿಂದ ಕೆ.ಎಸ್.ಈಶ್ವರಪ್ಪರನ್ನ ಹಿಂದಕ್ಕೆ ಸರಿಸಲು, ಬಿಜೆಪಿ ಹೈಕಮಾಂಡ್ (bjp party) ಸಾಕಷ್ಟು ಕಸರತ್ತು ನಡೆಸಿತ್ತು. ಆದರೆ ಇವ್ಯಾವುದಕ್ಕೂ ಕೆಎಸ್ಇ (kse) ತಲೆಬಾಗಿರಲಿಲ್ಲ. ಸ್ಪರ್ಧೆ ನಿಶ್ಚಿತ. ಯಾವುದೇ ಕಾರಣಕ್ಕೂ ನಾಮಪತ್ರ ಹಿಂದಕ್ಕೆ ಪಡೆಯುವುದಿಲ್ಲ ಎಂದಿದ್ದರು. ( www.udayasaakshi.com )

ಈ ಕಾರಣದಿಂದ ಇತ್ತೀಚೆಗೆ ಬಿಜೆಪಿ ಕೂಡ ಕೆಎಸ್ಇ ಮನವೊಲಿಸುವ ಕಾರ್ಯ ಸ್ಥಗಿತಗೊಳಿಸಿತ್ತು. ಆದಾಗ್ಯೂ ನಾಮಪತ್ರ ಹಿಂಪಡೆಯ ಗಡುವು ಪೂರ್ಣಗೊಳ್ಳುವವರೆಗೆ ಕಾದು ನೋಡಲು ನಿರ್ಧರಿಸಿತ್ತು. ಅವರು ಏನೇ ಆರೋಪ, ಟೀಕೆ-ಟಿಪ್ಪಣಿ ಮಾಡಿದರೂ ಬಿಜೆಪಿ ನಾಯಕರು ಪ್ರತ್ಯಾರೋಪದ ಗೋಜಿಗೆ ಹೋಗಿರಲಿಲ್ಲ.

ಇದೀಗ  ಕೆಎಸ್ಇ ಪಕ್ಷೇತರ (independent) ಸ್ಪರ್ಧೆ ಖಚಿತವಾಗಿದೆ. ಈ ಕಾರಣದಿಂದ ಅವರ ವಿರುದ್ದ ರಾಜಕೀಯ ತಂತ್ರಗಾರಿಕೆ ಆರಂಭಿಸಲು ಬಿಜಪಿ ಮುಂದಾಗಿದೆ. ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವುದರ ಜೊತೆಗೆ, ಟೀಕೆಗಳಿಗೆ ತಕ್ಕ ತಿರುಗೇಟು ನೀಡಲು ನಿರ್ಧರಿಸಿದೆ ಎಂಬ ಮಾಹಿತಿಗಳು ಆ ಪಕ್ಷದ ಉನ್ನತ ಮೂಲಗಳು ತಿಳಿಸುತ್ತವೆ. ( www.udayasaakshi.com )

ಬಂಡಾಯದ ಬಿಸಿ : ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರವರು (bjp – b y raghavendra) ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ (congress – geetha shivarajakumar) ಸವಾಲಿನ ಜೊತೆಯಲ್ಲಿ, ಕೆಎಸ್ಇ ಬಂಡಾಯ ಎದುರಿಸಬೇಕಾಗಿದೆ. ಬಿವೈಆರ್ ಈ ಹಿಂದೆ ಎದುರಿಸಿದ ಮೂರು ಚುನಾವಣೆಗಳಿಗೆ ಹೋಲಿಸಿದರೆ, ಪ್ರಸ್ತುತ ಎಲೆಕ್ಷನ್ ನಲ್ಲಿ ಅವರಿಗೆ ಎಡರುತೊಡರು ಎದುರಾಗುವಂತಾಗಿದೆ.

ನಿರ್ಣಾಯಕ : ಪಕ್ಷೇತರವಾಗಿ ಕಣಕ್ಕಿಳಿದಿರುವ ಕೆಎಸ್ಇಗೆ, ಪ್ರಸ್ತುತ ಚುನಾವಣೆಯು ಅತ್ಯಂತ ಮಹತ್ವದ್ದಾಗಿದೆ. ಅವರ ರಾಜಕೀಯ ಜೀವನದಲ್ಲಿ ನಿರ್ಣಾಯಕವಾಗಿದೆ. ಹಾಗೆಯೇ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರಿಗೂ ಅಗ್ನಿ ಪರೀಕ್ಷೆಯಾಗಿದೆ. ಇದೆಲ್ಲದರ ನಡುವೆ ಬಿಜೆಪಿ ಬಂಡಾಯದ ಲಾಭದ ‘ಗ್ಯಾರಂಟಿ’ ಲೆಕ್ಕಾಚಾರ ಕಾಂಗ್ರೆಸ್ ಪಕ್ಷದ್ದಾಗಿದೆ. ( www.udayasaakshi.com )

ಒಟ್ಟಾರೆ ಪ್ರಸ್ತುತ ಚುನಾವಣೆಯಲ್ಲಿಯೂ (loksabha election) ಶಿವಮೊಗ್ಗ ಲೋಕಸಭಾ ಕ್ಷೇತ್ರ ಮತ್ತೊಮ್ಮೆ ರಾಷ್ಟ್ರ, ರಾಜ್ಯದ ಗಮನ ಸೆಳೆದಿದೆ. ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆಯಾಗುತ್ತಿದ್ದು, ಇದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ, ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಅವರನ್ನು ಆರು ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗಿದೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *