ಶಿವಮೊಗ್ಗ (shivamogga), ಜುಲೈ 25: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ, ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಆಯನೂರು ಸಮೀಪದ ವೀರಗಾರನ ಬೈರನಕೊಪ್ಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಜುಲೈ 27 ರ ಮುಂಜಾನೆ ನಡೆದಿದೆ.
ಶಿವಮೊಗ್ಗದ ಗಾಡಿಕೊಪ್ಪದ ನಿವಾಸಿ, ಖಾಸಗಿ ಬಸ್ ಚಾಲಕ ವೀರೇಶ್ (28) ಮೃತಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಇವರು ಕುಂಸಿ ಕಡೆಯಿಂದ ಬೈಕ್ ನಲ್ಲಿ ಶಿವಮೊಗ್ಗದೆಡೆಗೆ ಆಗಮಿಸುತ್ತಿದ್ದ ವೇಳೆ, ವಾಹನವೊಂದು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ.
ವೀರೇಶ್ ಅವರ ತಲೆ, ಮುಖದ ಭಾಗದಲ್ಲಿ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಕುಂಸಿ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದು, ಅಪಘಾತ ನಡೆಸಿ ಪರಾರಿಯಾದ ವಾಹನ ಚಾಲಕನ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.
Shivamogga, July 25: A biker died on the spot after being hit by an unknown vehicle on the national highway at Veeragaran Bairanakoppa near Ayanur under the jurisdiction of Kumsi police station in Shivamogga taluk in the early hours of July 27

